ಚೀನಾದಲ್ಲಿ ಹುಟ್ಟಿ ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಗೆ ಇಡೀ ಮಾನವಕುಲವೇ ತಲೆಬಾಗಿದೆ. ಯಮಸ್ವರೂಪಿಯಂತೆ ಮನುಷ್ಯರ ಜೀವ ಬಲಿಪಡೆಯುತ್ತಿರುವ ಕೊರೊನಾ ಬಗ್ಗೆ ಚೀನಾದ ಹೊಸ ಅಧ್ಯಯನವು ಒಂದು ಗಂಭೀರ ವಿಚಾರವನ್ನು ಬಹಿರಂಗಪಡಿಸಿದೆ. ಅದುವೇ ನಿಮ್ಮ ರಕ್ತ ಗುಂಪು “ಎ” ಆಗಿದ್ದರೇ ಇತರ ರಕ್ತ ಗುಂಪಿನ ಪ್ರಕಾರಗಳಿಗೆ ಹೋಲಿಸಿದರೆ ನಿಮಗೆ ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ವಿಜ್ಞಾನಿಗಳ ಪ್ರಕಾರ, “ಒ” ರಕ್ತದ ಗುಂಪು ಹೊಂದಿರುವವರು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.
ವಿಶ್ವಾದ್ಯಂತ ‘ಎ’ ರಕ್ತದ ಮಾದರಿ ಹೊಂದಿರುವ ಜನರ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ಅಧ್ಯಯನ ತಿಳಿಸಿದೆ. ಅಲ್ಲದೇ ರಕ್ತದ ಮಾದರಿ ಹೊಂದಿರುವ ಜನರು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕಾಗಿದೆ.
ಒಟ್ಟಾರೆ ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, ಮಾರ್ಚ್ 17 ರ ಹೊತ್ತಿಗೆ, ವಿಶ್ವಾದ್ಯಂತ 184,976 ಕೊರೊನಾ ವೈರಸ್ ಪ್ರಕರಣಗಳು ದೃಢ ಪಟ್ಟಿದ್ದು, 7529 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿರುವ ಜನರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದು, ನಾವು ಯಾವುದೇ ರಕ್ತದ ಗುಂಪಿನವರಾಗಿದ್ದರೂ ನಮ್ಮನ್ನು ನಾವು ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯ.








