ಸೊರಬ : ಸತತ ಸೋಲುಗಳಿಂದ ಬಳಲಿರುವ ಮಾಜಿ ಶಾಸಕ ಮಧುಬಂಗಾರಪ್ಪ ( Madhubangarappa) ಶೀಘ್ರದಲ್ಲೇ ಜೆಡಿಎಸ್ ಗೆ ಗುಡ್ ಬೈ ಹೇಳಲಿದ್ದು, ಕಾಂಗ್ರೆಸ್ ಗೆ ಹಾಯ್ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಪ್ರಸನ್ನ ಕುಮಾರ್ ( Madhubangarappa ) , ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ : ಶಾಸಕ ಎಸ್.ಅಂಗಾರ ಸಾಹೇಬ್ರೇ ಒಮ್ಮೆ ಇತ್ತ ಗಮನಕೊಡಿ
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗುವುದು ಪಕ್ಷದ ಸಂಘಟನೆ ದೃಷ್ಟಿಯಿಂದ ಅನುಕೂಲವಾಗಲಿದೆ. ಜೊತೆಗೆ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಹೇಳಿದರು.
ಅಂದಹಾಗೆ ಮೈತ್ರಿ ಸರ್ಕಾರ ಪತನ ಬಳಿಕ ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯೋಜನೆ ಮಾಡಿದ್ದರು.
ಇದನ್ನೂ ಓದಿ : ಬಂಡೆ ಸಂಸ್ಕೃತಿಗೆ ಆರ್.ಆರ್.ನಗರ ಜನ ಬೆಲೆ ಕೊಡಲ್ಲ : ಆರ್.ಅಶೋಕ್
ಈ ಬಗ್ಗೆ ಕೈ ನಾಯಕರ ಜೊತೆ ಮಧು ಬಂಗಾರಪ್ಪ ಮಾತುಕತೆ ನಡೆಸಿದ್ದರು. ಯುಗಾಧಿ ಬಳಿಕ ಮಧುಬಂಗಾರಪ್ಪ ಸೇರಲು ಪ್ಲಾನ್ ಮಾಡಿಕೊಂಡಿದ್ದರು.
ಆದ್ರೆ ಕೊರೊನಾ ವೈರಸ್ ಅದಕ್ಕೆ ಬ್ರೇಕ್ ಹಾಕಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









