ಬೆಂಗಳೂರು : ನಿಮ್ಮ ಬಳಿ ಬಂಡೆ ಇರಬಹುದು. ಆದ್ರೆ ನಮ್ಮ ಬಳಿ ನಿಮ್ಮಿಂದಲೇ ಬಂದ ಡೈನಾಮೇಟ್ ಗಳಿವೆ. ಅವರೇ ಬಂಡೆಯನ್ನು ಪುಡಿ ಪುಡಿ ಮಾಡ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ( Nalin Kumar Kateel ) , ಡಿ.ಕೆ.ಶಿವಕುಮರ್ ಗೆ ( D.K.Shivakumar ) ತಿರುಗೇಟು ಕೊಟ್ಟಿದ್ದಾರೆ.
ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದೀರಿ, ಇದು ನಡೆಯಲ್ಲ. ನಿಮ್ಮನ್ನ ಬಂಡೆ ಎಂದು ಕರೆಯುತ್ತಾರೆ.
ಆದರೆ ನಮ್ಮ ಬಳಿ ನಿಮ್ಮಿಂದ ಬಂದಿರುವ ಡೈನಾಮೈಟ್ ಗಳಿವೆ. ಆ ಒಂದೊಂದು ಡೈನಾಮೈಟ್ ಗಳು ನಿಮ್ಮನ್ನು ಪುಡಿಪುಡಿ ಮಾಡುತ್ತಾರೆ.
ಇದನ್ನೂ ಓದಿ : ಆರ್.ಆರ್.ನಗರ ಬೈ ಎಲೆಕ್ಷನ್ : ಕಮಲ ಹಿಡಿದ ಕಾಂಗ್ರೆಸ್ ಮುಖಂಡರು
ನೀವು ತಿಹಾರ್ ಜೈಲಿಗೆ ಹೋದಾಗ ಜನ ನೋಡಿದ್ದಾರೆ. ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಹೊರಬಂದಾಗ ಮೆರವಣಿಗೆ, ಕುಂತಾಗ ಮೆರವಣಿಗೆ, ನಿಂತಾಗ ಮೆರವಣಿಗೆ. ಸಾಕು ನಿಮ್ಮ ಮೆರವಣಿಗೆ, ನೀವು ಮನೆಯಲ್ಲಿ ಕೂರಿ ಎಂದು ಜನ ಕೂರಿಸುತ್ತಾರೆ ಎಂದು ಗುಡುಗಿದರು.
ರಾಜರಾಜೇಶ್ವರಿ ನಗರದಲ್ಲಿ ಜಾತಿ ರಾಜಕೀಯ ನಡೆಯಲ್ಲ, ಅಭಿವೃದ್ಧಿ ರಾಜಕೀಯದ ಮೂಲಕ ಮುನಿರತ್ನ ಜನರ ಹೃದಯದಲ್ಲಿ ಇದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಮನೆ, ಮನೆಗೆ ಹೋಗಿ ಜನರ ಕಷ್ಟ ಕೇಳಿದ್ದಾರೆ. ಮುನಿರತ್ನ ಅವರನ್ನು ಪ್ರೀತಿಯಿಂದ ನಮ್ಮ ಪಕ್ಷ ಬರಮಾಡಿಕೊಂಡಿದೆ.
ಇದನ್ನೂ ಓದಿ : ನಾನು ಉತ್ತಮರ ಸಹವಾಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ : ಹೆಚ್ ಡಿಕೆ
ಸಚಿವ ಆರ್.ಅಶೋಕ್ ಮತ್ತು ಅರವಿಂದ ಲಿಂಬಾವಳಿ ನಮ್ಮ ಜೋಡೆತ್ತುಗಳು. ಈ ಜೋಡೆತ್ತುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮುನಿರತ್ನ ಗೆಲ್ಲಿಸುತ್ತಾರೆ.
ರಾಜರಾಜೇಶ್ವರಿ ನಗರದಲ್ಲಿ ಗೆಲ್ಲುವ ಮೂಲಕ ವಿಶ್ವದಾಖಲೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel