ADVERTISEMENT
Saturday, September 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ಸಚಿವ ಕೆ.ಸುಧಾಕರ್ ರಿಂದ ರಾಜ್ಯದಲ್ಲಿ ಕೈಗೊಂಡಿರುವ ಕೊರೊನಾ ತಡೆಗಟ್ಟುವ ಕ್ರಮಗಳ ಮಾಹಿತಿ

admin by admin
March 19, 2020
in Politics, Samagra karnataka
Share on FacebookShare on TwitterShare on WhatsappShare on Telegram

ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಕೊರೊನಾ ತಡೆಗಟ್ಟುವ ಬಗ್ಗೆ ರಾಜ್ಯದಲ್ಲಿ ಕೈಗೊಂಡಿರುವ  ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸದನದಲ್ಲಿ ಮಾತನಾಡಿದ ಕೆ.ಸುಧಾಕರ್, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿಎಂ ಸೂಚನೆ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಎರಡು ತಿಂಗಳಿನಿಂದ ತಪಾಸಣೆ ಮಾಡಲಾಗುತ್ತಿದೆ. ಎ,ಬಿ,ಸಿ ಗ್ರೂಪ್‍ಗಳನ್ನು ಮಾಡಿ ಪ್ರತ್ಯೇಕಗೊಳಿಸಿ ತಪಾಸಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟಲು 200 ಕೋಟಿ ಹಣವನ್ನು ತೆಗೆದು ಇಟ್ಟಿದೆ. ವಿದೇಶಗಳಿಂದ ಬರುವವರ ಬಲಗೈಗೆ ಸ್ಟಾಂಪ್ ಹಾಕಿ, 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ತೀರ್ಮಾನ ಮಾಡಿದ್ದೇವೆ. ಅವರಲ್ಲಿ ಸೋಂಕು ಪತ್ತೆಯಾಗದೆ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಖಾಸಗಿ ರೆಸಾರ್ಟ್ಸ್, ಹೋಟೆಲ್‌ ಅಥವಾ ಆಸ್ಪತ್ರೆಗಳಲ್ಲಿ 15 ದಿನ ಅವರನ್ನು ಗೃಹ ಬಂಧನದಲ್ಲಿ ಇಡಲಾಗುತ್ತದೆ. ಮದುವೆ ಸಮಾರಂಭಗಳು 150 ಜನರಿಗೆ ಮಾತ್ರ ಅಡುಗೆ ಮಾಡಬೇಕು. ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.
ಜಗತ್ತಿನಾದ್ಯಂತ ಒಟ್ಟು 88,881 ಪಾಸಿಟಿವ್ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಆದರಲ್ಲಿ 68,798 ಕೊರೊನಾ ಪೀಡಿತರು ಗುಣಮುಖರಾಗಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಬಂದ ತಕ್ಷಣ ಸತ್ತು ಹೋಗುತ್ತಾರೆ ಎಂದು ಭಯ ಬೀಳುವುದು ಬೇಡ. ಅಮೆರಿಕ, ಇಟಲಿ, ಸ್ಪೇನ್ ದೇಶಗಳು ಎಚ್ಚರ ತಪ್ಪಿದ್ದವು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಬಹಳಷ್ಟು ಇವೆ. ಆ ದೇಶಗಳು ಮೊದಲ ಹಂತ ಬಂದ ಬಳಿಕ ಬಂದ್ ಘೋಷಣೆಯಾಗಿತ್ತು. ರಜೆ ಘೋಷಣೆಯಿಂದ ಸೋಂಕಿತರು ಮಾಲ್‍ಗಳಿಗೆಲ್ಲಾ ಓಡಾಡಿದರು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬಿತ್ತು. ಅವರು ಮಾಡಿದ ತಪ್ಪು ನಾವು ಮಾಡಿಲ್ಲ. ನಮ್ಮಲ್ಲಿ ಇನ್ನು ಎರಡು ಮೂರು ವಾರ ಎಲ್ಲರೂ ಕೊರೊನಾ ನಿಗ್ರಹಕ್ಕೆ ಮುಂದಾಗಬೇಕು. ಜನರ ಬೆಂಬಲ ಸಿಕ್ಕಿದರೆ ಕೊರೊನಾ ತಡೆಗಟ್ಟುವುದರಲ್ಲಿ ಯಶಸ್ವಿ ಆಗಲಿದೆ ಎಂದು ಸುಧಾಕರ್ ಭರವಸೆ ‌ನೀಡಿದರು.
ಈಗಾಗಲೇ ನಾಲ್ವರು ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು,  ಸಚಿವರಾದ ಡಾ. ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಶ್ರೀ ರಾಮುಲು ಮತ್ತು ನಾನು ಈ ತಂಡದ ಸದಸ್ಯರಾಗಿದ್ದು, ನಿತ್ಯ ಕೊರೊನಾ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ.
ಹೊರದೇಶದಿಂದ ಬರುವ ಜನರಿಗೆ ಬಲಗೈಗೆ ಸ್ಟಾಂಪ್ ಹಾಕುತ್ತೇವೆ.15 ದಿನ ಅವರು ಯಾರನ್ನೂ ಸಂಪರ್ಕ ಮಾಡಬಾರದು ಎಂಬ ಆದೇಶ ನೀಡಿದ್ದೇವೆ. ದೇಶದಲ್ಲಿ 54 ಲ್ಯಾಬ್ ಇದ್ದು, ಅದರಲ್ಲಿ 5 ನಮ್ಮ ರಾಜ್ಯದಲ್ಲಿವೆ. ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಲ್ಯಾಬ್ ಗಳಿವೆ. ಪ್ರಾದೇಶಿಕ ವಿಭಾಗವಾರು ಲ್ಯಾಬ್‍ಗಳನ್ನು ಹೆಚ್ಚಳ ಮಾಡಿ‌‌ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದ್ದು, ಹುಬ್ಬಳ್ಳಿ, ಮಂಗಳೂರು ಸಹಿತ ಇನ್ನೂ ಕೆಲವು ಕಡೆ ಪ್ರಾದೇಶಿಕ ವಿಭಾಗವಾರು ಲ್ಯಾಬ್‍ಗಳನ್ನು ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕೊರೋನಾ ವೈರಸ್ ತಡೆಗಟ್ಟಲು ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಎನ್‍ಜಿಒಗಳಿಗೆ ಪ್ರೋತ್ಸಾಹ ಧನ ಮತ್ತು ವಿಮಾ ಸೌಲಭ್ಯ ನೀಡಲು‌ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ಸುಧಾಕರ್ ಅವರ ಮಾತುಗಳನ್ನು ಆಲಿಸಿದ ನಂತರ ಪ್ರತಿಪಕ್ಷ ಕಾಂಗ್ರೆಸ್ ನ ಸದಸ್ಯರಾದ ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಪ್ರಿಯಾಂಕ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ  ಮತ್ತಿತರರು ಸರ್ಕಾರದ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Related posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

September 26, 2026
ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಿದ್ದರಾಮಯ್ಯ ನಮ್ಮ ಆರ್ಮಿ ಕ್ಯಾಪ್ಟನ್, 2028ಕ್ಕೆ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ: ಜಾರಕಿಹೊಳಿ ಸಿದ್ದರಾಮಯ್ಯ ದೋಸ್ತಿ ಭದ್ರ- ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ಸಾಹುಕಾರ್

September 26, 2026
Tags: AssemblyCorona VirusK.SudhakarPrecautionary
ShareTweetSendShare
Join us on:

Related Posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

by Shwetha
September 26, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದ ಹಿರಿಯ ಶಾಸಕರಿಂದಲೇ ಮತ್ತೆ ಭಾರಿ ಮುಜುಗರ ಎದುರಾಗಿದೆ. ಈ ಹಿಂದೆ ವಸತಿ ಇಲಾಖೆಯ ಅವ್ಯವಹಾರದ ಬಗ್ಗೆ ಧ್ವನಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಿದ್ದರಾಮಯ್ಯ ನಮ್ಮ ಆರ್ಮಿ ಕ್ಯಾಪ್ಟನ್, 2028ಕ್ಕೆ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ: ಜಾರಕಿಹೊಳಿ ಸಿದ್ದರಾಮಯ್ಯ ದೋಸ್ತಿ ಭದ್ರ- ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ಸಾಹುಕಾರ್

by Shwetha
September 26, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಸರಣಿ ವದಂತಿಗಳಿಗೆ ಮತ್ತು ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತೆರೆ ಎಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಮಾರುಕಟ್ಟೆಯಲ್ಲಿ ಹಸ್ತಕ್ಕಿಂತ ಕಮಲವೇ ಶ್ರೀಮಂತ:ಕಾಂಗ್ರೆಸ್ ಇಡೀ ದೇಶಕ್ಕೆ ಮಾಡಿದ ಖರ್ಚಿಗಿಂತ ಬಂಗಾಳದ ಮೇಲೆ ಬಿಜೆಪಿ ಸುರಿದ ಹಣವೇ ಹೆಚ್ಚು

by Shwetha
September 26, 2026
0

ನವದೆಹಲಿ: ಚುನಾವಣಾ ರಾಜಕಾರಣದಲ್ಲಿ ಕೇವಲ ಸಿದ್ಧಾಂತ ಮತ್ತು ಭಾಷಣಗಳಷ್ಟೇ ಅಲ್ಲ, ಆರ್ಥಿಕ ಶಕ್ತಿಯೂ ಎಷ್ಟು ಪ್ರಬಲ ಪಾತ್ರ ವಹಿಸುತ್ತದೆ ಎನ್ನುವುದು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಅಂಕಿ...

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

ಉಳ್ಳವರಿಗೆ ಗ್ಯಾರಂಟಿ ರದ್ದು ಮಾಡಬೇಕಾ, ಬಡವರಿಗೆ ಮಾತ್ರ ಭಾಗ್ಯ ಸೀಮಿತವಾಗಲಿ: ಬಿಜೆಪಿ ಶಾಸಕರ ಪ್ರಸ್ತಾವನೆಗೆ ಡಿಕೆಶಿ ಖಡಕ್ ಕೌಂಟರ್

by Shwetha
September 25, 2026
0

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಭವಿಷ್ಯದ ಬಗ್ಗೆ ಈಗ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಬರಗಾಲದ ನೆಪವೊಡ್ಡಿ ಗ್ಯಾರಂಟಿ ಯೋಜನೆಗಳನ್ನು ಕೇವಲ ಬಡವರಿಗಷ್ಟೇ ಅಂದರೆ ಬಿಪಿಎಲ್...

ಬಿಜೆಪಿ ಉಸ್ತುವಾರಿಗಳ ಬದಲಾವಣೆ ಕೇವಲ ಕಣ್ಣೊರೆಸ್ಸು ತಂತ್ರವೇ:ನವೆಂಬರ್ ನಲ್ಲಿ ಅಧ್ಯಕ್ಷರು ಬದಲಾಗದಿದ್ದರೆ ಎಲ್ಲವೂ ವ್ಯರ್ಥ-ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ

ಬಿಜೆಪಿ ಉಸ್ತುವಾರಿಗಳ ಬದಲಾವಣೆ ಕೇವಲ ಕಣ್ಣೊರೆಸ್ಸು ತಂತ್ರವೇ:ನವೆಂಬರ್ ನಲ್ಲಿ ಅಧ್ಯಕ್ಷರು ಬದಲಾಗದಿದ್ದರೆ ಎಲ್ಲವೂ ವ್ಯರ್ಥ-ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ

by Shwetha
September 25, 2026
0

ಕರ್ನಾಟಕ ಬಿಜೆಪಿ ರಾಜಕಾರಣದಲ್ಲಿ ಹೈಕಮಾಂಡ್ ಮಹತ್ವದ ಬದಲಾವಣೆ ಮಾಡಿದ್ದು, ರಾಜ್ಯ ಉಸ್ತುವಾರಿಗಳನ್ನೇ ಬದಲಿಸಿ ಹೊಸಬರಿಗೆ ಪಟ್ಟ ಕಟ್ಟಿದೆ. ರಾಧಾ ಮೋಹನ್ ದಾಸ್ ಅಗರವಾಲ್ ಮತ್ತು ಸುಧಾಕರ್ ರೆಡ್ಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram