ಆರ್ ಆರ್ ನಗರ ಕ್ಷೇತ್ರದ ಉಪಕದನ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಡಿಕೆ ರವಿ ಪತ್ನಿ ಕುಸುಮ ಹಾಗೂ ಬಿಜೆಪಿಯಿಂದ ಮುನಿರತ್ನ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ನವೆಂಬರ್ 3ರಂದು ಮತದಾನ ಕೂಡ ನಡೆಯಲಿದೆ.

ಇದರ ಬೆನ್ನಲ್ಲೇ ಇದೇ ಕ್ಷೇತ್ರದ ಮತದಾರರಿಗೆ ಅನಾಮಧೇಯ ನಂಬರ್ ಗಳಿಂದ ಕರೆ ಮಾಡುತ್ತಿರುವ ಆಗಂತುಕರು, ನಿಮ್ಮ ವೋಟರ್ ಐಡಿ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಹೇಳಿ ಎಂಬುದಾಗಿ ಕೇಳ್ತಾ ಇದ್ದಾರಂತೆ.

ಕ್ಷೇತ್ರದ ಮತದಾರರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ನಿಮ್ಮ ವೋಟರ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಮತದಾರರು ಚುನಾವಣಾಧಿಕಾರಿಗಳಿಗೆ ಕೆರ ಮಾಡಿ ಕೂಡ ದೂರನ್ನು ನೀಡಿರುವುದಾಗಿ ತಿಳಿದು ಬಂದಿದೆ.
ಡಿಸಿಎಂ ಗೋವಿಂದ ಕಾರಜೋಳ ಕುಟುಂಬದ ಒಟ್ಟು 8 ಮಂದಿಗೆ ಕೊರೊನಾ ಪಾಸಿಟಿವ್
ಈ ಮೊದಲಿನ ವಿಧಾನಸಭಾ ಚುನಾವಣೆ ವೇಳೆ ಅಕ್ರಮ ವೋಟರ್ ಐಡಿ ಕಾರ್ಡ್ ಜಾಲವೇ ಪತ್ತೆಯಾಗಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಮುನಿರತ್ನ ಪಾತ್ರವಿಲ್ಲ ಎಂಬುದಾಗಿ ಕೋರ್ಟ್ ಅರ್ಜಿಯನ್ನು ವಜಾಕೂಡ ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಆರ್ ಆರ್ ನಗರ ಕ್ಷೇತ್ರದ ಮತದಾರರು ಅಪರಿಚಿತರು ತಮ್ಮ ವೋಟರ್ ಐಡಿ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದು, ಪೊಲೀಸರು ಅಪರಿಚಿತರ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








