Amazon prime
ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಭೀಮಸೇನ ನಳಮಹರಾಜ ಚಿತ್ರದ ಮೋಷನ್ ಪೋಸ್ಟರ್ ಅನ್ನು ಅಮೇಜಾನ್ ಪ್ರೈಂ ವಿಡಿಯೋ ಅನಾವರಣಗೊಳಿಸಿದೆ.
ಚಿತ್ರದಲ್ಲಿ ಕಾರ್ತಿಕ್ ಸರಗೂರ್ ನಿರ್ದೇಶಿಸಿರುವ ಈ ಚಿತ್ರದ ತಾರಾಗಣದಲ್ಲಿ ತಾರೆಯರಾದ ಅರವಿಂದ್ ಐಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ ಮತ್ತು ಆದ್ಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕನ್ನಡದ ಕೌಟುಂಬಿಕ ಮನೋರಂಜನೆ ಭೀಮಸೇನ ನಳಮಹರಾಜ ದ ನೇರ ಪ್ರಸಾರದ ಜಾಗತಿಕ ಪ್ರಥಮ
ಪ್ರದರ್ಶನದ ವೀಕ್ಷಣೆಯನ್ನು ಅಕ್ಟೋಬರ್ 29 ರಿಂದ ಪ್ರತ್ಯೇಕವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಾಡಬಹುದು.
ಭೀಮಸೇನ ನಳಮಹರಾಜ ಚಿತ್ರವು ಅಕ್ಟೋಬರ್ 29 ರಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ವೀಕ್ಷಣೆಗೆ ಸಿದ್ಧವಾಗಿದೆ. ಬಿಡುಗಡೆಯಾದ ಮೋಷನ್ ಪೋಸ್ಟರ್‌ನಲ್ಲಿ ಅರವಿಂದ್ ಅಯ್ಯರ್ ಅವರು ಬಾಣಸಿಗರ ಟೋಪಿ ಧರಿಸಿದ್ದು ವಿಭಿನ್ನ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ.
ಕಥೆಯಲ್ಲಿ ಅತ್ಯಂತ ಪ್ರೀತಿಸುವ ಗಂಡನ ಪಾತ್ರವನ್ನು ನಿರ್ವಹಿಸುತ್ತಿದ್ದು ಪ್ರೇಕ್ಷಕರನ್ನ ಭರ್ಜರಿಯಾಗಿ ಮನರಂಜಿಸಲಿದೆ ‘ಭೀಮಸೇನ ನಳಮಹರಾಜ’ 4 ವರ್ಷಗಳ ನಂತರ ಅರವಿಂದ್ ಅಯ್ಯರ್ ಮತ್ತೆ ತೆರೆಗೆ ಬರುವುದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ, ಹೊಸ ಹಾಗೂ ವಿಭಿನ್ನವಾದ ಲುಕ್ ನಲ್ಲಿ ಅರವಿಂದ್ ಅಯ್ಯರ್ ಕಾಣಿಸಿಕೊಳ್ಲಲಿದ್ದಾರೆ.
ಕಾರ್ತಿಕ್ ಸರಗೂರ್ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಿಸಿದ್ದಾರೆ. ಒಂದು ಭಕ್ಷ್ಯವು ಅದರ ಸಂಪೂರ್ಣ ಸ್ವರೂಪಕ್ಕೆ ಬರಲು ವಿವಿಧ ಪದಾರ್ಥಗಳ ಸಂಯೋಜನೆಯನ್ನು ಒಳಗೊಂಡಿರುವಂತೆಯೇ ನಮ್ಮ ಜೀವನದಲ್ಲಿಯೂ ಅನೇಕ ಸ್ನೇಹಿತರು ಮತ್ತು ವೈರಿಗಳು ಕಾಣಸಿಗುತ್ತಾರೆ.
ಉತ್ತಮ ಖಾದ್ಯಕ್ಕಾಗಿ ಸರಿಯಾದ ರೀತಿಯ ಪದಾರ್ಥಗಳನ್ನು ಹೊಂದಿರುವಂತೆ, ಜೀವನದಲ್ಲಿ ಸರಿಯಾದ ಜನರನ್ನು
ತನ್ನ ಸುತ್ತಲೂ ಹೊಂದಿರುವುದು ಅಷ್ಟೇ ಮುಖ್ಯವಾಗಿದೆ. ಎಂಬು ಒಳಾರ್ಥವನ್ನ ಸಿನಿಮಾ ಹೊಂದಿದೆ.
Amazon prime
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








