Happy Birthday Prem
ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಪ್ರೇಮ್ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟ ಹಾಗೂ ನಿರ್ಮಾಪಕನಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಷಯಗಳ ವiಹಾಪೂರವೇ ಹರಿದುಬರುತ್ತಿದೆ. ಚಿತ್ರರಂಗದವರು ಪ್ರೇಮ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಸುತ್ತಿದ್ದಾರೆ.
ಚಂದನವನದಲ್ಲಿ ವಿಭಿನ್ನ ಸಿನಿಮಾಗಳಿಂದಲೇ ಗಮನ ಸೆಳೆಯುವ ಪ್ರೇಮ್ ಅವರ ಮತ್ತೊಂದು ವಿಶೇಷ ಅಂದ್ರೆ ಸಿನಿಮಾದ ಪ್ರಮೋಶನ್. ಹೌದು ಪ್ರೇಮ್ ಅವರು ತಮ್ಮ ನಿರ್ದೇಶನದ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಕ್ರೇಜ್ ಕ್ರಿಯೇಟ್ ಮಾಡೋದ್ರಲ್ಲಿ ನಂ. 1.
ನಟ ಹಾಗೂ ನಿರ್ದೇಶಕ ಪ್ರೇಮ್ ಹಲವಾರು ಹಿಟ್ ಸಿನಿಮಾಗಳನ್ನ ಸ್ಯಾಂಡಲ್ ವುಡ್ ಗೆ ಕೊಟ್ಟಿದ್ದಾರೆ. ಆದ್ರೆ ಅದೆಲ್ಲದ್ದಕ್ಕಿಂತ ಪ್ರೇಮ್ ಅವರಿಗೆ ಹೆಚ್ಚು ಯಶಸ್ಸು, ಹೆಸರು ಕೀರ್ತಿ ತಂದುಕೊಟ್ಟ ಸಿನಿಮಾ ಅಂದ್ರೆ ಅದೇ ಜೋಗಿ. ಹೌದು ತಾಯಿ ಸೆಂಟಿಮೆಂಟ್, ಪಾತಕ ಜಗತ್ತು, ಲವ್ ಸ್ಟೋರಿ ಹೀಗೆ ಎಲ್ಲದರ ಮಿಶ್ರಣವಾಗಿದ್ದ ಜೋಗಿ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು. ಗಲ್ಲಾ ಪೆಟ್ಟಿಗೆ ಓಚಿದ್ದ ಬ್ಲಾಕ್ ಬಾಸ್ರ್ ಜೋಗಿ ಸಿನಿಮಾ ಈಗಲೂ ಅದೇ ಕ್ರೇಜ್ ಮೇಂಟೇನ್ ಮಾಡಿದೆ. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೆನ್ ಸೇಷನ್ ಕ್ರಿಯೇಟ್ ಮಾಡಿತ್ತು. ಜೋಗಿ ಪ್ರೇಮ್ ಆಕ್ಷನ್ ಕಟ್, ಹ್ಯಾಟ್ರಿಕ್ ಹೀರೋ ಶಿವಣ್ಣನ ನಟನೆ ಮೋಡಿ ಮಾಡಿತ್ತು. ಯಾರ ಬಾಯಲ್ಲಿ ನೋಡಿದ್ರು ಜೋಗಿ ಜೋಗಿ ಎನ್ನುವಷ್ಟರ ಮಟ್ಟಿಗೆ ಈ ಸಿನಿಮಾ ಟ್ರೆಂಡ್ ಸೃಷ್ಟಿಸಿತ್ತು.
ಮೂಲತಹ ಮಂಡ್ಯದ ಮದ್ದೂರಿನವರಾದ ಪ್ರೇಮ್ ಅವರ ನಿಜವಾದ ಹೆಸರು ಕಿರಣ್ ಕುಮಾರ್. ಇವರು ಜನಿಸಿದ್ದು, 1976ರ ಅಕ್ಟೋಬರ್ 22 ರಂದು. ತಂದೆ ರಾಜಪ್ಪ ತಾಯಿ ಭಾಗ್ಯಮ್ಮ. ಪ್ರೇಮ್ 2007ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ರಕ್ಷಿತಾ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಸೂರ್ಯ ಎಂಬ ಮುದ್ದಾದ ಮಗ ಇದ್ದಾನೆ.
ಅದ್ಭುತ ಸಿನಿಮಾಗಳನ್ನ ಚಂದನವನಕ್ಕೆ ಕೊಟ್ಟ ಮಂಡ್ಯ ಹೈದನ ಸಿನಿಮಾ ಜರ್ನಿ ಹೇಗಿದೆ ಗೊತ್ತಾ..?
ಆರಂಭದಲ್ಲಿ ಕೆಲ ವಿóಣುವರ್ಧನ್ ಅವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ ಪ್ರೇಮ್ ಅವರು ಬಳಿಕ 2003ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಿಜಜೀವನದ ಡಾನ್ ಗಳು ಕಾಣಿಸಿಕೊಂಡಿದ್ದು ಸಹ ಸಿನಿಮಾಗೆ ದೊಡ್ಡ ಮಟ್ಟದ ಹೈಪ್ ತಂದುಕೊಟ್ಟಿತ್ತು. ಇದಾದ ಬಳಿಕ 2003ರಲ್ಲೇ ಮತ್ತೊಂದು ಸೂಪರ್ ಹಿಟ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರು ಪ್ರೇಮ್. ಅದೇ ಎಕ್ಸ್ ಕ್ಯೂಸ್ ಮಿ. ಟ್ರಯಾಂಗಲ್ ಲವ್ ಸ್ಟೋರಿ ಜೊತೆಗೆ ಕಾಮಿಡಿ, ತಾಯಿ ಸೆಂಟಿಮೆಂಟ್ ಎಲ್ಲದರ ಮಿಶ್ರಣವಾಗಿದ್ದ ಈ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾ ಈಗಲೂ ಅನೇಕರ ಫೇವರೇಟ್. ಈ ಸಿನಿಮಾ ಆಗ ಸಖತ್ ಕ್ರೇಜ್ ಸೃಷ್ಟಿಸಿತ್ತು. ಈ ಚಿತ್ರದ ಹಾಡುಗಳು ಒಂದೊಂದು ಸೂಪರ್ ಹಿಟ್ ಆಗಿದ್ದವು. ಆರ್ ಪಿ ಪಟ್ನಾಯಕ್ ಅವರ ಸಂಯೋಜನೆಯ ಹಾಡುಗಳಿಗೆ ಈಗಲೂ ಅಷ್ಟೇ ಕ್ರೇಜ್ ಇದೆ. ಇದಾದ ಬಳಿಕವೇ ಮೂರನೇ ಸಿನಿಮಾ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿದ್ದ ಜೋಗಿಗೆ ಆಕ್ಷನ್ ಕಟ್ ಹೇಳಿದ್ರು ಪ್ರೇಮ್. 2005ರಲ್ಲಿ ತೆರೆಕಂಡ ಈ ಬ್ಲಾಕ್ ಬಾಸ್ಟರ್ ಸಿನಿಮಾದಿಂದ ಪ್ರೇಮ್ ಅವರ ಖದರೇ ಬದಲಾಗಿಹೋಯ್ತು. ಈ ಚಿತ್ರದ ಮೂಲಕ ಪ್ರೇಮ್ ಅವರು ಚಂದನವನದ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದರು.
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದ ಪ್ರೇಮ್ ಅವರು ಡೈರೆಕ್ಷೆನ್ ಜೊತೆಗೆ ನಟನೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದರು.
ಹೌದು 2008ರಲ್ಲಿ ತೆರೆಕಂಡ ಈ ಪ್ರೀತಿ ಯಾಕೆ ಭೂಮಿ ಮೇಲಿದೆ… ಈ ಚಿತ್ರದ ಕ್ಲೈಮ್ಯಾಕ್ಸ್ ಜನರ ತಲೆಗೆ ಹುಳ ಬಿಟ್ಟಿತ್ತಾದ್ರೂ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ವು. ಈ ಸಿನಿಮಾ ಕಥೆಗಿಂತ ಹಾಡುಗಳು ಹಾಗೂ ಪ್ರಮೋಶನ್ ನಿಂದಲೇ ಸದ್ದು ಮಾಡಿದ್ದು ಹೆಚ್ಚು. ಈ ಚಿತ್ರದಲ್ಲಿ ಬಾಲಿವುಡ್ ನಟಿ ಮಲೈಕಾ ಅರೋರಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಸೇಷ. ಅಷ್ಟೇ ಅಲ್ಲ ಈ ಚಿತ್ರವನ್ನೂ ಖುದ್ದು ಪ್ರೇಮ್ ಅವರೇ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ಮತ್ತೆ 2010 ರಲ್ಲಿ ತೆರೆಕಂಡು ಅತ್ಯಂತ ಯಶಸ್ಸು ಕಂಡ ಹಿಟ್ ಸಿನಿಮಾ ರಾಜ್ ಗೂ ಆಕ್ಷನ್ ಕಟ್ ಹೇಳಿದ್ರೂ. ಈ ಸಿನಿಮಾವೂ ಸಹ ಅತ್ಯಂತ ಯಶಸ್ವಿಯಾಗಿತ್ತು. ಚಿತ್ರದ ಹಾಡುಗಳಿಗೆ ಜನರು ಫಿದಾ ಆಗಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆ ಜಾದೂ ಮಾಡಿತ್ತು. ಮತ್ತೆ 2011ರಲ್ಲಿ ಶಿವಣ್ಣ ಅಭಿನಯದ ಜೋಗಯ್ಯ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ರು ಪ್ರೇಮ್.
ಇದಾದ ಬಳಿಕ ನಿರ್ದೇಶನ ಮಾಡದೇ ಹೀರೋ ಆಗಿ ನಟಿಸಿದ ಚಿತ್ರ ಅಂದ್ರೆ ಅದು 2012ರಲ್ಲಿ ತೆರೆಕಂಡ ಪ್ರೇಮ್ ಅಡ್ಡಾ. ಈ ಚಿತ್ರ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿತ್ತು. ತಮಿಳು ಚಿತ್ರ ಸುಬ್ರಮಣಿಯಪುರಂ ಸಿನಿಮಾದ ರೀಮೇಕ್ ಆಗಿದ್ದ ಪ್ರೇಮ್ ಅಡ್ಡದಲ್ಲಿ ಪ್ರೇಮ್ ( Prem) ಹಾಗೂ ಕೃತಿ ಕರಬಂದಾ ಕಾಂಬಿನೇಷನ್ ಅಭಿಮಾನಿಗಳ ಮನಗೆದ್ದಿತ್ತು. ಇಬ್ಬರ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಈ ಚಿತ್ರ ಸಾಧಾರಣ ಯಶಸ್ಸು ಕಂಡಿತ್ತು. ಇದಾದ ಬಳಿಕ ನಿರ್ಮಾಪಕನಾದ ಪ್ರೇಮ್ ಅವರು 2014ರಲ್ಲಿ ಡಿಕೆ ಸಿನಿಮಾಗೆ ಬಂಡವಾಳ ಹೂಡಿದರು. ಅಲ್ಲದೇ ಪ್ರೇಮ್ ಡ್ರೀಮ್ಸ್ ಬ್ಯಾನರ್ ನ ಅಡಿ ಮೂಡಿಬಂದ ಈ ಚಿತ್ರದಲ್ಲಿ ನಾಯಕನಟನಾಗಿ ಮಿಂಚಿ ಅಭಿಮಾನಿಗಳನ್ನ ರಂಜಿಸಿದ್ದರು.
2018ರಲ್ಲಿ ತೆರೆಕಂಡ ದಿ ವಿಲನ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು ಪ್ರೇಮ್. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ಬಳಿಕ 2018ರಲ್ಲೇ ತೆರೆಕಂಡ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಹಾಡಿಗೆ ಸಾಹಿತ್ಯ ರಚಿಸಿದ್ದರು. ಪ್ರಸ್ತುತ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಪ್ರೇಮ್. ಈ ಚಿತ್ರದಲ್ಲಿ ತಮ್ಮ ಬಾಮೈದ ಅಂದ್ರೆ ರಕ್ಷಿತಾ ಅವರ ಸಹೋದರ ರಾಣಾನನ್ನ ಚಂದನವನಕ್ಕೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ ಪ್ರೇಮ್. ಈ ಸಿನಿಮಾದ ಶೂಟಿಂಗ್ ಇನ್ನೂ ನಡೀತಾಯಿದೆ.
ಒಟ್ಟಾರೆಯಾಗಿ ಕೇವಲ ನಿರ್ದೇಶನ , ನಿರ್ಮಾಪಕರಾಗಿ ಮಾತ್ರವೇ ಪ್ರೇಮ್ ಗುರುತಿಸಸಿಕೊಂಡು ಹೆಸರು ಗಳಿಸಿಲ್ಲ. ಜೊತೆಗೆ ನಟನೆಯಲ್ಲೂ ಮೋಡಿ ಮಾಡಿರುವ ಪ್ರೇಮ್ ಅನೇಕ ಪಹಾಡುಗಳನ್ನ ಸಂಯೋಜಿಸಿ ಸಾಹಿತಿ ರಚಿಸಿ , ಹಿನ್ನೆಲೆ ಧ್ವನಿ ನೀಡುವ ಮೂಲಕ ಚಂದನವನದಲ್ಲಿ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತರಾದ ಪ್ರೇಮ್ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು. Happy Birthday Prem
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel