ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಚಿರುವಿನ ಆಗಮನ – Junior Chiru Sarja family
ಬೆಂಗಳೂರು, ಅಕ್ಟೋಬರ್22: ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. Junior Chiru Sarja family
ನಿಶ್ಚಿತಾರ್ಥದ ದಿನವೇ ಮೇಘನಾ ಮಗುವಿಗೆ ಜನ್ಮ ನೀಡಿದ್ದು, ಎಲ್ಲರ ನಿರೀಕ್ಷೆಯಂತೆ ಗಂಡು ಮಗು ಜನಿಸಿದೆ. ಈ ಮೂಲಕ ಜೂನಿಯರ್ ಚಿರು ಆಗಮಿಸಿದಂತಾಗಿದ್ದು,
ಜ್ಯೂನಿಯರ್ ಚಿರುವಿನ ಎಂಟ್ರಿಯಿಂದ ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಮೇಘನಾ ರಾಜ್ ಅವರನ್ನು ನಿನ್ನೆ ನಗರದ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೇಘನಾ ರಾಜ್ ಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಚಿರಂಜೀವಿ ಸರ್ಜಾ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಧೃವ ಸರ್ಜಾ ಮದ್ದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂದು ಬೆಳಗ್ಗೆ 11.07 ಕ್ಕೆ ಮೇಘನಾ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ಮೇಘನಾ ಮತ್ತು ಮಗುವಿನ ಜೊತೆಗೆ ಮೇಘನಾ ತಾಯಿ ಪ್ರಮೀಳಾ ಜೋಷಾಯ್, ತಂದೆ ಸುಂದರ್ ರಾಜ್ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಜೊತೆಗಿದ್ದಾರೆ.
ಧ್ರುವ ಸರ್ಜಾ ಅವರು ಈಗಾಗಲೇ ಜೂನಿಯರ್ ಚಿರು ವಿಗೆ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಸುಮಾರು 10 ಲಕ್ಷ ರೂ.ನೀಡಿ ಬೆಳ್ಳಿಯ ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಿದ್ದಾರೆ.
ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಸಂದರ್ಭದಲ್ಲಿ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ