puneeth rajkumar
“ಯುರತ್ನ” ಚಿತ್ರೀಕರಣ ಮುಗಿಯುತ್ತಿದ್ದಂತೆ “ಜೇಮ್”್ಸ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಉತ್ತರ ಕರ್ನಟಕಕ್ಕೆ ಚಿತ್ರೀಕರಣಕ್ಕಾಗಿ ತೆರಳಿದ್ದಾರೆ. ಕೊಪ್ಪಳದಲ್ಲಿ ಪ್ರಸ್ತುತ ಶೂಟಿಂಗ್ ನಡೆಯುತ್ತಿದೆ. ಈ ನಡುವೆ ಬ್ಯುಸಿ ಶೆಡ್ಯೂಲ್ ನಲ್ಲೂ ಬಿಡುವು ಮಾಡಿಕೊಂಡ ಪುನೀತ್ ಆನೆಗುಂದಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದಿದ್ದಾರೆ. ಈ ವೇಳೆ ಅಪ್ಪುನನ್ನ ನೋಡಿ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಭಿಮಾನಿಗಳ ಜೊತೆ ಪುನೀತ್ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಇನ್ನು ಇಂದು ಬೆಳಗ್ಗೆ ಕೊಪ್ಪಳ್ಳ ಪೊಲೀಸರು ನಟಿಸುತ್ತಿದ್ದ ಕೊರೊನಾ ಜಾಗೃತಿ ಕಾರ್ಯಕ್ರದಲ್ಲಿಯೂ ಪುನೀತ್ ಭಾಗಿಯಾಗಿ, ಕೊರೊನಾ ಜಾಗೃತಿ ಮೂಡಿಸಿ ಅಭಿಮಾನಿಗಳ ಮೆಚ್ಚುಗೆಗಿ ಪಾತ್ರರಾಗಿದ್ದರು.
ಸದ್ಯ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಪುನೀತ್ ಬಿಡುವು ಸಿಕ್ಕಾಗೆಲ್ಲಾ ಸುಂದರ ಪ್ರದೇಶಗಳಿಗೆ ಭೀಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ತುಂಗಭದ್ರಾ ಡ್ಯಾಂಗೆ ಭೇಟಿ ಕೊಟ್ಟಿದ್ದರು ಅಪ್ಪು. ಒಟ್ಟಾರೆ ಜೇಮ್ಸ್ ಸಿನಿಮಾ ಕಳೆದ ಒಂದೆರೆಡು ವರ್ಷಗಳಿಂದ ಭಾರೀ ಸದ್ದು ಮಾಡುತ್ತಿದ್ದ ಸಿನಿಮಾ. ಲಾಕ್ ಡೌನ್ ನಿಂದಾಗಿ ಚಿತ್ರೀಕರಣಗಳು ಬಂದ್ ಆಗಿ ಯುವರತ್ನ ಶೂಟಿಂಗ್ ತಡವಾಯ್ತು. ಹೀಗಾಗಿ ಜೇಮ್ಸ್ ನ ಚಿತ್ರೀಕರಣ ತಡವಾಗಿ ಆರಂಭವಾಗಿದೆ. ಈ ಚಿತ್ರದಲ್ಲಿ “ರಾಜಕುಮಾರ”ದ ಸೂಪರ್ ಜೋಡಿ ಮತ್ತೆ ಒಂದಾಗಿದೆ. ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಅವರು ಮತ್ತೆ ಅಪ್ಪುಗೆ ಜೋಡಿಯಾಗಲಿದ್ದಾರೆ.
puneeth rajkumar








