ಐಪಿಎಲ್ 2020 – ಕೋವಿಡ್ ಟೆಸ್ಟ್ ಕ್ವೀನ್ ಪ್ರೀತಿ ಝಿಂಟಾ..!
ಐಪಿಎಲ್ 2020 ಕೋವಿಡ್ ಮಾರ್ಗಸೂಚಿಯ ಪ್ರಕಾರ ಯುಎಇನಲ್ಲಿ ನಡೆಯುತ್ತಿದೆ.
ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಗೆ ಕೊರೋನಾ ಸೋಂಕು ಕಾಟ ಕೊಟ್ಟಿತ್ತು.
ಸಿಎಸ್ ಕೆ ತಂಡದ ಇಬ್ಬರು ಆಟಗಾರರು ಮತ್ತು 11 ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಆತಂಕ ಮೂಡಿಸಿತ್ತು.
ಇನ್ನುಳಿದಂತೆ ಐಪಿಎಲ್ ಗೆ ಯಾವುದೇ ತೊಂದರೆಯಾಗಿಲ್ಲ.
ಜೈವಿಕ ಸುರಕ್ಷತೆಯೊಂದಿಗೆ ನಡೆಯುವ ಐಪಿಎಲ್ ಟೂರ್ನಿಗೆ ಯಾವುದೇ ರೀತಿಯ ದಕ್ಕೆಯಾಗಿಲ್ಲ.
ಟೂರ್ನಿಗೆ ಅಡ್ಡಿಯಾಗಬಾರದು ಅಂತ ಬಿಸಿಸಿಐ ಕಠಿಣ ಕ್ರಮದೊಂದಿಗೆ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ.
ಅಲ್ಲದೆ ಯುಎಇ ಸರ್ಕಾರ ಮತ್ತು ಯುಎಇ ಕ್ರಿಕೆಟ್ ಸಂಸ್ಥೆಯೂ ಬಿಸಿಸಿಐಗೆ ಸಾಥ್ ನೀಡಿದೆ.
ಅಂದ ಹಾಗೇ ಐಪಿಎಲ್ ಟೂರ್ನಿಯಲ್ಲಿ ಕೋವಿಡ್ ಟೆಸ್ಟ್ ಗೆ ಬಿಸಿಸಿಐ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ.
ಐಪಿಎಲ್ ಟೂರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಪ್ರತಿ ನಾಲ್ಕು ದಿನಕ್ಕೊಮೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.
ಆಟಗಾರರು ಸೇರಿದಂತೆ ಯಾರೂ ಕೂಡ ಕೋವಿಡ್ ಶಿಷ್ಟಚಾರಗಳನ್ನು ಉಲ್ಲಂಘಣೆ ಮಾಡಿಲ್ಲ.
ಹೀಗಾಗಿ ಐಪಿಎಲ್ ಅಡೆತಡೆ ಇಲ್ಲದೆ ನಡೆಯುತ್ತಿದೆ.
ಈ ನಡುವೆ, ಪ್ರೀತಿ ಝಿಂಟಾ ಅವರು ಈಗ ಯುಎಇ ನಲ್ಲಿ ಸುದ್ದಿಯಾಗುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕರಾದ ಪ್ರೀತಿ ಝಿಂಟಾ ತಂಡದ ಪ್ರದರ್ಶನದ ಬಗ್ಗೆಯೂ ಖುಷಿಯಾಗಿದ್ದಾರೆ.
ಮೊದಲ ಹಂತದ ಟೂರ್ನಿಯಲ್ಲಿ ಕಿಂಗ್ಸ್ ಪಂಜಾಬ್ ಸತತ ಸೋಲು ಅನುಭವಿಸಿತ್ತು.
ಇದೀಗ ಎರಡನೇ ಹಂತದಲ್ಲಿ ಗೆಲುವಿನ ಲಯದಲ್ಲಿದೆ. ಇದು ಡಿಂಪಲ್ ರಾಣಿಯ ಮುಖದ ನಗೆಯನ್ನು ಇಮ್ಮಡಿಗೊಳಿಸಿದೆ.
ಇನ್ನು ಪ್ರೀತಿ ಝಿಂಟಾ ಅವರು ಕೋವಿಡ್ ಬಗ್ಗೆ ಸಾಕಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಈಗಾಗಲೇ ಪ್ರೀತಿ ಝಿಂಟಾ ಅವರು ಇಲ್ಲಿಯವರೆಗೆ 20 ಬಾರಿ ಕೋವಿಡ್ ಟೆಸ್ಟ್ ಗೆ ಒಳಪಟ್ಟಿದ್ದಾರೆ.
ಈ ವಿಚಾರವನ್ನು ಸ್ವತಃ ಪ್ರೀತಿ ಝಿಂಟಾ ಅವರೇ ಹೇಳಿಕೊಂಡಿದ್ದಾರೆ.
ಅಲ್ಲದೆ ಕೋವಿಡ್ ಆತಂಕದಿಂದ ದೂರ ಮಾಡಿರುವ ಬಿಸಿಸಿಐ ಮತ್ತು ಇಡೀ ಸಿಬ್ಬಂದಿಗಳಿಗೆ ಧನ್ಯವಾದ ಕೂಡ ಹೇಳಿದ್ದಾರೆ.
ಜೈವಿಕ ಸುರಕ್ಷತೆಯ ಬಗ್ಗೆ ತಮ್ಮ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮನ್ನು ಕೋವಿಡ್ ರಾಣಿ ಅಂತ ಕರೆದುಕೊಂಡಿದ್ದಾರೆ.