ಚಿಕ್ಕಬಳ್ಳಾಪುರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಇರುವ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಅವರು ಮುಂದೆ ಯತ್ನಾಳ್ ಅವರೇ ಸಿಎಂ ಆಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ( Basavaraj Horatti ) ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಬಿಜೆಪಿ ಹೈಕಮಾಂಡ್ ತನ್ನ ಅಭಿಪ್ರಾಯವನ್ನು ಯತ್ನಾಳ್ ಮೂಲಕ ಹೇಳಿಸುತ್ತಿದೆ.
ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಶ್ರೀರಕ್ಷೆ ಇದೆ. ಈ ಕಾರಣಕ್ಕಾಗಿ ರಾಜ್ಯ ಬಿಜೆಪಿ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಆಗಿಲ್ಲ.
ಇದನ್ನೂ ಓದಿ : ಕೊರೊನಾ ಲಸಿಕೆ ಉಚಿತ ನೀಡುವ ಪ್ರಣಾಳಿಕೆ : ಇದ್ರಲ್ಲಿ ತಪ್ಪಿಲ್ಲ ಎಂದ ಕರಂದ್ಲಾಜೆ
ಈ ರೀತಿ ಬೇರೆ ಯಾರಾದ್ರೂ ಮಾತಾಡಿದ್ರೆ ಪಕ್ಷದಿಂದ ಕ್ಷಣಾರ್ಧದಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಿದ್ದರು ಎಂದರು.
ಯಾರ ಬೆಂಬಲವಿಲ್ಲದೇ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಲು ಬರಲ್ಲ. ಯತ್ನಾಳ್ ಅವರಿಗೆ ಉತ್ತರ ಕರ್ನಾಟಕ ಭಾಗದವರನ್ನೇ ಮುಖ್ಯಮಂತ್ರಿ ಮಾಡಲಾಗುದು ಎಂದು ಹೇಳಿರಬೇಕು.
ಹಾಗಾಗಿ ಅಷ್ಟು ಗಟ್ಟಿಯಾಗಿ ಸಿಎಂ ಬದಲಾವಣೆ ಕುರಿತು ಹೇಳಿತ್ತಿದ್ದಾರೆ. ಮುಂದೆ ಯತ್ನಾಳ್ ಅವರೇ ಮುಖ್ಯಮಂತ್ರಿ ಆಗಬಹುದು ಎಂದು ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : `ಸಿದ್ದರಾಮಯ್ಯ ಧಮ್’ ಗೆ ಸವಾಲ್ ಹಾಕಿದ ಕಟೀಲ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel