ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಲೆನಾಡಿಗೆ ಶಾಪವಾಗಿ ಪರಿಣಮಿಸುತ್ತಿರುವ ಗೇರು ನೆಡುತೋಪುಗಳ – ಹೊಸನಗರಕ್ಕೆ ಹೊಸ ತಲೆನೋವು:

Shwetha by Shwetha
October 25, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv Naavu kelada charitre episode2
Share on FacebookShare on TwitterShare on WhatsappShare on Telegram

ಮಲೆನಾಡಿಗೆ ಶಾಪವಾಗಿ ಪರಿಣಮಿಸುತ್ತಿರುವ ಗೇರು ನೆಡುತೋಪುಗಳ – ಹೊಸನಗರಕ್ಕೆ ಹೊಸ ತಲೆನೋವು: Saakshatv Naavu kelada charitre episode2

ಎಂಭತ್ತರ ದಶಕದಲ್ಲಿ ಮಲೆನಾಡಿನ ಸಾವಿರಾರು ಎಕರೆ ಅರಣ್ಯವನ್ನು ಮೈಸೂರು ಕಾಗದ ಕಾರ್ಖಾನೆಗೆ (MPM) ಗುತ್ತಿಗೆ ನೀಡಿದ ಪರಿಣಾಮವಾಗಿ ನಮ್ಮ ಪಶ್ಚಿಮ ಘಟ್ಟದ ಸಹಜ ಮಳೆಕಾಡುಗಳು ಹಂತ ಹಂತವಾಗಿ ಮಾಯವಾಗಿ ಅವುಗಳ ಜಾಗದಲ್ಲಿ ಅಕೇಶಿಯ ಮತ್ತು ನೀಲಗಿರಿ ನೆಡತೋಪುಗಳು ಪ್ರತ್ಯಕ್ಷವಾದವು. ನೀರಿನ ತೊಟ್ಟಿಲು ಎಂದು ಬಿಂಬಿತವಾಗಿರುವ ಮಲೆನಾಡಿನ ಪರಿಸರವನ್ನು ಹಾಳುಗೆಡುವಲು ಪ್ರಮುಖ ಪಾತ್ರವಹಿಸಿದ ಈ ನೆಡುತೋಪುಗಳು ಅಕ್ಷರಶಃ ನಮ್ಮ ಮಲೆನಾಡನ್ನು ಕ್ಷಯರೋಗ ಪೀಡಿತ ಮಾಡಿತು. ಇಲ್ಲಿಗೆ ನಿಲ್ಲದ ಅರಣ್ಯ ಇಲಾಖೆಯ ದಾಹ ಈಗ ಇನ್ನೊಂದು ಆವಾಂತರಕ್ಕೆ ಎಡೆಮಾಡಿಕೊಟ್ಟಿದೆ. Saakshatv Naavu kelada charitre episode2

Related posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

August 22, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

Saakshatv Naavu kelada charitre episode2

ಮಲೆನಾಡಿನಲ್ಲಿ ಅಳಿದುಳಿದ ಅರಣ್ಯವನ್ನು ಸಾಮಾಜಿಕ ಅರಣ್ಯಕ್ಕೆ ಒಪ್ಪಿಸಿ ಅವರ ಮೂಲಕ ಘಟ್ಟದ ಕೆಳಗೆ ಅಂದರೆ ಕರಾವಳಿಯಲ್ಲಿ ಸ್ಥಾಪಿಸಿರುವ “ಕರ್ನಾಟಕ ಗೇರು ಅಭಿವೃದ್ಧಿ ನಿಗಮ” ಕ್ಕೆ (Karnataka Cashew Development Corporation Ltd) ಮಲೆನಾಡಿನ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿ ಅದರಲ್ಲಿ ಇರುವ ಸಹಜ ಕಾಡನ್ನು ಬೃಹತ್‌ ಯಂತ್ರದ ಮುಖಾಂತರ ತೆಗೆದು ಅಲ್ಲಿ ಗೇರು ನೆಡತೋಪುಗಳನ್ನು ನಿರ್ಮಿಸುವ ಹೊಸ ಪರ್ವ ಶುರು ಆಗಿದೆ. ಮೈಸೂರು ಕಾಗದ ಕಾರ್ಖಾನೆಗೆ ನೀಡಿದ ಅರಣ್ಯದ ಗುತ್ತಿಗೆ ಮುಗಿದ್ದಿದ್ದು ಆ ಅರಣ್ಯದಲ್ಲಿ ಮತ್ತೆ ಹೇಗೆ ಸಹಜ ಕಾಡನ್ನು ನಿರ್ಮಿಸೋಣ ಎಂದು ಯೋಚಿಸುವಾಗ ಇನ್ನೊಂದು ಸಮಸ್ಯೆ ಮಲೆನಾಡಿಗರ ನಿದ್ದೆ ಕೆಡಿಸಿದೆ.

ಕೆಲವು ತಿಂಗಳ ಹಿಂದೆ ತೀರ್ಥಹಳ್ಳಿ ಭಾಗದಲ್ಲಿ ಸಹಜ ಕಾಡನ್ನು ಗೇರು ನೆಡತೋಪುಗಳಾಗಿ ಮಾಡಲು ಹೋದಾಗ ಸ್ಥಳೀಯರು ನಡೆಸಿದ ಉಗ್ರ ಹೋರಾಟದ ಫಲವಾಗಿ ಸ್ಥಳೀಯ ಶಾಸಕರು, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈಗ ತೀರ್ಥಹಳ್ಳಿಯಲ್ಲಿ ಅವರ ಕಾಳು ಬೇಯಲ್ಲಿಲ್ಲ ಎಂದು ಹೊಸನಗರದ ಕಡೆ ಮುಖ ಮಾಡಿದ್ದಾರೆ.

ನಿನ್ನೆ ಸಂಭವಿಸಿದ ಅಕಾಲಿಕ ಮಳೆಗೆ ಹೊಸನಗರದ ಜನರ ಜೀವನ ತ್ತತರಿಸಿ ಹೋದರೆ ಈ ಕರ್ನಾಟಕ ಗೇರು ಅಭಿವೃದ್ಧಿ ನಿಗಮದವರು ಬೃಹತ್ ಹಿಟಾಚಿಯ ಮೂಲಕ ಆ ಮಳೆಯಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಕಾರ್ಗಡಿಯ (ಕಾರಣಗಿರಿ) ಸುತ್ತಲೂ ಗುಡ್ಡ ಮತ್ತು ಬೆಟ್ಟಗಳಲ್ಲಿ ಬೆಳೆದಿರುವ ಮರಗಳನ್ನು ಉರುಳಿಸಿ ಗೇರು ನೆಡಲು ಜಾಗವನ್ನು ಸಮತಟ್ಟು ಮಾಡುತ್ತಿದ್ದರು. ಇಂದು ಬೆಳಗ್ಗೆ ಮಳೆ ಕಡಿಮೆ ಆಗುತ್ತಿದ್ದಂತೆ ಸ್ಥಳೀಯರು ಹೋಗಿ ಹಿಟಾಚಿಯನ್ನು ತಡೆ ಹಿಡಿದು ಅಲ್ಲಿಂದ ಹೊರದಬ್ಬಿದ್ದಾರೆ. ಈ ಕ್ಷೇತ್ರವು ತೀರ್ಥಹಳ್ಳಿ ಶಾಸಕರಿಗೆ‌ ಸೇರಿದ್ದು ಅರಣ್ಯ ಇಲಾಖೆ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧಿಕಾರಿಗಳು ಮಾಡಿದ ಈ ಘಟನೆ ಜನರಿಂದ ಆಯ್ಕೆಯಾದ ನಾಯಕರಿಗೆ ಈ ಅಧಿಕಾರಿಗಳು ಎಷ್ಟು ಮರ್ಯಾದೆ ಕೊಡುತ್ತಾರೆ ಎಂದು ತೋರಿಸುತ್ತದೆ.

Saakshatv Naavu kelada charitre episode2

ಇನ್ನೂ ಈ ಗುತ್ತಿಗೆದಾರರು ಮತ್ತು ಕೆಲಸದವರು ದೂರದ ಉತ್ತರ ಕರ್ನಾಟಕದವರಾಗಿದ್ದು ಇವರಿಗೆ ಇಲ್ಲಿಯ ಸೂಕ್ಷ್ಮ ಪರಿಸರದ ಅರಿವೇ ಇಲ್ಲ ಮೇಲಾಗಿ ಅರಣ್ಯದ ಬಗ್ಗೆ ಮರಗಳ ಬಗ್ಗೆ ಗಂಧಗಾಳಿಯೇ ಗೊತ್ತಿಲ್ಲ ಅಂತಹವರನ್ನು ಕರೆದುಕೊಂಡು ಬಂದರೆ ಅವರು ನೋಡು ನೋಡುತ್ತಲೇ ನಮ್ಮ ಮಲೆನಾಡನ್ನು ಬಯಲು ಮಾಡಿ ಹೋಗುತ್ತಾರೆ.

ನಮ್ಮ ಮಲೆನಾಡನ್ನು ಉಳಿಸ ಬೇಕಾದರೆ ಈ ಕರಾವಳಿಯ “ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ” ಒಂದಿಂಚು ಅರಣ್ಯವನ್ನು, ಗುಡ್ಡ ಮತ್ತು ಬೆಟ್ಟವನ್ನು ನೀಡ ಬಾರದು. ಅರಣ್ಯ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ವಹಿಸದ್ದಿದ್ದರೆ ನಾವುಗಳು ಉಗ್ರ ಹೋರಾಟಕ್ಕೆ ತಯಾರಿ ಮಾಡಿಕೊಳ್ಳ ಬೇಕಾಗಬಹುದು. ಬಲ್ಲಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಈ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗುತ್ತಿಗೆದಾರ ಹುಂಚದ ಕಡೆ ಹೋಗಲು ತಯಾರಿ ನಡೆಸುತ್ತಿದ್ದು ಅಲ್ಲಿಯ ಸ್ಥಳೀಯರು ಇದರ ಬಗ್ಗೆ ಜಾಗೃತರಾಗ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಮಲೆನಾಡು ಮಲೆನಾಡಿಗಿ ಉಳಿಯಬೇಕಿದ್ದರೇ ಸ್ವಾಭಾವಿಕ ಕಾಡುಗಳು ಬೆಳಯಬೇಕೇ ವಿನಃ ಸರ್ಕಾರ ಅಥವಾ ಅರಣ್ಯ ಇಲಾಖೆಯ ನೆಡುತೋಪಾಗಲೀ ಗೇರು ಪ್ಲಾಂಟೇಷನ್ ಆಗಲೀ ಅಗತ್ಯವಿಲ್ಲ.

ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ

-ಅಜಯ್ ಕುಮಾರ್ ಶರ್ಮ
ಪರಿಸರ ಹೋರಾಟಗಾರರು
ಶಿವಮೊಗ್ಗ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: #saakshatvnaavu kelada charitreSaakshatv Naavu kelada charitre episode2
ShareTweetSendShare
Join us on:

Related Posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

by admin
August 22, 2026
0

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

by Shwetha
August 22, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram