ದಾವಣಗೆರೆ : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಾ.ವೈ ನಾಗಪ್ಪ ( Dr. Y Nagappa ) ಅವರು ಇಂದು ನಿಧನರಾಗಿದ್ದಾರೆ. ಹರಿಹರ ವಿಧಾನ ಸಭಾ ಕ್ಷೇತ್ರದಿಂದ 1989, 1999 ಹಾಗೂ 2004 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗಪ್ಪನವರು, 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ : ಆರ್.ಆರ್ ನಗರದಲ್ಲಿ `ಕೈ’ ಹಿಡಿಯಲ್ಲ ಜನ : ಶಿರಾದಲ್ಲೂ ಕಾಂಗ್ರೆಸ್ ಗೆಲುವು ಡೌಟು
2008 ರಲ್ಲಿ ಮತ್ತೆ ಹರಿಹರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಡಾ. ವೈ ನಾಗಪ್ಪನವರು ಪರಾಭವಗೊಂಡರು.
ಚಾಲೆಂಜ್ ಮಾಡಿ ರಾಜಕಾರಣಕ್ಕೆ ಬಂದ ನಾಗಪ್ಪ
ಡಾ.ವೈ ನಾಗಪ್ಪನವರು 1980 ರಲ್ಲಿ ಅಂದಿನ ಶಾಸಕರಾಗಿದ್ದ ಹೆಚ್ ಶಿವಪ್ಪ ಅವರಿಗೆ ಚಾಲೆಂಜ್ ಮಾಡಿ ರಾಜಕಾರಣಕ್ಕೆ ಬಂದವರು. ನಾಗಪ್ಪನವರು 1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆಗ ಶಾಸಕರಾಗಿದ್ದ ಹೆಚ್ ಶಿವಪ್ಪ ಇವರನ್ನು ಪದೇ ಪದೇ ವರ್ಗಾವಣೆ ಮಾಡಿಸಿದ್ದರು. ಇದರಿಂದ ಬೇಸತ್ತು ಶಾಸಕರಿಗೆ ಸೆಡ್ಡು ಹೊಡೆದು ನೀನು ಮನಸ್ಸು ಮಾಡಿದರೆ ಡಾಕ್ಟರ್ ಆಗೋದಕ್ಕೆ ಆಗಲ್ಲ.
ಆದರೆ ನಾನು ಮನಸ್ಸು ಮಾಡಿದರೆ ಎಂಎಲ್‍ಎ ಆಗುತ್ತೇನೆ ಎಂದು ಚಾಲೆಂಜ್ ಮಾಡಿದ್ದರು. ಹಾಗೇ ಮೂರು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದರು.
ಇದನ್ನೂ ಓದಿ : ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್
ಇನ್ನು ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








