ಬೆಂಗಳೂರು : ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಕಣ ಈಗಾಗಲೇ ರಂಗೇರಿದೆ. ಆಡಳಿತರೂಢ ಬಿಜೆಪಿ ಈ ಚುನಾವಣೆಯಲ್ಲಿ ಗೆದ್ದು ವಿರೋಧಿಗಳಿಗೆ ಟಕ್ಕರ್ ನೀಡಲು ಪ್ಲಾನ್ ಮಾಡಿದ್ದರೇ ಇತ್ತ ಕಾಂಗ್ರೆಸ್ ಕೇಸರಿ ಪಡೆಗೆ ಡಿಚ್ಚಿ ನೀಡಲು ಪ್ಲಾನ್ ಮಾಡಿಕೊಂಡಿದೆ.
ಇನ್ನೊಂದೆಡೆ ಜೆಡಿಎಸ್ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ರಣತಂತ್ರಗಳನ್ನು ರೂಪಿಸುತ್ತಿದೆ. ಈ ಮಧ್ಯೆ ಆರ್. ಆರ್ ನಗರದಲ್ಲಿ ಕಾಂಗ್ರೆಸ್ ಸೋಲು ಕಾಣಲಿದ್ದು, ಶಿರಾದಲ್ಲೂ ಗೆಲುವು ಸುಲಭವಲ್ಲ ( Congress victory Doubt ) ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಆಂತರಿಕ ಮೌಲ್ಯಮಾಪನದಲ್ಲಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಹೌದು..! ಈ ಉಪಚುನಾವಣೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ಶತಾಯಗತಾಯ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾದ ಒತ್ತಡ, ಜವಾಬ್ದಾರಿ ಕನಕಪುರ ಬಂಡೆ ಮೇಲಿದೆ.
ಅದರಲ್ಲೂ ಆರ್ ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನಗೆ ತಕ್ಕ ಪಾಠ ಕಲಿಸಲೇಬೇಕೆಂದು ಡಿಕೆ ಬ್ರದರ್ಸ್ ಪಣತೊಟ್ಟಿದ್ದಾರೆ. ಆದ್ರೆ ಪಕ್ಷದ ಆಂತರಿಕ ಮೌಲ್ಯಮಾಪನ ಶೂಟರ್ ಗೆ ಟ್ರಬಲ್ ತಂದೊಡ್ಡಿದೆ.
ಇದನ್ನೂ ಓದಿ : #AnswerMaadi ಎಂದ ಬಿಜೆಪಿಗೆ `ಲೆಕ್ಕ’ರಾಮಯ್ಯ’ ಪಾಠ
ಸಾಮಾನ್ಯವಾಗಿ ಬೈ ಎಲೆಕ್ಷನ್ ಗಳಲ್ಲಿ ಆಡಳಿತರೂಢ ಪಕ್ಷ ಗೆಲುವು ಸಾಧಿಸುತ್ತೆ. ಅದೇ ರೀತಿ ಈ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆದ್ದರೇ ಸಚಿವರಾಗುತ್ತಾರೆ ಎಂದು ಕ್ಷೇತ್ರದ ಜನರು ನಂಬಿದ್ದಾರೆ.
ಇದು ಕಾಂಗ್ರೆಸ್ ಗೆ ಮುಳುವಾಗಬಹುದು. ಜೊತೆಗೆ ಇದುವರೆಗೂ ಕಾಂಗ್ರೆಸ್ ಪಕ್ಷದ ಪರ ಗುರುತಿಸಿಕೊಂಡಿದ್ದ ಸ್ಥಳೀಯ ಮುಖಂಡರು ಈಗ ಮುನಿರತ್ನ ಜೊತೆ ಸೇರಿರೋದು ಕಾಂಗ್ರೆಸ್ ಹಿನ್ನಡೆ ತಂದಿದೆ.
ಅದರಲ್ಲೂ ಪಕ್ಷದ ಅಭ್ಯರ್ಥಿ ಕುಸುಮಾ ಕ್ಷೇತ್ರದ ಜನರಿಗೆ ಹೊಸಬರು.. ಕುಸುಮಾ ಅವರು ಸ್ಥಳೀಯ ಜನರೊಂದಿಗೆ ಸಂಪರ್ಕ ಹೊಂದಿಲ್ಲ.. ಮುನಿರತ್ನಗೆ ಕ್ಷೇತ್ರದ ಮೂಲೆ ಮೂಲೆಯಲ್ಲೂ ಬೆಂಬಲಿಗರಿದ್ದಾರೆ. ಇದೂ ಕೂಡ ಕಾಂಗ್ರೆಸ್ ಗೆ ಆಂತಕ ತಂದಿದೆ.
ಇತ್ತ ಶಿರಾಯತ್ತ ಬಂದ್ರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಪರ ಘಟಾನುಘಟಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗಿಂತ ಜೆಡಿಎಸ್-ಬಿಜೆಪಿ ಪ್ರಚಾರದ ಭರಾಟೆ ಜೋರಾಗಿದೆ.
ಅದರಲ್ಲೂ ಶಿರಾದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರೇ ಪ್ರಚಾರದ ಅಖಾಡಕ್ಕೆ ಧುಮುಕಿರೋದು ಎದುರಾಳಿಗೆ ಆತಂಕ ಮೂಡಿಸಿದೆ. ಇಲ್ಲಿ ವಕ್ಕಲಿಗ ಮತಗಳೇ ಪ್ರಮುಖ ಪಾತ್ರವಹಿಸಲಿದ್ದು, ಆ ಮತಗಳನ್ನು ಜೆಡಿಎಸ್ ಸೆಳೆಯುವ ಸಾಧ್ಯತೆಗಳಿವೆ.
ಇನ್ನು ಶಿರಾದಲ್ಲಿ ಕೇಸರಿ ಬಾವುಟ ಹಾರಿಸಲೇಬೇಕೆಂದು ಕೇಸರಿ ಪಡೆ ಪಣತೊಟ್ಟಿದ್ದು, ಡಿಸಿಎಂ ಸೇರಿ 8 ಮಂದಿ ಉಸ್ತುವಾರಿ ನಾಯಕರನ್ನು ಶಿರಾದಲ್ಲಿ ನಿಯೋಜಿಸಿದೆ ಬಿಜೆಪಿ..
ಒಟ್ಟಾರೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ತೀವ್ರ ಪೈಪೋಟಿ ಇದೆ. ಇದೇ ಕಾರಣಕ್ಕೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವು ಸುಲಭವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ : ಸಿದ್ದರಾಮಯ್ಯ ಮಜಾವಾದಿ, ಸಾಲಭಾಗ್ಯದ ಅನಭಿಷಿಕ್ತ ದೊರೆ : ಬಿಜೆಪಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











