ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026
ನಾಗ ಪಂಚಮಿ ಪೂಜೆ ಮುಹೂರ್ತ – 05:51 AM ರಿಂದ 08:29 AM
ಅವಧಿ – 02 ಗಂಟೆಗಳು 37 ನಿಮಿಷಗಳು
ಪಂಚಮಿ ತಿಥಿ ಆರಂಭ – 04:52 PM ಆಗಸ್ಟ್ 16, 2026 ರಂದು
ಪಂಚಮಿ ತಿಥಿ ಕೊನೆಗೊಳ್ಳುತ್ತದೆ – 05:00 ಆಗಸ್ಟ್ 17, 2026 ರಂದು
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಪಂಚಮಿ ಎಂದು ಆಚರಿಸುವುದು ಸನಾತನ ಧರ್ಮದಲ್ಲಿ ಒಂದು ಶಾಸ್ತ್ರೋಕ್ತ ಪದ್ಧತಿ. ಈ ವೈದಿಕ ವಿಜ್ಞಾನದ ಸಂಶೋಧನೆಯು ಮುಂದೆ ಶಾಸ್ತ್ರ ಸಂಪ್ರದಾಯವಾಗುತ್ತದೆ. ನಿರ್ಣಯ ಸಿಂಧು, ಧರ್ಮ ಸಿಂಧು ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಪ್ರತಿ ದಿನಕ್ಕೂ ಅದರದ್ದೇ ಆದಂತಹ ಮಹತ್ವ ಇದೆ. ಇದನ್ನು ದಿನ ಕೃತ್ಯ ಎಂದರು.
ರವಿಯ ಯುತಿಯಿಂದ ಹೊರಟ ಚಂದ್ರನು ಹದಿನೈದನೆಯ ದಿನಕ್ಕೆ ತಲುಪುವುದನ್ನು ಪಾಡ್ಯಾದಿ ತಿಥಿಗಳ ಮೂಲಕ ಎಣಿಸಲಾಗುತ್ತದೆ. ಅಂದರೆ ಪ್ರತೀ ಹನ್ನೆರಡು ಡಿಗ್ರಿ ಅಂತರದಲ್ಲಿ ಒಂದು ತಿಥಿಯಾಗುತ್ತದೆ. 15×12ಡಿಗ್ರಿ= 180ಡಿಗ್ರಿ ಪೌರ್ಣಮಿಯೂ, ಮುಂದಿನ 180 ಡಿಗ್ರಿ ಅಂದರೆ 360 ಡಿಗ್ರಿಗೆ ಅಮಾವಾಸ್ಯೆಯೂ ಆಗುತ್ತದೆ.
ನಾಗರ ಪಂಚಮಿ ವೈಶಿಷ್ಟ್ಯ: ತಿಳಿಯಬೇಕಾದ 6 ಸಂಗತಿನಾಗರ ಪಂಚಮಿ ವೈಶಿಷ್ಟ್ಯ: ತಿಳಿಯಬೇಕಾದ 6 ಸಂಗತಿ
ಹೀಗೆಯೇ ಪ್ರತೀ ತಿಂಗಳಿಗೆ ಒಂದೇ ತಿಥಿಯು ಶುಕ್ಲ ಮತ್ತು ಕೃಷ್ಣ ಪಕ್ಷಗಳ ತಿಥಿಯಾಗಿ ಎರಡು ಸಲ ಬರುತ್ತದೆ. ರವಿ- ಚಂದ್ರರ ಅಂತರದಲ್ಲಿ ವಾತಾವರಣದಲ್ಲಿ ಬದಲಾವಣೆಗಳೂ ಆಗುತ್ತಿರುತ್ತವೆ. ಇದರಲ್ಲಿ ಕೆಲವೊಂದು ಬದಲಾವಣೆಗಳು ಮಾತ್ರ ನಮ್ಮ ಅನುಭವಕ್ಕೆ ಬರಬಹುದಷ್ಟೆ. ಉಳಿದವುಗಳು ಅನುಭವಕ್ಕೆ ಬಾರದೆ ಇದ್ದರೂ ಪರಿಣಾಮಗಳು ಆಗಿಯೇ ಆಗುತ್ತವೆ.
ಇದರ ಸಂಶೋಧನೆ ಮಾಡಿದ ನಮ್ಮ ಋಷಿ-ಮುನಿಗಳು ಇಂತಹ ವಾತಾವರಣಕ್ಕೆ ಹೊಂದಿಕೊಳ್ಳಲು ವೃತ ನಿಯಮಗಳನ್ನು ಮಾಡಿ, ಆಯಾಯ ದೇವ- ದೇವತೆಗಳ ಆರಾಧನೆಗಳನ್ನು ಮಾಡತೊಡಗಿದರು. ಮತ್ತು ಮುಂದಿನ ಪೀಳಿಗೆಗಳಿಗೆ ನಿರ್ದೇಶನವನ್ನೂ ಕೊಟ್ಟರು.
ಈ ಪಂಚಮಿಯ ವಿಶೇಷ ಏನು?
ಶುಕ್ಲ ಪಂಚಮಿಯ ಬಳಿಕ ಚಂದ್ರ ಬಲಿಷ್ಠ, ಬಹುಳ ಪಂಚಮಿಯ ಬಳಿಕ ದುರ್ಬಲ ಆಗುತ್ತದೆ. ರವಿ- ಚಂದ್ರರ ಯುತಿಯು ಸನ್ನಿಕರ್ಷವೂ (ಅಮಾವಾಸ್ಯೆ); ಸಮ ಸಪ್ತಕವು ವಿಪ್ರಕರ್ಷವೂ (ಹುಣ್ಣಿಮೆ) ಆಗುತ್ತದೆ. ಕೃಷ್ಣ ಪಕ್ಷದಲ್ಲಿ ದೇವತೆಗಳು ಚಂದ್ರನ ಬಲವನ್ನು ಪಾನ (ಗ್ರಹಣ absorb) ಮಾಡುವುದರಿಂದ ಚಂದ್ರನು ಕ್ಷೀಣತ್ವಕ್ಕೂ, ಶುಕ್ಲ ಪಕ್ಷದಲ್ಲಿ ಚಂದ್ರನ ರಶ್ಮಿಗಳನ್ನು ಹೊರ ಹಾಕಿ, ಚಂದ್ರನ ವೃದ್ಧಿಯನ್ನು ಮಾಡುವ ಈ ಕ್ರಿಯೆಯನ್ನು ವೃದ್ಧಿ- ಕ್ಷೀಣ ಎಂದರು.
ಈ ಶುಕ್ಲ ಮತ್ತು ಕೃಷ್ಣ ಪಕ್ಷದ ತಿಥಿಗಳಿಗೆ ಅಭಿಮಾನಿ ದೇವತೆಗಳಿದ್ದಾರೆ. ಇದು ಕ್ರಮವಾಗಿ ಪಾಡ್ಯದಿಂದ ಹುಣ್ಣಿಮೆ, ಹುಣ್ಣಿಮೆಯಿಂದ ಅಮಾವಾಸ್ಯೆಯ ವರೆಗೆ ಅಗ್ನಿ, ಬ್ರಹ್ಮ, ಗೌರಿ, ಗಣಪತಿ, ಸರ್ಪ, ಗುಹ, ರವಿ, ಶಿವ, ದುರ್ಗಾ, ಯಮ, ವಿಶ್ವೇದೇವತೆಗಳು, ವಿಷ್ಣು, ಕಾಮ, ಈಶ್ವರ, ಚಂದ್ರ ಎಂಬ ಹದಿನೈದು ದೇವತೆಗಳ ಸಾನ್ನಿಧ್ಯ ಸೂಚಕ. ಇವರೇ ಕೃಷ್ಣ ಪಕ್ಷದ ತಿಥಿಗಳಿಗೂ ಅಧಿಪತಿಗಳಾಗಿರುತ್ತಾರೆ.
ಚಂದ್ರನು ಶೀತ ಕಾರಕ. ಮನಸ್ಸಿನ ಮೇಲೆ ಪರಿಣಾಮವನ್ನು ಬೀರುವ ಗ್ರಹ. ಅಲ್ಲದೆ ಸಾಗರದಲ್ಲಿ ಉಬ್ಬರ- ಇಳಿತಗಳಿಗೂ ಇವನೇ ಕಾರಣ. ಅಂತಹ ಚಂದ್ರ ಸ್ಥಿತಿಯ ಪಂಚಮಿ ಮತ್ತು ಷಷ್ಠಿ ತಿಥಿಗಳು ಸರ್ಪ ಮತ್ತು ಗುಹರಿಗೆ ಇಷ್ಟ ತಿಥಿಗಳು. ಎರಡೂ ನಾಗ ಸಂಬಂಧವೇ ಆಗುತ್ತದೆ.
ನಾಗಾರಾಧನೆ ಯಾಕೆ?
ನಾಗನು ಮನುಷ್ಯನೊಳಗಿರುವ ಕಾಮಾದಿ ಷಡ್ಗುಣಗಳನ್ನು ನಿಯಂತ್ರಿಸುವವನು. ಶುಕ್ಲದಲ್ಲಿ ಇದೇ ಗುಣಗಳು ಉದ್ದೀಪನಗೊಂಡರೆ, ಕೃಷ್ಣ ಪಕ್ಷದಲ್ಲಿ ಇದೇ ಗುಣಗಳಿಗೆ ಮಂಕು ಕವಿಯುತ್ತದೆ. ಇದರ ಸಮತೋಲನ ಕಾಪಾಡಲೆಂದೇ ಪಂಚಮಿ ಮತ್ತು ಷಷ್ಠಿ ತಿಥಿಗಳ ವ್ರತ- ನಿಯಮ ಇರುವುದಾಗಿದೆ.
ಮುಂದೆ ಪ್ರಜಾ ವೃದ್ಧಿಯಾದಂತೆ ಸಂಪತ್ತು ಹೆಚ್ಚುತ್ತದೆ. ಹಾಗೆಯೇ ಕಳ್ಳಕಾಕರ ಭಯವೂ ಹೆಚ್ಚಿತು. ಆಗ ಸಂಪತ್ತುಗಳನ್ನು ಭೂಮಿಯಲ್ಲಿ ಹುಗಿದಿಟ್ಟು ಬನಗಳ ನಿರ್ಮಾಣವೂ ಶುರುವಾಯಿತು. ಎಲ್ಲಿ ಭೂಮಿಯಲ್ಲಿ ನಿಧಿಗಳಿರುತ್ತದೋ ಅಲ್ಲಿ ಸರ್ಪ ಸಾನ್ನಿಧ್ಯ ಇರುವುದು ಒಂದು ಪ್ರಕೃತಿ ಸಹಜ. ಆಗ ಪ್ರಜೆಗಳು ಈ ಬನದೊಳಗೆ ನಾಗ ಶಿಲೆಯನ್ನಿಟ್ಟು ಪೂಜಿಸತೊಡಗಿದರು. ನಾಗದೇವರಿಗೆ ನಿಧಿರಕ್ಷಕ ಎಂಬ ಹೆಸರೂ ಇದೆ. ಮುಂದೆ ನಾಗಾಲಯಗಳಾದುವು.
ಶ್ರಾವಣ ಮಾಸದ ವಿಶೇಷ ಹಬ್ಬಗಳಲ್ಲೊಂದು ನಾಗರ ಪಂಚಮಿ. ಈ ಹಬ್ಬವನ್ನು ಶುಕ್ಲ ಪಕ್ಷ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರ ಹನ್ನೆರಡು ಸ್ವರೂಪಗಳನ್ನು ಪೂಜಿಸಲಾಗುತ್ತದೆ. ನಾಗ ದೇವರ ಪೂಜೆ ಮಾಡುವುದರಿಂದ, ರುದ್ರಾಭಿಷೇಕ ಮಾಡುವುದರಿಂದ ಈಶ್ವರನು ಪ್ರಸನ್ನನಾಗುತ್ತಾನೆ ಮತ್ತು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇದೆ. ಈ ಬಗ್ಗೆ ಸ್ವತಃ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿದ್ದಾನೆ. ಆತನ ಆಶೀರ್ವಾದ ಇರುವ ಈ ಹಬ್ಬವನ್ನು ಆಚರಿಸಿದೆ ಪುಣ್ಯ ಲಭಿಸುತ್ತದೆ.
ಪುರಾಣ ಗ್ರಂಥಗಳ ಪ್ರಕಾರ ನಾಗರ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ನಾಗರಾಜನು ಪ್ರಸನ್ನನಾಗುತ್ತಾನೆಂಬ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಕಾಳಸರ್ಪ ದೋಷವಿರುವವರು ಈ ಪಂಚಮಿಯ ಶುಭದಿನದಂದು ಶಿವ ಮತ್ತು ನಾಗದೇವರಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.
ಶ್ರೀಕೃಷ್ಣ ಹೇಳಿದ್ದೇನು..?
ನಾಗರಪಂಚಮಿಯಂದು ಭಗವಾನ್ ಶ್ರೀಕೃಷ್ಣ ಸಹ ಒಂದು ವರದಾನವನ್ನು ಕೊಟ್ಟಿದ್ದಾನೆ. ಈ ದಿನದಂದು ಹಾವಿಗೆ ಹಾಲೆರೆಯುವವರಿಗೆ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾಗದಿರಲಿ ಎಂದು ಆಶೀರ್ವಾದ ರೂಪದ ವರವನ್ನು ನೀಡಿದ್ದಾಗಿ ಪುರಾಣ ಹೇಳುತ್ತದೆ.
ಇದಕ್ಕೆ ಕಾರಣವೂ ಇದೆ. ಒಮ್ಮೆ ಕಾಲಿಯಾ ಎಂಬ ನಾಗವು ಯಮುನಾ ನದಿಗೆ ವಿಷವನ್ನು ಕಕ್ಕುತ್ತದೆ. ಆ ನದಿ ನೀರನ್ನು ಸೇವಿಸಿದ ಅಲ್ಲಿಯ ಜನರು ಮೂರ್ಛೆ ತಪ್ಪಿ ಬೀಳುತ್ತಾನೆ. ಆ ಸಂದರ್ಭದಲ್ಲಿ ಶ್ರೀಕೃಷ್ಣನು ನದಿಯೊಳಗೆ ಅಡಗಿ ಕುಳಿತಿದ್ದ ನಾಗ ಕಾಲಿಯಾನನ್ನು ಮೇಲಕ್ಕೆ ಕರೆತಂದು ಯುದ್ಧ ಮಾಡುತ್ತಾನೆ. ಹೀಗೆ ನಡೆದ ಯುದ್ಧದಲ್ಲಿ ಕಾಲಿಯಾ ಸೋಲೊಪ್ಪಿಕೊಂಡು ನದಿಯ ವಿಷವನ್ನು ವಾಪಸ್ ಪಡೆಯುತ್ತಾನೆ. ಆಗ ಭಗವಾನ್ ಶ್ರೀಕೃಷ್ಣ ಪ್ರಸನ್ನಗೊಂಡು, “ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗಪಂಚಮಿ ಹಬ್ಬ ಆಚರಿಸಲ್ಪಡುತ್ತದೆ. ಆ ದಿನ ಸರ್ಪಗಳಿಗೆ ಪೂಜೆ, ಪುನಸ್ಕಾರಗಳು ನೆರವೇರುತ್ತವೆ’’ ಎಂದು ವರವನ್ನು ನೀಡುತ್ತಾನೆ.
ಧಾರ್ಮಿಕ ಆಚರಣೆ ಹೇಗಿದೆ..?
ಮನೆಯ ಎದುರು ಹಾಲು ಇಡುವುದರಿಂದ ಅದನ್ನು ನಾಗದೇವತೆ ಬಂದು ಕುಡಿದು ಪ್ರಸನ್ನ ವಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಸರ್ಪಗಳಲ್ಲಿ ಭೌತಿಕ ಬಲ ಇರುವುದರಿಂದ ಈ ದಿನ ದೇವಿ ಸರಸ್ವತಿ ಪೂಜೆಯನ್ನೂ ಮಾಡುವ ಪರಂಪರೆ ಕೆಲವು ಕಡೆ ಇದೆ. ಸುಖ-ಸಮೃದ್ಧಿ ವೃದ್ಧಿಸಲು ಈ ದಿನ ವ್ರತವನ್ನೂ ಕೈಗೊಳ್ಳುತ್ತಾರೆ.
ಆರ್ಥಿಕ ಲಾಭಕ್ಕೆ ವಿಶೇಷ ಪೂಜೆ
ಆರ್ಥಿಕವಾಗಿ ಮುಂದೆ ಬರಬೇಕು. ದುಡಿದಿದ್ದು ಕೈಸೇರಬೇಕು, ಹೆಚ್ಚು ಹೆಚ್ಚು ಹಣ ಗಳಿಸಬೇಕು ಎಂಬುವವರು ಸಹ ಈ ದಿನ ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಾರೆ. ಇದಕ್ಕಾಗಿ ಇರುವ ಮಂತ್ರಗಳನ್ನು ಪಠಿಸಿ ಪೂಜೆ ಮಾಡಿದರೆ ಆರ್ಥಿಕ ಪ್ರಗತಿಯಾಗಿ ಲಾಭವಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಕಾರಣ, ಗುಪ್ತ ನಿಧಿಯನ್ನು, ಲಕ್ಷ್ಮೀಯನ್ನು ಕಾಯುವುದೇ ನಾಗಗಳು ಅಲ್ಲವೇ..?
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಾವಿನಲ್ಲೇಕೆ ವಿಷ ಇದೆ ಎಂದು ಗೊತ್ತೇ?
ಹಾವಿನಲ್ಲಿ ವಿಷ ಏಕೆ ಇದೆ ಎಂಬುದಕ್ಕೆ ಪುರಾಣ ಕಥೆಗಳು ಸಾಕಷ್ಟು ವಿವರಣೆಯನ್ನು ಕೊಡುತ್ತದೆ. ಸಮುದ್ರ ಮಥನದ ವೇಳೆ ಅಂತಿಮವಾಗಿ ಉದ್ಭವವಾದ ಹಾಲಾಹಲವನ್ನು ಪರಶಿವನು ಸೇವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ವಿಷ ಸೇವನೆ ಮಾಡುವಾಗ ಅದರಲ್ಲಿ ಒಂದು ಹನಿ ಹಾವಿನ ಮೇಲೆ ಬೀಳುತ್ತದೆ. ಆಗ ಸರ್ಪ ಜಾತಿಗಳೆಲ್ಲ ವಿಷ ಸರಿಸೃಪಗಳಾದವು ಎಂದು ಹೇಳಲಾಗುತ್ತದೆ. ಹಾಗಾಗಿ ಸರ್ಪದಿಂದ ಪಾರಾಗಲು ಈ ದಿನ ನಾಗದೇವರ ಪೂಜೆಯನ್ನು ಕೈಗೊಳ್ಳಲಾಗುತ್ತದೆ.







