ಬೆಂಗಳೂರು : ಆಡಳಿತ ರೂಢ ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಟ್ವೀಟ್ ಸಮರ ಮುಂದುವರಿದಿದೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿ ಹಲವಾರು ಪ್ರಶ್ನೆಗಳನ್ನು ಕೇಳಿದೆ.
ಬಿಜೆಪಿ ಟ್ವೀಟ್ ನಲ್ಲಿ…
ಮಾನ್ಯ ಸಿದ್ದರಾಮಯ್ಯ ಕೇವಲ “ಮಜಾವಾದಿ” ಅಲ್ಲ, #ಸಾಲಭಾಗ್ಯ ನೀಡಿದ ಅನಭಿಷಿಕ್ತ ದೊರೆಯೂ ಹೌದು !
2013 – 20 ಸಾವಿರ ಕೋಟಿ. 2014 – 21 ಸಾವಿರ ಕೋಟಿ. 2015 – 21 ಸಾವಿರ ಕೋಟಿ. 2016 – 28 ಸಾವಿರ ಕೋಟಿ. 2017 – 35 ಸಾವಿರ ಕೋಟಿ. ಕನ್ನಡಿಗರನ್ನು ಸಾಲವೆಂಬ ಶೂಲಕ್ಕೆ ಏರಿಸಿದ್ದೆ ನೀವಲ್ಲವೇ ಸಿದ್ದರಾಮಯ್ಯನವರೇ?
ಮಾನ್ಯ ಸಿದ್ದರಾಮಯ್ಯ ಅವರೇ, ಹಲವು ಭಾಗ್ಯಗಳನ್ನು ನೀಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು, ಕನ್ನಡಿಗರಿಗೆ #ಸಾಲಭಾಗ್ಯ ನೀಡಿದ್ದರ ಬಗ್ಗೆ ಹೇಳಿಕೊಳ್ಳುವುದಿಲ್ಲವೇಕೆ?. ಮುಖ್ಯಮಂತ್ರಿಯಾದ ಕೇವಲ 22 ತಿಂಗಳಲ್ಲಿಯೇ 39,161 ಕೋಟಿ ಸಾಲ ಮಾಡಿ ದುಂದು ವೆಚ್ಚ ಮಾಡಿದ್ದೇ ನಿಮ್ಮ ಸಾಧನೆ ಅಲ್ಲವೇ ಸಿದ್ದರಾಮಯ್ಯನವರೇ?
ಇದನ್ನೂ ಓದಿ : ಬೈ ಎಲೆಕ್ಷನ್ ನಲ್ಲಿ ಗೆಲುವು ಸಾಧಿಸದೇ ಡಿಕೆ ಬ್ರದರ್ಸ್ ವಿರಮಿಸಲ್ಲ : ಜನಾರ್ದನ ಪೂಜಾರಿ
ಮಾನ್ಯ ಸಿದ್ದರಾಮಯ್ಯ ನಿಮ್ಮ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ 44,769/- ಸಾಲದ ಹೊರೆ ಹೊರೆಸಿದ “ಸಾಲರಾಮಯ್ಯ” ನೀವಲ್ಲವೇ?. ನೀವು ಮಾಡಿದ ಸಾಲದ ಅಸಲು ಮತ್ತು ಬಡ್ಡಿ ತೀರಿಸುತ್ತಾ ಕರ್ನಾಟಕ ದಿವಾಳಿ ಆಗಿದೆ. ಈ ನಿಮ್ಮ ಮಹಾನ್ ಸಾಧನೆಯನ್ನು ಜನರಿಗೆ ತಿಳಿಸುವ “ಧಮ್” ನಿಮಗಿಲ್ಲವೇ?
ಇದನ್ನೂ ಓದಿ : ಶಿರಾದಲ್ಲಿ ಬಿಜೆಪಿ ಅಲೆ ಅಂದವರು ಹುಚ್ಚಾಸ್ಪತ್ರೆಯಿಂದ ಬಂದವರು : ಕೆ.ಎನ್.ರಾಜಣ್ಣ
ಮಾನ್ಯ ಸಿದ್ದರಾಮಯ್ಯ ನೀವು ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕರುಣಿಸಿದ್ದೀರಿ! ಧರ್ಮ ಆಧಾರಿತವಾಗಿ ಶಾದಿ ಭಾಗ್ಯ. ಜಾತಿ ಆಧಾರಿತವಾಗಿ ಮಕ್ಕಳಿಗೆ ಪ್ರವಾಸ ಭಾಗ್ಯ. ಜಾತಿ ಆಧಾರಿತವಾಗಿ ಮೊಟ್ಟೆ ಭಾಗ್ಯ. ಬಹುಮುಖ್ಯವಾಗಿದ್ದು #ಸಾಲಭಾಗ್ಯ! ಇದನ್ನು ಮಾತ್ರ ರಾಜ್ಯದ ಎಲ್ಲರ ಮೇಲೆ ಹೊರಿಸಿದ್ದೀರಿ, ಅಲ್ಲವೇ?
ಮಾನ್ಯ ಸಿದ್ದರಾಮಯ್ಯ ಸಮಾಜವಾದಿ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೇರಿದಿರಿ. ಅಧಿಕಾರಕ್ಕೇರಿದವರೇ, ಹ್ಯೂಬ್ಲೆಟ್ ವಾಚ್ ಕಟ್ಟಿಕೊಂಡಿರಿ, ಸೋಪ್ ಬಾಕ್ಸ್ & ರೂಂ ಫ್ರೆಶ್ ನರ್ 1 ಲಕ್ಷಕ್ಕೂ ಅಧಿಕ ಖರ್ಚು. ಪೇಪರ್ ಕಪ್ ಗಳಿಗೆ 1,87,950 ಖರ್ಚು. ರಾಜ್ಯದ ಜನತೆಯ ತಲೆಮೇಲೆ ಮಾತ್ರ #ಸಾಲಭಾಗ್ಯ! ಅಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel