ತುಮಕೂರು: ನವೆಂಬರ್ 3ರಂದು ನಡೆಯಲಿರುವ ಶಿರಾ ಉಪಚುನಾವಣೆಗೆ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಬಿಜೆಪಿಗೆ ಮತ ನೀಡುವಂತೆ ಹಣ ವಿತರಣೆ(cash for vote) ಮಾಡಿ ಆಮಿಷವೊಡ್ಡಿದ ಆರೋಪ ಕೇಳಿ ಬರುತ್ತಿದೆ. ಕಳೆದ ರಾತ್ರಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿತ್ತು. ಕತ್ತಲಾಗುತ್ತಿದ್ದಂತೆ ಹಣ ಹಂಚುವ ಪ್ರಕ್ರಿಯೆ ಶುರುವಾಗುತ್ತೆ ಎನ್ನಲಾಗಿದೆ.
ಶಿರಾ ತಾಲೂಕಿನ ಗೌಡಗೆರೆ, ಸಿದ್ದಾಪುರ, ವೀರಾಪುರ ಸೇರಿದಂತೆ ಇತರೆ ಹಳ್ಳಿಗಳಲ್ಲೂ ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಹಾಸನ ಹಾಗೂ ಕೆ.ಆರ್ ಪೇಟೆಯಿಂದ ಬಂದವರಿಂದ ಹಣ ವಿತರಣೆ ಎನ್ನಲಾಗಿದ್ದು, ಹಣ ಹಂಚುತ್ತಿದ್ದವರನ್ನು ಗೌಡಗೆರೆ, ಸಿದ್ದಾಪುರ ಗ್ರಾಮದ ಕೆಲ ಮುಖಂಡರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಬಿಜೆಪಿಗೆ ಮತ ನೀಡುವಂತೆ ಹಣ ವಿತರಣೆ ಮಾಡಿ ಆಮಿಷವೊಡ್ಡಿ ಆಧಾರ್ ಕಾರ್ಡ್, ಐಡಿ ಕಾರ್ಡ್ ತರಿಸಿ ಪೋನ್ ನಂಬರ್ ತೆಗೆದುಕೊಂಡು ಹಣ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಣ ಹಂಚುವ ವೀಡಿಯೋಗಳು ವೈರಲ್ ಆಗಿವೆ.
ಶಿರಾ ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್‍ನಿಂದ ಟಿ.ಬಿ ಜಯಚಂದ್ರ, ಜೆಡಿಎಸ್‍ನಿಂದ ಅಮ್ಮಾಜಮ್ಮ ಹಾಗೂ ಬಿಜೆಪಿಯಿಂದ ಡಾ.ರಾಜೇಶ್‍ಗೌಡ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಶಿರಾ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಈ ಉಪಚುನಾವಣೆ ಗೆಲುವು ಮಹತ್ವದ್ದಾಗಿದೆ. ಅದೇ ರೀತಿ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದ್ದಾಗಿದೆ. ಹೀಗಾಗಿ ಈ ಶಿರಾ ಕ್ಷೇತ್ರದ ಗೆಲುವು ಡಿ.ಕೆ ಶಿವಕುಮಾರ್ ಅವರಿಗೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಹಾಗೂ ಹೈಕಮಾಂಡ್ ನೀಡಿದ ಟಾಸ್ಕ್‍ನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗೆ ಇದೆ ಎಂಬುದನ್ನು ಸಾಬೀತುಪಡಿಸಲು ಅನಿವಾರ್ಯವಾಗಿದೆ.
ಇನ್ನೊಂದೆಡೆ, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಅವರಿಗಿರುವ ಒಕ್ಕಲಿಗ ಸಮುದಾಯದ ಪ್ರಭಾವವನ್ನು ಕಡಿಮೆ ಮಾಡಿ ನಾನೇ ಒಕ್ಕಲಿಗ ಜನಾಂಗದ ನಾಯಕ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆ ಡಿಕೆಶಿ ಪಾಲಿಗೆ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆ ಇದೆ.
ಹೀಗಾಗಿ ರಾಜಕೀಯ ಪಕ್ಷಗಳು ಹಣ-ಹೆಂಡ ಹಂಚುವ ಮೂಲಕ ಉಪಚುನಾವಣೆಯನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಂತೆ ಕಾಣುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








