ಐದು ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ಕಾರಿನಲ್ಲಿ, ಒಬ್ಬರೇ ಹೋಗುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಇಲ್ಲಯವರೆಗೆ ಮಾಸ್ಕ್ ಧರಿಸುವುದು ಕಡ್ಡಾಯ ಇಲ್ಲ ಎಂಬ ತನ್ನ ರೂಲ್ಸ್ ಬದಲಾವಣೆ ಮಾಡಿ ಬಿಬಿಎಂಪಿ ಹೊಸ ಕಠಿಣ ಆದೇಶ ನೀಡಿದೆ.
ಬೈಕ್, ಸ್ಕೂಟರ್‍ಗಳಲ್ಲಿ ಒಬ್ಬರೇ ಮುಖಮುಚ್ಚುವ ಹೆಲ್ಮೆಟ್ ಧರಿಸಿದ್ದಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಹೊಸ ನಿಯಮವನ್ನು ಬಿಬಿಎಂಪಿ ಜಾರಿಗೆ ತಂದಿದೆ.

ಇದರಿಂದ ಒಬ್ಬರೇ ಇದ್ದೇವೆ, ಯಾಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ವಾದ ಮಾಡುತ್ತಿದ್ದ ವಾಹನ ಸವಾರರಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಿದೆ. ಮಾಸ್ಕ್ ವಿಚಾರದಲ್ಲಿ ಬಿಬಿಎಂಪಿ ಮಾರ್ಷಲ್‍ಗಳ ಜೊತೆ ಜಗಳಕ್ಕೆ ನಿಲ್ಲುತ್ತಿದ್ದ ಜನರಿಗೆ ಕಡಿವಾಣ ಹಾಕಲು ಹೊಸ ನಿಯಮ ಜಾರಿಗೆ ತಂದಿದೆ.
ಬಿಬಿಎಂಪಿಯ ಹೊಸ ರೂಲ್ಸ್ ಬಗ್ಗೆ ಮತ್ತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬರಿದಾಗಿರುವ ಖಜಾನೆ ತುಂಬಿಸಿಕೊಳ್ಳಲು ಹೊಸ ರೂಲ್ಸ್ ಮೊರೆ ಹೋಗಿದೆಯಾ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
5 ವರ್ಷದೊಳಗಿನ ಮಕ್ಕಳಿಗೆ ವಿನಾಯಿತಿ
5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಇಲ್ಲ. 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಹೋಟೆಲ್ ನಲ್ಲಿ ತಿಂಡಿ, ಟೀ, ಕಾಫಿ ಕುಡಿಯುವಾಗ ಮಾಸ್ಕ್ ಬೇಕಿಲ್ಲ. ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಬೇಕಿಲ್ಲ. ಕಿವಿ ಶ್ರವಣ ಸಾಧನ ಅಳವಡಿಕೆಗೆ ತೊಂದರೆ ಆದರೆ ಮಾಸ್ಕ್ ಬೇಕಿಲ್ಲ. ತೀವ್ರ ಉಸಿರಾಟದ ತೊಂದರೆ, ಹಲ್ಲಿನ ತೊಂದರೆ ಇದ್ದರೆ ಮಾಸ್ಕ್ ಬೇಕಿಲ್ಲ. ಆದರೆ ಇದಕ್ಕೆ ವೈದ್ಯರ ಸಲಹಾ ಚೀಟಿ ಜೊತೆಯಲ್ಲೇ ಇರಬೇಕಂತೆ.
ದಂಡ ವಸೂಲಿ ಹಿಂದೆ ಖಜಾನೆ ಭರ್ತಿಯಾ ಪ್ಲ್ಯಾನ್..?
ಕಾರಿನಲ್ಲಿ ಒಬ್ಬರೇ ಇದ್ದರೂ ಪೆÇಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳು ದಂಡ ವಸೂಲಿ ಹಿನ್ನಲೆಯಲ್ಲಿ ಬಹುತೇಕ ಜನರು ಮಾಸ್ಕ್ ಧರಿಸಿಯೇ ವಾಹನಗಳ ಚಾಲನೆ ಮಾಡಬೇಕು. ಕಾರಿನಲ್ಲಿ ಒಬ್ಬರೇ ಇದ್ದಾಗ ಬಹುತೇಕರು ಮಾಸ್ಕ್ ಧರಿಸಿ ಚಾಲನೆ ಮಾಡುತ್ತಿರಲಿಲ್ಲ.
ಆದರೆ, ಒಂಟಿಯಾಗಿ ಕಾರು, ಬೈಕ್ ಓಡಿಸುವ ಸವಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಕಲಿಲ್ಲ ಎಂದರೆ ದಂಡ ಗ್ಯಾರಂಟಿ. ಮಾಸ್ಕ್ ಹಾಕದಿದ್ದರೆ 250 ರೂ. ದಂಡ ಕಟ್ಟಲೇಬೇಕು. ಇಂದಿನಿಂದಲೇ ಬಿಬಿಎಂಪಿ ಈ ನಿಯಮವನ್ನು ಜಾರಿಗೊಳಿಸಿದೆ.
ಮತ್ತೊಂದೆಡೆ, ಹೊಸ ಮಾಸ್ಕ್ ರೂಲ್ಸ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಮಾಸ್ಕ್ ಹಾಕದವರಿಗೆ 1000ರೂ. ದಂಡ ಹೆಚ್ಚಿಸಿದಾಗ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜನರ ಆಕ್ರೋಶದ ಕಟ್ಟೆಯೊಡೆಯುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ದಂಡದ ಮೊತ್ತವನ್ನು 1000ರೂ.ನಿಂದ 250ಕ್ಕೆ ಇಳಿಸಿತ್ತು.

ದಂಡದ ಮೊತ್ತ ಇಳಿಸುತ್ತಿದ್ದಂತೆ ಮತ್ತೊಂದು ರೂಪದಲ್ಲಿ ದಂಡ ವಸೂಲಿಗೆ ಬಿಬಿಎಂಪಿ ಮುಂದಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಖಜಾನೆ ಖಾಲಿ ಆಗಿದ್ದು, ದಂಡದ ರೂಪದಲ್ಲಿ ಖಜಾನೆ ತುಂಬಿಸಿಕೊಳ್ಳಲು ಬಿಬಿಎಂಪಿ ಹೊರಟಿದೆಯಾ ಎಂದು ಕಿಡಿಕಾರಿದ್ದಾರೆ.
ಹೊಸ ನಿಯಮದ ಬಗ್ಗೆ ಬೆಂಗಳೂರಿನ ಕಾರು ಚಾಲಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಮಾಸ್ಕ್ ಧರಿಸಬೇಕು. ಕಾರು ಚಾಲಕರಿಗೆ ಮೊದಲೇ ಬಾಡಿಗೆ ಇಲ್ಲ, ಅಂಥದ್ದರಲ್ಲಿ ದಂಡ ಎಲ್ಲಿಂದ ಕಟ್ಟಬೇಕು. ಆದರೆ, ಒಬ್ಬರೇ ಇದ್ದರೂ ಮಾಸ್ಕ್ ಧರಿಸಬೇಕು. ಇಡೀ ದಿನ ಕಾರಿನಲ್ಲೇ ಇರುತ್ತೇವೆ. ಇಡೀ ದಿನ ಒಬ್ಬರೇ ಇದ್ದರೂ ಮಾಸ್ಕ್ ಹಾಕಿಕೊಳ್ಳಬೇಕು ಎಂದರೆ ನಾವು ಶುದ್ಧ ಗಾಳಿ ಉಸಿರಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








