( Rajyotsava award ) ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು..?
( Rajyotsava award ) ರಾಜ್ಯ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ – 2020 ಪಟ್ಟಿಯನ್ನು ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕವು 65ನೇ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಮಹತ್ವದ ಸಂದರ್ಭದ ಸಲುವಾಗಿ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು..?
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದಿಂದಿ ನೀಡಲಾಗುವ ಎರಡನೇ ಅತ್ಯನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಆಯ್ದು ಅವರಿಗೆ ಈ ಪ್ರಶಸ್ತಿ ನೀಡಲಾಗುವುದು. ಸಾಮಾನ್ಯವಾಗಿ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 1 ( ಕನ್ನಡ ರಾಜ್ಯೋತ್ಸವ) ದಿನದಂದು ರಾಜ್ಯದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ.
ಇದನ್ನೂ ಓದಿ : 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಪುರಸ್ಕøತರ ಪಟ್ಟಿ ಹೀಗಿದೆ
ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಗೌರವಧನ, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕøತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಪ್ರಕಟಿಸುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿ ಇತಿಹಾಸ ಏನು..?
ರಾಜ್ಯೋತ್ಸವ ಪ್ರಶಸ್ತಿಯ ಇತಿಹಾಸವನ್ನು ನೋಡೋದಾದ್ರೆ 1966ರಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಗಳು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ.
ಈ ಬಾರಿ ನಾಟ್ಯ ವಿಧೂಷಿ ಜ್ಯೋತಿ ಪಟ್ಟಾಭಿರಾಮ್, ಸಾಹಿತಿ ರಾಮಣ್ಣ ಬ್ಯಾಟಿ ಸೇರಿದಂತೆ ಒಟ್ಟು 65 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಪುರಸ್ಕೃತರ ಪಟ್ಟಿ ಇಲ್ಲಿದೆ.
ಸಾಹಿತ್ಯ ಕ್ಷೇತ್ರ
1. ಪ್ರೋ ಸಿಪಿ ಸಿದ್ಧಾಶ್ರಮ, ಧಾರವಾಡ
2. ವಿ. ಮುನಿ ವೆಂಕಟಪ್ಪ, ಕೋಲಾರ
3. ರಾಮಣ್ಣ ಬ್ಯಾಟಿ ( ವಿಶೇಷ ಚೇತನ), ಗದಗ
4. ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ
5. ಡಿ ಎನ್ ಅಕ್ಕಿ, ಯಾದಗಿರಿ.
ಸಂಗೀತ ಕ್ಷೇತ್ರ
6. ಹಂಬಯ್ಯ ನೂಲಿ, ರಾಯಚೂರು
7. ಅನಂತ ತೇರದಾಳ, ಬೆಳಗಾವಿ
8. ಬಿ.ವಿ ಶ್ರೀನಿವಾಸ್ , ಬೆಂಗಳೂರು ನಗರ
9. ಗಿರಿಜಾ ನಾರಾಯಣ , ಬೆಂಗಳೂರು ನಗರ
10. ಕೆ ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ
ನ್ಯಾಯಾಂಗ
11. ಕೆ.ಎನ್. ಭಟ್, ಬೆಂಗಳೂರು
12. ಎಂಕೆ ವಿಜಯಕುಮಾರ್, ಉಡುಪಿ
ಮಾಧ್ಯಮ
12. ಸಿ. ಮಹೇಶ್ವರನ್, ಮೈಸೂರು
14. ಟಿ. ವೆಂಕಟೇಶ್ (ಈ ಸಂಜೆ), ಬೆಂಗಳೂರು
ಯೋಗ
15. ಡಾ. ಎ.ಎಸ್. ಚಂದ್ರಶೇಖರ್, ಮೈಸೂರು
ಶಿಕ್ಷಣ ಕ್ಷೇತ್ರ
16. ಎಂ.ಎನ್. ಷಡಕ್ಷರಿ, ಚಿಕ್ಕಮಗಳೂರು
17. ಡಾ. ಆರ್ ರಾಮಕೃಷ್ಣ, ಚಾಮರಾಜನಗರ
18. ಡಾ. ಎಂಜಿ ಈಶ್ವರಪ್ಪ, ದಾವಣಗೆರೆ
19. ಡಾ. ಪುಟ್ಟಸಿದ್ದಯ್ಯ, ಮೈಸೂರು
20. ಅಶೋಕ್ ಶೆಟ್ಟರ್, ಬೆಳಗಾವಿ
21. ಡಿಎಸ್ ದಂಡಿನ್, ಗದಗ
ಹೊರನಾಡು ಕನ್ನಡಿಗರು
22. ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ದಕ್ಷಿಣ ಕನ್ನಡ
23. ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮಾಲುಂಡ, ಮುಂಬೈ.
ಕ್ರೀಡೆ
24. ಎಚ್ಬಿ ನಂಜೇಗೌಡ, ತುಮಕೂರು
25. ಉಷಾರಾಣಿ, ಬೆಂಗಳೂರು ನಗರ
ಸಂಕೀರ್ಣ
26. ಡಾ.ಕೆವಿ ರಾಜು, ಕೋಲಾರ
27. ನಂ. ವೆಂಕೋಬರಾವ್, ಹಾಸನ
28. ಡಾ. ಕೆಎಸ್ ರಾಜಣ್ಣ (ವಿಕಲಚೇತನ), ಮಂಡ್ಯ
29. ವಿ. ಲಕ್ಷ್ಮೀನಾರಾಯಣ (ನಿರ್ಮಾಣ್) ಮಂಡ್ಯ
ಸಂಘ ಸಂಸ್ಥೆ
30. ಯೂಥ್ ಫಾರ್ ಸೇವಾ, ಬೆಂಗಳೂರು
31. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ
32. ಬೆಟರ್ ಇಂಡಿಯಾ, ಬೆಂಗಳೂರು
33. ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ
34. ಧರ್ಮೋತ್ಥಾನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣ ಕನ್ನಡ
ಸಮಾಜಸೇವೆ
35. ಎನ್ ಎಸ್ (ಕುಂದರಗಿ) ಹೆಗಡೆ, ಉತ್ತರ ಕನ್ನಡ
36. ಪ್ರೇಮಾ ಕೋಮಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು
37. ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ
38. ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು
ವೈದ್ಯಕೀಯ ಕ್ಷೇತ್ರ
39. ಡಾ. ಅಶೋಕ್ ಸೊನ್ನದ್, ಬಾಗಲಕೋಟೆ
40 ಡಾ. ಬಿಎಸ್ ಶ್ರೀನಾಥ್, ಶಿವಮೊಗ್ಗ
41. ಡಾ. ಎ. ನಾಗರತ್ನ, ಬಳ್ಳಾರಿ
42. ಡಾ. ವೆಂಕಟಪ್ಪ ರಾಮನಗರ
ಕೃಷಿ
43. ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಬೀದರ್
44. ಎಸ್ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ
45. ಡಾ. ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ
ಪರಿಸರ
46. ಅಮರ ನಾರಾಯಣ, ಚಿಕ್ಕಬಳ್ಳಾಪುರ
47. ಎನ್ಡಿ ಪಾಟೀಲ್, ವಿಜಯಪುರ
ವಿಜ್ಞಾನ/ತಂತ್ರಜ್ಞಾನ
48. ಪ್ರೋ. ಉಡುಪಿ ಶ್ರೀನಿವಾಸ, ಉಡುಪಿ
49. ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ
ಸಹಕಾರ
50. ಡಾ. ಸಿಎನ್ ಮಂಜೇಗೌಡ, ಬೆಂಗಳೂರು
ಬಯಲಾಟ
51. ಕೆಂಪವ್ವ ಹರಿಜನ, ಬೆಳಗಾವಿ
52. ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ
ಯಕ್ಷಗಾನ
53. ಬಂಗಾರ್ ಆಚಾರಿ, ಚಾಮರಾಜನಗರ
54. ಎಂಕೆ ರಮೇಶ್ ಆಚಾರ್ಯ, ಶಿವಮೊಗ್ಗ
ರಂಗಭೂಮಿ
55. ಅನಸೂಯಮ್ಮ, ಹಾಸನ
56. ಎಚ್. ಷಡಾಕ್ಷರಪ್ಪ, ದಾವಣಗೆರೆ
57. ತಿಪ್ಪೇಸ್ವಾಮಿ, ಚಿತ್ರದುರ್ಗ
ಚಲನಚಿತ್ರ
58. ಬಿಎಸ್ ಬಸವರಾಜ್, ತುಮಕೂರು
59. ಎ.ಟಿ. ರಘು, ಕೊಡಗು
ಚಿತ್ರಕಲೆ
60. ಎಂಜೆ ವಾಚೇದ್ ಮಠ, ಧಾರವಾಡ
ಜಾನಪದ
61. ಗುರುರಾಜ ಹೊಸಕೋಟೆ, ಬಾಗಲಕೋಟೆ
62. ಡಾ. ಹಂಪನಹಳ್ಳಿ ತಿಮ್ಮೇಗೌಡ, ಹಾಸನ
ಶಿಲ್ಪಕಲೆ
63. ಎನ್ಎಸ್ ಜನಾರ್ದನ ಮೂರ್ತಿ, ಮೈಸೂರು
ನೃತ್ಯ
64. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್
ಜಾನಪದ/ತೊಗಲು ಗೊಂಬೆಯಾಟ
65. ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










