ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ – ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Karnataka State Police recruitment
ಬೆಂಗಳೂರು, ಅಕ್ಟೋಬರ್29: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. Karnataka State Police recruitment

ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ), ಇ.ಇ.ಜಿ ತಂತ್ರಜ್ಞರು, ಪ್ರಯೋಗಾಲಯ ಸೇವಕರ ಕಲ್ಯಾಣ – ಕರ್ನಾಟಕೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಅಕ್ಟೋಬರ್ 27, 2020 ರಿಂದ ಅರ್ಜಿ
ನೇಮಕಾತಿ ಪ್ರಾರಂಭವಾಗಿದ್ದು, 25 ನವೆಂಬರ್ 2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ :
ಪ್ರಯೋಗಾಲಯ ಸಹಾಯಕರು
ಇಇಜಿ ತಂತ್ರಜ್ಞರು
ಪ್ರಯೋಗಾಲಯ ಸೇವಕರು
ಆಸಕ್ತ ಅಭ್ಯರ್ಥಿಗಳು ನಿಗದಿತ ಸ್ವರೂಪದಲ್ಲಿ ಹುದ್ದೆಗಳಿಗೆ 25 ನವೆಂಬರ್ 2020 ರಂದು ಸಂಜೆ 6 ಗಂಟೆ ಅಥವಾ ಮೊದಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25 ನವೆಂಬರ್ 2020
ಸಾಮಾನ್ಯ ವರ್ಗ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100.
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್‌ನ ಪ್ರತಿಯನ್ನು ಇಟ್ಟು ಕೊಂಡಿರಬೇಕು.
ಬಿಇಎಲ್ ಬೆಂಗಳೂರು – ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ :
ಇ.ಇ.ಜಿ ತಂತ್ರಜ್ಞರು
ವಿಜ್ಞಾನ ಪದವಿ ಹೊಂದಿರಬೇಕು.
ಇ.ಇ.ಜಿ ತಾಂತ್ರಿಕ ಕೋರ್ಸ್/ಮೆಡಿಕಲ್ ಲ್ಯಾಬ್‍ರೆಟರಿ ಟೆಕ್ ಕೋರ್ಸ್‍ನಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು ಅಥವಾ
ಯಾವುದೇ ಇತರೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ)
ಸಿನಿಮಾಟೋಗ್ರಫಿಯಲ್ಲಿ ಅಥವಾ ಪೋಟೋಗ್ರಫಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು
ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದಿಂದ ಮಾನ್ಯತೆ ಹೊಂದಿರುವಂತಹ ಸಂಸ್ಥೆಗಳಿಂದ ಹೊಂದಿರತಕ್ಕದ್ದು.
ಕನಿಷ್ಠ ಒಂದು ವರ್ಷ ಪ್ರಾಯೋಗಿಕ ಅನುಭವದ ಜೊತೆಗೆ ಅನಾಲಾಗ್ ಮತ್ತು ಡಿಜಿಟಲ್ ಪೋಟೋಗ್ರಫಿ ಉಪಕರಣಗಳ ನಿರ್ವಹಣೆಯನ್ನು ವಿಡಿಯೋಗ್ರಫಿ ಸಹಿತ ಹೊಂದಿರಬೇಕು.
ಪ್ರಯೋಗಾಲಯ ಸೇವಕರು
ಪಿಯುಸಿ ಅಥವಾ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ
ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ..?
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in ಗೆ ಭೇಟಿ ನೀಡಿ, ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಅಂಚೆ ಮೂಲಕ ಅಥವಾ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ.
ಆನ್‌ಲೈನ್ ಅರ್ಜಿ ಸಲ್ಲಿಸಲು http://fsl45p.ksp-online.in/ ಈ ವೆಬ್ಸೈಟ್ ಲಿಂಕ್ ಗೆ ಭೇಟಿ ನೀಡಿ
ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು https://rb.gy/wcyyrb ಈ ಲಿಂಕ್ ಮೇಲೆ
ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








