Nalin Kumar Kateel
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಸಮರದ ಕಣ ರಂಗೇರಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ. ಇದೀಗ ಈ ಯುದ್ಧವನ್ನು ಗೆಲ್ಲಲು ಬಿಜೆಪಿ ಪಂಚ ಪಾಂಡವರನ್ನು ಕಳುಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶಿರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಹೇಳಿಕೊಂಡಿದ್ದಾರೆ. ಹೌದು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ನಳಿನ್ ಕುಮಾರ್ ಕಟೀಲ್ ಅವರು ಶಿರಾದಲ್ಲಿ ಹುಲಿಯಾ ಮುಂತಾದ ಕಾಡು ಪ್ರಾಣಿಯ ಕಾಟ ಆರಂಭವಾಗಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿದ ಕಟೀಲ್ ಬಿಜೆಪಿ ಈ ಚುನಾವಣೆಯನ್ನು ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಿರಾ ಕ್ಷೇತ್ರದ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿರುವ ಕಟೀಲ್ ನಾವು ಈ ಯುದ್ದದಲ್ಲಿ ಗೆಲ್ಲುತ್ತೇವೆ. ಧರ್ಮಕ್ಕೆ ಯಾವತ್ತೂ ಜಯ ಸಿಗುತ್ತದೆ ಎಂದಿದ್ದಾರೆ. ಇನ್ನೂ ಈ ಧರ್ಮಯುದ್ದವನ್ನು ನಾವು ಪಂಚ ಪಾಂಡವರಿಗೆ ವಹಿಸಿದ್ದೇವೆ. ಯುದಿಷ್ಠಿರನಾಗಿ ಸುರೇಶ್ ಗೌಡ್ರು, ವಿಜಯೇಂದ್ರ ಅವರು ಭೀಮನಾಗಿ, ಪ್ರತಾಪ್ ಸಿಂಹ ಅವರು ಅರ್ಜುನನಾಗಿ, ರವಿಕುಮಾರ್ ಅವರು ನಕುಲನಾಗಿ ಮತ್ತು ನಾರಾಯಣಸ್ವಾಮಿಯವರು ಸಹದೇವರಂತೆ ಎಂದು ಕಟೀಲ್ ಹೇಳಿದ್ದಾರೆ.
ಅಲ್ಲದೇ ಮಹಾಭಾರತದಲ್ಲಿ ಕೊನೆಗೆ ಜಯ ಸಿಕ್ಕಿದ್ದು ಧರ್ಮಕ್ಕೆ ಮತ್ತು ಪಾಂಡವರಿಗೆ. ಇವರನ್ನೆಲ್ಲಾ ರಕ್ಷಿಸಲು ಶ್ರೀಕೃಷ್ಣ ಪರಮಾತ್ಮನಂತೆ ಗೋವಿಂದ ಕಾರಜೋಳ ಅವರಿದ್ದಾರೆ ಎಂದು ಕಟೀಲ್ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟ ಕಟೀಲ್ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಮೊದಲು ಅವರು ಮಾತನಾಡುವುದನ್ನು ಕಲಿಯಲಿ. ನನ್ನ ಧಮ್ ಬಗ್ಗೆ ಪ್ರಶ್ನಿಸಿರುವ ಅವರು, ಚಿದಂಬರಂ ಮುಂದೆ ನಿಂತು ಮಾತನಾಡುವ ಧಮ್ ಅನ್ನು ತೋರಿಸುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.
Nalin Kumar Kateel
ಅರ್.ಆರ್ ನಗರಕ್ಕೆ `ಡಿ ಬಾಸ್’ ಎಂಟ್ರಿ, ಶಿರಾಕ್ಕೆ ಹುಲಿಯಾ; ರಂಗೇರಿದ ಉಪಕದನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel