ಅಯ್ಯೋ.. ಮುನಿರತ್ನ ತಾಯಿಯನ್ನು ಮಾರಾಟ ಮಾಡಲಿಲ್ಲವೇ ? ಡಿಕೆಶಿ ಪ್ರಶ್ನೆ byelection campaign criticized
ಬೆಂಗಳೂರು, ಅಕ್ಟೋಬರ್29: ಆರ್.ಆರ್ ನಗರ ಉಪಚುನಾವಣೆಯ ಪ್ರಚಾರದ ವೇಳೆ ಮುನಿರತ್ನ ತನ್ನ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರು. byelection campaign criticized

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅಯ್ಯೋ.. ಅವರು ತಾಯಿಯನ್ನ ಮಾರಲಿಲ್ಲವೇ? ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಮಾರಲಿಲ್ಲವೇ? ಮತದಾರರನ್ನು ಮಾರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅವರು ತಾಯಿಯನ್ನು ಮಾರಾಟ ಮಾಡಿರುವುದು ಸತ್ಯ. ತಾಯಿಯನ್ನೂ ಮಾರಿದ್ದಾರೆ, ಮತದಾರರನ್ನೂ ಮಾರಿದ್ದಾರೆ ಎಂದು ಡಿಕೆಶಿ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಚೀನಾಕ್ಕೆ ನಮ್ಮ ಮೇಲೆ ಕಣ್ಣಿಡಲು ಧೈರ್ಯವಿಲ್ಲ – ಶಿವರಾಜ್ ಸಿಂಗ್ ಚೌಹಾನ್
ಈ ಮೊದಲು ಮುನಿರತ್ನ ತನ್ನ ತಾಯಿಯನ್ನು ಬಿಜೆಪಿಗೆ ಮಾರಾಟ ಮಾಡಿದ್ದಾನೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗ ಪ್ರತಿಕ್ರಿಯೆ ನೀಡಿದ್ದ ಮುನಿರತ್ನ, ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ನನ್ನ ತಾಯಿ ಬಗ್ಗೆ ಮಾತಾಡಿದ್ದಾರೆ. ತಾಯಿಯನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದರು.
ಇಲ್ಲ ಸಲ್ಲದ ಆರೋಪಗಳ ಮೂಲಕ ಪ್ರಚಾರ ಮಾಡುವವರಿಗೆ ನನ್ನ ವಿರೋಧವಿಲ್ಲ. ಆದರೆ ಮೃತಪಟ್ಟಿರುವ ನನ್ನ ತಾಯಿಯನ್ನು ಮಾರಾಟ ಮಾಡಿದ್ದೀರಿ ಎಂದು ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿ ಹೋಗಿದೆ. ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಎಂದು ಕಾಂಗ್ರೆಸ್ ನಾಯಕರನ್ನು ಮುನಿರತ್ನ ಪ್ರಶ್ನಿಸಿದ್ದರು.

ನನಗೆ ಜನ್ಮ ಕೊಟ್ಟ ತಾಯಿಯ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿ, ಟೀಕಿಸಿ ನಾನು ಬೇಡ ಎಂದು ಹೇಳುವುದಿಲ್ಲ. ಚುನಾವಣೆಯಲ್ಲಿ ತನ್ನ ತಾಯಿ ಬಗ್ಗೆ ಮಾತನಾಡೋದು ಏಕೆ? ಮೃತಪಟ್ಟಿರುವ ತಾಯಿಯನ್ನು ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನನ್ನ ತಾಯಿಯನ್ನು ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಮುನಿರತ್ನ ಕಣ್ಣೀರಿಟ್ಟಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv







