ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಯಾವ ನಾಯಿಯಾಗಿದ್ದಾರೆ? : ಹಳ್ಳಿಹಕ್ಕಿ
ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಮಾಜಿ ಸಚಿವ ಹೆಚ್.ವಿಶ್ವನಾಥ್ ನಡುವೆ ಮಾತಿನ ಯುದ್ಧ ಮುಂದುವರಿದಿದೆ.
ಉಪಚುನಾವಣೆ ಬಳಿಕ ಬಿಜೆಪಿ ಸೇರಿದ 17 ಜನರ ಸ್ಥಿತಿ ನಾಯಿ ಪಾಡಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ವಿಶ್ವನಾಥ್ ಕೆಂಡಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಯಾವ ನಾಯಿಯಾಗಿದ್ದಾರೆ ಅಂತಾ ಮೊದಲು ಹೇಳಿ..? ಅವರು ಏನಾಗಿದ್ದಾರೆ ಅಂತಾ ಅರ್ಥ ಮಾಡಿಕೊಂಡು ಉಳಿದವರ ಬಗ್ಗೆ ಮಾತಾಡಲಿ.
ಸಿದ್ದರಾಮಯ್ಯ ಯಾವ ನಾಯಿಯಾಗಿದ್ದಾರೆ? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿ ತನಕ ಓಡಿ ಹೋದವರು ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ವೈಷಮ್ಯ ಮರೆತು ಒಂದಾದ್ರಾ ರಮೇಶ್ ಸಾಹುಕಾರ್, ಡಿಸಿಎಂ ಸವದಿ..!
ಅನಾರ್ಹಗೊಂಡ ಶಾಸಕರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಗುರವಾಗಿ ಮಾತನಾಡಬಾರದು. ಜೆಡಿಎಸ್ ಪಕ್ಷದಿಂದ ಬಂದಾಗ ಯಾವ ನಾಯಿಯಾಗಿದ್ದರು ತಿಳಿಸಲಿ. ಕಾಂಗ್ರೆಸ್ ಪಕ್ಷ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.
ಐದು ವರ್ಷ ಆಡಳಿತ ನಡೆಸಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ 35 ಸಾವಿರ ಅಂತರದಿಂದ ಸೋತು ಬದಾಮಿಗೆ ಓಡಿ ಹೋಗಿದ್ದ ಸಿದ್ದರಾಮಯ್ಯ ಯಾವ ನಾಯಿ ಎಂದು ತಿಳಿಸಲಿ. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಡುವುದನ್ನ ಸಿದ್ದರಾಮಯ್ಯ ನಿಲ್ಲಿಸಲಿ ಎಂದು ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ..
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿ, ಈ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಎಚ್.ವಿಶ್ವನಾಥ್ ವ್ಯಕ್ತಪಡಿಸಿದರು. ಆರ್ ಆರ್ ನಗರ ಹಾಗೂ ಶಿರಾ ಎರಡು ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ.
ಈ ಚುನಾವಣೆಯಲ್ಲಿ ಗೆದ್ದ ಮೇಲೆ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗುತ್ತದೆ. ಯಡಿಯೂರಪ್ಪ ಸರ್ಕಾರಕ್ಕೆ ಜನ ಬೆಂಬಲವಿದೆ ಎಂಬ ಸಂದೇಶ ರವಾನೆ ಆಗುತ್ತದೆ ಎಂದು ವಿಶ್ವನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel