ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಸಿದ್ದರಾಮಯ್ಯ ಕಿಡಿ
ಜನರನ್ನು ದಾರಿ ತಪ್ಪಿಸುತ್ತಿದ್ದೀಯಾ ಕೇಂದ್ರ ಸರ್ಕಾರ ?
ಸರ್ಕಾರದ ಬಳಿ ಕೇವಲ 1.5 ಲಕ್ಷ ಪರೀಕ್ಷಾ ಕಿಟ್ ಗಳಿವೆ
ಕೊರೊನಾ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ವಿರುದ್ದ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸದೆ, ಕೊರೊನಾ ಹರಡುವಿಕೆ ಎರಡನೇ ಹಂತದಲ್ಲಿದೆ ಎಂದು ನಿರ್ಧರಿಸುವುದು, ಜನರನ್ನು ದಾರಿ ತಪ್ಪಿಸುವಂತಿದೆ. ಕೊರೊನಾ ವೈರಸ್ ಪರೀಕ್ಷಾ ಕಿಟ್ ಗಳ ಕೊರತೆ ಇದೆ. ದೇಶದಲ್ಲಿ 130 ಕೋಟಿಗೂ ಹೆಚ್ಚು ಜನ ಇದ್ದಾರೆ. ಸರ್ಕಾರ ಬಳಿ 1.5 ಲಕ್ಷ ಕೊರೊನಾ ಕಿಟ್ ಗಳ ಮಾತ್ರ ಇವೆ. ಕಿಟ್ ಗಳನ್ನು ಪಡೆಯಲು ಬೇಕಾದ ಎಲ್ಲಾ ಮಾರ್ಗಗಳನ್ನು ತಿಳಿಯುವಂತೆ ನಾನು ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


ಸರ್ಕಾರ ಬಳಿ 1.5 ಲಕ್ಷ ಕೊರೊನಾ ಪರೀಕ್ಷಾ ಕಿಟ್ ಗಳಿವೆ. ಅವುಗಳಿಂದ ದಿನಕ್ಕೆ 6000 ಜನರಿಗೆ ಮಾತ್ರ ಪರೀಕ್ಷೆ ಮಾಡಬಹುದು ಎಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನ ವೈರಾಣು ರೋಗ ವಿಭಾಗದ ಮುಖ್ಯಸ್ಥೆ ಹಾಗೂ ಹಿರಿಯ ವಿಜ್ಞಾನಿ ನಿವೇದಿತಾ ಗುಪ್ತಾ ಹೇಳಿಕೆಯನ್ನು ಆಧರಿಸಿ ಖಾಸಗೀ ಮಾಧ್ಯಮವೊಂದು ಸುದ್ದಿ ಮಾಡಿತ್ತು. ಸಿದ್ದರಾಮಯ್ಯನವರು ಇದನ್ನು ಉಲ್ಲೇಖಿಸಿ ಕೆಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ









