ಮಿನಿ ಸಮರ ಸೋತ್ರೆ ಡಿಕೆಶಿ ನಾಯಕತ್ವಕ್ಕೆ ಸಣ್ಣ ಮುಕ್ಕು
ಬೆಂಗಳೂರು : ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಮೂರು ರಾಜಕೀಯ ಪಕ್ಷಗಳ ಪಾಲಿಗೆ ಮಹತ್ವದ್ದಾಗಿದೆ. ಮುಂದೆ ಎದುರಾಗುವ ಸ್ಥಳೀಯ ಚುನಾವಣೆ, ಉಪಚುನವಾಣೆ, ಪಕ್ಷದ ಬೆಳವಣಿಗೆ, ಸಂಘಟನೆ ದೃಷ್ಟಿಯಿಂದ ಈ ಮಿನಿ ಸಮರದಲ್ಲಿ ಗೆಲುವು ಸಾಧಿಸುವುದು ಪ್ರಮುಖ ಪಾತ್ರವಹಿಸಲಿದೆ.
ಅದರಲ್ಲೂ ರಾಜ್ಯ ಕಾಂಗ್ರೆಸ್ ಸಾರಥಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಚುನಾವಣೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಅವರು ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡ ಬಳಿಕ ಬಂದ ಮೊದಲು ಚುನಾವಣೆ ಇದಾಗಿದ್ದು, ಈ ಅಗ್ನಿಪರೀಕ್ಷೆಯಲ್ಲಿ ಡಿಕೆ ಬಾಸ್ ದರ್ಬಾರು ನಡೆಸಲೇಬೇಕಾಗಿದೆ.
ಒಂದು ವೇಳೆ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಗೆದ್ದರೇ ಮುಂದಿನ ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ಇಲ್ಲಿಂದಲೇ ಗೆಲುವಿನ ಅಭಿಯಾನ ಆರಂಭ ಎಂಬಂತೆ ಕಾಂಗ್ರೆಸ್ ನಂಬಿಕೊಂಡಿದೆ. ಪಕ್ಷದ ಸಂಘಟನೆಗೆ ಚೈತನ್ಯ ತರಲು ಪಕ್ಷಕ್ಕೆ ಈ ಚುನಾವಣೆ ಫಲಿತಾಂಶ ಮಹತ್ವದ್ದು.
ಇದನ್ನೂ ಓದಿ : ಬಿಜೆಪಿ ಹಣಬಲದಿಂದ ಗೆಲ್ಲುತ್ತೇವೆ ಎಂಬ ಭಾವನೆಯಲ್ಲಿದೆ : ಟಿ.ಬಿ.ಜಯಚಂದ್ರ
ಸೋತ್ರೆ ಡಿಕೆಶಿ ನಾಯಕತ್ವಕ್ಕೆ ಸಣ್ಣ ಮುಕ್ಕು
ಈ ಚುನಾವಣೆ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದರಲ್ಲೂ ಬಿಜೆಪಿ ವಿರುದ್ಧ ಪ್ರತಿದಿನ ಕಿಡಿಕಾರುತ್ತಲೇ ಬಂದಿರುವ ಟ್ರಬಲ್ ಶೂಟರ್, ಕೇಸರಿ ಪಡೆಗೆ ಟಕ್ಕರ್ ಕೊಡಲೇಬೇಕೆಂದು ಪಣತೊಟ್ಟಿದ್ದಾರೆ.
ಈ ಉಪಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರ ಒಂದು ಭಾಗವಾದರೇ, ಸೋಲು ಕನಕಪುರ ಬಂಡೆಗೆ ಒಂದು ಪಾಠದ ಜೊತೆಗೆ, ಎಚ್ಚರಿಕೆಯ ಗಂಟೆ ಕೂಡ ಹೌದು..!
ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಚುನಾವಣೆಯನ್ನು ಡಿಕೆಶಿ ಎದುರಿಸುತ್ತಿದ್ದಾರೆ. ಇಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಗೆಲ್ಲಿಸಿಕೊಂಡು ಬಾರದ ಇದ್ದಲ್ಲಿ ಪಕ್ಷದಲ್ಲಿ ಅವರ ಮಹತ್ವಕ್ಕೆ ಸಣ್ಣ ಮುಕ್ಕು ಬರಲಿದೆ. ಜೊತೆಗೆ ಅವರ ನಾಯಕತ್ವದ ಬಗ್ಗೆ ಪಕ್ಷದಲ್ಲೇ ಸಣ್ಣ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳಿವೆ.
ಜಾತಿವಾರು ಲೆಕ್ಕಾಚಾರ
ಡಿ.ಕೆ.ಶಿವಕುಮಾರ್ ಒಕ್ಕಲಿಗರ ನಾಯಕರಾಗಲು ನಿರಂತರವಾಗಿ ಪ್ರಯತ್ನಿಸುತ್ತಿಲೇ ಇದ್ದಾರೆ. ಹೀಗಾಗಿ ಒಕ್ಕಲಿಗರ ಪ್ರಾಬಲ್ಯವಿರುವ ರಾಜರಾಜೇಶ್ವರಿ ನಗರ ಕ್ಷೇತ್ರ ಈ ಪ್ರಯತ್ನದ ಮೊದಲ ಫಲಿತಾಂಶವಾಗಲಿದೆ.
ರಾರಾ ಫಲಿತಾಂಶಕ್ಕಿಂತ ಒಕ್ಕಲಿಗ ವೋಟ್ ಶೇರಿಂಗ್ ನಲ್ಲಿ ಡಿಕೆಶಿ ಪ್ರಭಾವ ಎಷ್ಟಿರಲಿದೆ ಎಂಬೋದು ಗೊತ್ತಾಗಲಿದೆ.
ಇದನ್ನೂ ಓದಿ : ಸ್ಯಾನಿಟೈಸರ್ ಬಾಟಲ್ ಮೇಲೆ ಬಿಜೆಪಿ ಅಭ್ಯರ್ಥಿ ಚಿತ್ರ
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲಿಗೆ ಈ ಚುನಾವಣೆ ಭಾರಿ ಮಹತ್ವ ಪಡೆದುಕೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel