ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮೇಯಲು ಬಿಟ್ಟಿದ್ದ ಸಾಕಾನೆಯ ಫೋಟೋ ಹಾಗೂ ಸೆಲ್ಫಿ ತೆಗೆಯಲು ಹೊಗಿದ್ದ ಬೈಕ್ ಸವಾರನೊಬ್ಬ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಸಾಮಾನ್ಯವಾಗಿ ತಿತಿಮತಿಯ ಸಾಕಾನೆ ಶಿಬಿರದ ಸಾಕಾನೆಗಳನ್ನು ಸಂಜೆ ಹೊತ್ತಿನಲ್ಲಿ ಕಾಡಿನ ಮೇವಿಗಾಗಿ ಬಿಡಲಾಗುತ್ತದೆ. ಹೀಗೆ ಶಿಬಿರದ ಆನೆ ಭೀಮನನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿದ್ದು, ಹೆದ್ದಾರಿ ಬದಿಯಲ್ಲಿ ಮೇವು ತಿನ್ನುತ್ತಿದ್ದ. ಈ ವೇಳೆ ಅದೇ ದಾರಿಯಲ್ಲಿ ಬಂದ ಬೈಕ್ ಸವಾರರು ಭೀಮನ ಫೋಟೊ ತೆಗೆದು, ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬೈಕ್ ಸವಾರರ ಹುಚ್ಚಾಟಕ್ಕೆ ಸಿಟ್ಟಾದ ಭೀಮ, ಅವರ ಮೇಲೆ ದಾಳಿಗೆ ಯತ್ನಿಸಿದೆ. ಕೂಡಲೇ ಬೈಕ್ ಬಿಟ್ಟು ಅಲ್ಲಿಂದ ಓಡಿ ಹೋದ ಇಬ್ಬರು ಬೈಕ್ ಸವಾರರು ಅದೃಷ್ಟವಷಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಇನ್ನೂ ಕೋಪದಿಂದ ಕುದಿಯುತ್ತಿದ್ದ ಭೀಮ, ಬೈಕ್ ಮೇಲೆ ತನ್ನ ಆಕ್ರೋಶ ವ್ಯಕ್ತ ಪಡಿಸಿದ್ದಾನೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಇದೇ ಕ್ಯಾಂಪಿನವನಾಗಿದ್ದು, ಪ್ರವಾಸಿಗರು ದಾರಿ ಹೋಕರು, ವಾಹನ ಸವಾರರು ಈ ಆನೆಗಳಿಗೆ ನೀಡುತ್ತಿರುವ ತೊಂದರೆಯಿಂದ ಅರಣ್ಯ ಇಲಾಖೆ ಹೈರಾಣಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








