ಬಕೆಟ್ ರಾಜಕಾರಣಿ ನಾನಲ್ಲ : ಸ್ವಪಕ್ಷದರಿಗೆ ಟಾಂಗ್ ಕೊಟ್ರಾ ಸಿ.ಟಿ.ರವಿ
ಚಿಕ್ಕಮಗಳೂರು : ಸಿ.ಟಿ. ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹಲವು ದಿನಗಳಾದರೂ ಇನ್ನೂ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ನಾನು ಹೊಗಳಿಸಿಕೊಂಡು, ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ. ಹಾಗೆ ಮಾಡಿದ್ದರೆ 2012ಕ್ಕೂ ಮೊದಲೇ ಮಂತ್ರಿಯಾಗುತ್ತಿದೆ ಎಂದು ಖಾರವಾಗಿ ಹೇಳಿದ್ದಾರೆ.
ಸಿ.ಟಿ.ರವಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ಅಲಿಖಿತ ನಿಯಮದಂತೆ ಒಬ್ಬರು ಎರಡು ಹುದ್ದೆ ಅಲಂಕರಿಸುವಂತಿಲ್ಲ.
ಈ ಹಿನ್ನೆಲೆ ಸಿ.ಟಿ. ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಅವರು ರಾಜೀನಾಮೆ ನೀಡುವುದಕ್ಕೂ ಮೊದಲು ಅಲಿಖಿತ ನಿಯಮದ ಬಗ್ಗೆ ಮಾತನಾಡಿ ” ನಮ್ಮ ಪಕ್ಷದಲ್ಲಿ ಒಬ್ಬರು ಎರಡು ಹುದ್ದೆಗಳನ್ನು ಅಲಂಕರಿಸಬಾರದು ಎಂಬ ನಿಯಮವಿದೆ.
ಹಾಗೇ ಕೆಲ ಅಲಿಖಿತ ನಿಮಯಗಳು ನಮ್ಮಲ್ಲಿದ್ದು, ಅವುಗಳನ್ನು ಪ್ರಮುಖ ನಾಯಕರೇ ಉಲ್ಲಂಘಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಮೂಲಕ 75 ವರ್ಷ ದಾಟಿದ್ದರೂ ಅಧಿಕಾರದಲ್ಲಿರುವ ಬಿಎಸ್ ವೈಗೆ ಟಾಂಗ್ ನೀಡಿದ್ದರು. ಆ ಮೂಲಕ ಎರಡೂ ಸ್ಥಾನಗಳಲ್ಲಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : “ಸಿಗಂದೂರು ಕ್ಷೇತ್ರವನ್ನ ಎದುರು ಹಾಕಿಕೊಂಡ್ರೆ ಬಿಎಸ್ ವೈ ನಾಶ”
ಇದೀಗ ಸಿ.ಟಿ ರವಿ ಇಂತಹದ್ದೇ ಹೇಳಿಕೆಯನ್ನು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ರಾಜೀನಾಮೆ ಬಗ್ಗೆ ಮಾತನಾಡುತ್ತ ನಾನು ಹೊಗಳಿಸಿಕೊಂಡು, ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ.
ಹಾಗೆ ಮಾಡಿದ್ದರೆ 2012ಕ್ಕೂ ಮೊದಲೇ ಮಂತ್ರಿಯಾಗುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಾಮಾನ ನನ್ನದಲ್ಲ. ಮಂತ್ರಿ ಸ್ಥಾನ ನನಗೆ ಸಿಕ್ಕಿರುವ ಅಧಿಕಾರ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಸಿಕ್ಕಿರುವ ಜವಾಬ್ದಾರಿ. ಈ ಎರಡರಲ್ಲಿ ಜವಾಬ್ದಾರಿಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿದ ಸಿ.ಟಿ.ರವಿ, ರಾಜರಾಜೇಶ್ವರಿ ನಗರದಲ್ಲಿ 25 ಸಾವಿರ ಹಾಗೂ ಶಿರಾದಲ್ಲಿ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸೋಲುವ ಖಚಿತತೆಯಿಂದ ಇವಿಎಂ ಮೇಲೆ ಆರೋಪ ಮಾಡುತ್ತಿದೆ. ಗೆದ್ದರೆ ಜನಾದೇಶ, ಸೋತರೆ ಇವಿಎಂ ಅಂತಾರೆ. ಈ ರೀತಿ ಜನರನ್ನು ನೀವೆಲ್ಲೂ ನೋಡಲು ಸಾಧ್ಯವಿಲ್ಲ.
ಇವಿಎಂಗೆ ಅಂತರ್ಜಾಲ ಸಂಪರ್ಕ ಇರುವುದಿಲ್ಲ. ಅವರ ಆರೋಪಕ್ಕೆ ಅವರು ಸಾಕ್ಷಿ ನೀಡಿಲ್ಲ. ಚುನಾವಣಾ ಆಯೋಗದ ನೋಟೀಸ್?ಗೆ ಉತ್ತರಿಸಲಾಗದೆ ತಡಬಡಿಸಿದ್ದರು. ಕಾಂಗ್ರೆಸ್ಸಿಗೆ ಇದೊಂದು ಕೆಟ್ಟ ಖಾಯಿಲೆ.
ಇದನ್ನೂ ಓದಿ : ಪಾಕಿಸ್ತಾನದ ಹೆಸರು ಹೇಳಲು ನಮಗೆ ನಾಚಿಕೆ : ಯು.ಟಿ.ಖಾದರ್
ನ್ಯಾಯಾಲಯದ ತೀರ್ಪು ಬಂದರೆ ನ್ಯಾಯಾಧೀಶರನ್ನು ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಆಯೋಗ, ಇವಿಎಂ ಮೇಲೆ ಗೂಬೆ ಕೂರಿಸೋದು ಇವರ ಕೆಲಸ. ಇದೇ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದದ್ದು ಇದೇ ಇವಿಎಂನಲ್ಲಿ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channe