ಅಮೆರಿಕ ಚುನಾವಣೆ – ಟ್ರಂಪ್ ಕೈಹಿಡಿಯುತ್ತಾರಾ ಭಾರತೀಯ ಮತದಾರರು? US presidency 2020
ವಾಷಿಂಗ್ಟನ್, ನವೆಂಬರ್04: ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ, ಮೊದಲ ಹಂತದ ಫಲಿತಾಂಶಗಳು ಹೊರಬೀಳುತ್ತಿದ್ದು, ಇಂದು ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ವರದಿಗಳು ತಿಳಿಸಿದೆ. US presidency 2020
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಬಿಡನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಜೋ ಬಿಡೆನ್ ಮುನ್ನಡೆ ಸಾಧಿಸಿದ್ದರೆ, ಟ್ರಂಪ್ ಹಿನ್ನಡೆ ಕಂಡಿದ್ದಾರೆ.
ಟ್ರಂಪ್ ಅಲಾಸ್ಕಾ, ಅರ್ಕಾನ್ಸಾಸ್, ಕಾನ್ಸಾಸ್, ಕೆಂಟುಕಿ, ಲೂಯಿಸಿಯಾನ, ಮಿಸ್ಸಿಸ್ಸಿಪ್ಪಿ, ನೆಬ್ರಸ್ಕಾ, ಉತ್ತರ ಡಕೋಟಾ, ಒಕ್ಲಹೋಮ, ದಕ್ಷಿಣ ಡಕೋಟ, ಟೆನ್ನೆಸ್ಸೀ, ಪಶ್ಚಿಮ ವರ್ಜೀನಿಯಾ, ವ್ಯೋಮಿಂಗ್, ಇಂಡಿಯಾನಾ, ದಕ್ಷಿಣ ಕೆರೊಲಿನಾ ಮತ್ತು ಉತಾಹ್‌ಗಳನ್ನು ಗೆದ್ದಿದ್ದಾರೆ.
ಬೈಡನ್ vs ಟ್ರಂಪ್ – ಯಾರಿಗೆ ಈ ಬಾರಿ ಶ್ವೇತ ಭವನದ ಅಧಿಪತ್ಯ
ಬಿಡೆನ್ ತನ್ನ ತವರು ರಾಜ್ಯ ಡೆಲವೇರ್, ಯುಎಸ್ ರಾಜಧಾನಿ ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ಕೊಲೊರಾಡೋ, ಕೊಲಂಬಿಯಾ, ಕನೆಕ್ಟಿಕಟ್, ಡೆಲವೇರ್, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ನ್ಯೂ ಹ್ಯಾಂಪ್ಶೈರ್, ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ, ನ್ಯೂಯಾರ್ಕ್, ಒರೆಗಾನ್, ರೋಡ್ ಐಲೆಂಡ್, ವರ್ಮೊಂಟ್, ವರ್ಜೀನಿಯಾ ವಶಪಡಿಸಿಕೊಂಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಚುನಾವಣಾ ಯೋಜನೆಯ ಪ್ರಕಾರ, ಕೊಲೊರಾಡೋ, ಹವಾಯಿ, ಮೊಂಟಾನಾ, ಒರೆಗಾನ್, ಟೆಕ್ಸಾಸ್ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ಈ ಬಾರಿ 2016 ರ ಚುನಾವಣೆಯಲ್ಲಿ ಕಂಡಿದ್ದಕ್ಕಿಂತ ಹೆಚ್ಚಿನ ಮತದಾನವಾಗಿದೆ.
ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಬಿಡೆನ್‌ಗೆ 223 ಎಲೆಕ್ಟ್ರೋಲ್ಸ್ ಮತ್ತು ಟ್ರಂಪ್ ಗೆ 174 ಎಲೆಕ್ಟ್ರೋಲ್ಸ್ ಲಭ್ಯವಾಗಿದೆ. ಮ್ಯಾಜಿಕ್ ಸಂಖ್ಯೆ 270
ಅಮೆರಿಕ ಚುನಾವಣೆಯ ಕುತೂಹಲಕಾರಿ ಫಲಿತಾಂಶದ ಕುರಿತು ತಪ್ಪು ಮಾಹಿತಿ ಹರಡಿ, ಹಿಂಸಾಚಾರಕ್ಕೆ ಎಡೆಮಾಡಿಕೊಡಬಹುದು ಎಂದು ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ ಬುಕ್ ಕೆಲವು ಖಾತೆಗಳನ್ನು ಬಂದ್ ಮಾಡಿರುವುದಾಗಿ ವರದಿಗಳ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ