mahesh babu
ಟೀಂ ಇಂಡಿಯಾ ಕ್ಯಾಪ್ಟನ್… ಕ್ರಿಕೆಟ್ ದಿಗ್ಗಜ , ರನ್ ಗಳ ಸರದಾರ ವಿರಾಟ್ ಕೊಹ್ಲಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 32ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿಗೆ ಕ್ರಿಕೆಟ್ ಅಭಿಮಾನಿಗಳು ಅಷ್ಟೇ ಅಲ್ದೇ ಇನಿ ತಾರೆಯರಿಂದಲೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅದರಂತೆ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಸಹ ಟೀಂ ಇಂಡಿಯಾದ ನಾಯಕ ಕೊಹ್ಲಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.
ತಮ್ಮ ಟ್ವಿಟ್ಟರ್ನಲ್ಲಿ ವಿರಾಟ್ ಕೊಹ್ಲಿಯ ಫೋಟೋ ಹಂಚಿಕೊಂಡಿರುವ ಮಹೇಶ್ ಬಾಬು ”ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಹೀಗೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಭಾರತ ಹೆಮ್ಮೆ ಪಡುವಂತೆ ಆಗಲಿ” ಎಂದು ಹಾರೈಸಿದ್ದಾರೆ.
‘ಅಶ್ಲೀಲತೆ’ ಪ್ರದರ್ಶನ: ಮಾದಕ ನಟಿ ಪೂನಂ ಪಾಂಡೆ ಬಂಧನ
ಸದ್ಯ ಮಹೇಶ್ ಬಾಬು ಅವರ ಪೋಸ್ಟ್ ಗೆ ನೆಟ್ಟಿಗರಿಂದ ಕಮೆಂಟ್ ಗಲು ಲೈಕ್ ಗಳು ಹರಿದುಬರುತ್ತಿದೆ. ಸದ್ಯ ವಿರಾಟ್ ಕೊಹ್ಲಿ ಅವರು ದುಬೈನಲ್ಲಿ ಐಪಿ ಎಲ್ ಟ್ಯೂರ್ನಿಯಲ್ಲಿ ಬ್ಯುಸಿಯಾಗಿದ್ದು, ಅಲ್ಲಿಯೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ವಿರಾಟ್ ಅವರ ಸಾರಥ್ಯದಲ್ಲಿ ಆರ್ ಸಿಬಿ ಈಗಾಗಲೇ ಪ್ಲೇ ಆಫ್ ತಲುಪಿದ್ದು, ಗೆದ್ದು ಬೀಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಇದೇ ತಿಂಗಳ ಅಂತ್ಯದ ವೇಳೆಗೆ ಸಂಜನಾ, ರಾಗಿಣಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
mahesh babu
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








