ಬೆದರಿಕೆಗೆ 5000 ರೂ ಮತ್ತು ಕೊಲೆಗೆ 55000 ರೂ: ಯುಪಿ ಯಲ್ಲಿ ಅಪರಾಧ ಸೇವೆಗಳ ದರ ಚಾರ್ಟ್ ವೈರಲ್ goon services rate chart
ಮುಜಾಫರ್ನಗರ್: ನವೆಂಬರ್06: ಉತ್ತರಪ್ರದೇಶದಲ್ಲಿ ಅಪರಾಧಿಗಳಿಗೆ ಕಾನೂನಿನ ಬಗ್ಗೆ ಯಾವುದೇ ಭಯವಿಲ್ಲದಿರುವಂತೆ ತೋರುತ್ತಿದೆ.
ಹಾಗಾಗಿ ಉತ್ತರ ಪ್ರದೇಶದ ಮುಜಾಫರ್ನಗರ ಮೂಲದ ರೌಡಿ ಗ್ಯಾಂಗ್ ವೊಂದು ಯಾವ ಭಯವೂ ಇಲ್ಲದೆ ಗೂಂಡಾ ಸೇವೆಗಳಿಗಾಗಿ ಅದರ ದರ ಪಟ್ಟಿಯನ್ನು ಪ್ರಕಟಿಸಿದೆ. goon services rate chart
ದರ ಪಟ್ಟಿಯಲ್ಲಿನ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಪ್ರತಿ ಅಪರಾಧಗಳಿಗೆ ರೌಡಿ ಗ್ಯಾಂಗ್ ವಿಧಿಸುವ ಹಣವನ್ನು ಪಟ್ಟಿ ಮಾಡಲಾಗಿದೆ ಮತ್ತು ಯುವಕ ಪಿಸ್ತೂಲ್ ಹಿಡಿದಿರುವುದನ್ನು ಸಹ ಒಳಗೊಂಡಿದೆ.
ಕಾರ್ವಾ ಚೌತ್ ಉಪವಾಸ ಆಚರಿಸಲಾಗದ ಹಿನ್ನೆಲೆ ಆಸ್ಪತ್ರೆಯ ಮಹಡಿಯಿಂದ ಹಾರಿ ಕೋವಿಡ್ ಪಾಸಿಟಿವ್ ಮಹಿಳೆ ಆತ್ಮಹತ್ಯೆ
ಯಾರನ್ನಾದರೂ ಥಳಿಸುವುದು, ಬೆದರಿಸುವುದು ಅಥವಾ ಅವರನ್ನು ಕೊಲೆ ಮಾಡುವುದು ಸೇರಿದಂತೆ ರೌಡಿ ಗ್ಯಾಂಗ್ ಹಣಕ್ಕಾಗಿ ಎಲ್ಲಾ ರೀತಿಯ ಅಪರಾಧಗಳನ್ನು ಮಾಡಲು ಸಿದ್ಧವಾಗಿದೆ.
ಚಾರ್ಟ್ ಪ್ರಕಾರ ರೌಡಿ ಗ್ಯಾಂಗ್ ಜನರನ್ನು ಥಳಿಸಲು 5,000 ರೂ, ಬೆದರಿಕೆಗಳನ್ನು ಒಡ್ಡಲು 10,000 ರೂ, ಗಾಯಗೊಳಿಸಲು 10,000 ರೂ ಮತ್ತು ಕೊಲೆಗೆ 55,000 ರೂ ಶುಲ್ಕವನ್ನು ವಿಧಿಸಿದೆ.
ಈ ಚಾರ್ಟ್ ವೈರಲ್ ಆಗುತ್ತಿದ್ದಂತೆ, ಇದು ಪೊಲೀಸರ ಗಮನವನ್ನೂ ಸೆಳೆದಿದ್ದು, ಅವರು ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ವ್ಯಕ್ತಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದರು. ನಂತರ ಯುವಕನನ್ನು ಚರತವಾಲ್ ಪೊಲೀಸ್ ಠಾಣೆ ಪ್ರದೇಶದ ಚೌಕಡ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಫೋಟೋ ಅಪ್‌ಲೋಡ್ ಮಾಡಿದ ಯುವಕ ಪಿಆರ್‌ಡಿ ಜವಾನ್‌ನ ಮಗ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಶೀಘ್ರದಲ್ಲೇ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶತ್ರುವಿನ ಶತ್ರು ಭಾರತದ ಮಿತ್ರ – ಮಲೇಷ್ಯಾ ಮತ್ತು ಟರ್ಕಿಗೆ ನಿರೀಕ್ಷಿಸದ ರೀತಿಯಲ್ಲಿ ಭಾರತದ ಸೂಕ್ತ ಉತ್ತರ#latestnews #Modiji@narendramodihttps://t.co/MkRMGega6I
— Saaksha TV (@SaakshaTv) November 6, 2020
ಒಣ ಕೆಮ್ಮಿನಿಂದ ತ್ವರಿತ ಪರಿಹಾರಕ್ಕಾಗಿ 5 ಅತ್ಯಂತ ಪರಿಣಾಮಕಾರಿ ಮನೆಮದ್ದುhttps://t.co/WID2PLy5gA
— Saaksha TV (@SaakshaTv) November 5, 2020