ಸುಳ್ಳು ಹೇಳುವ ಕಾಂಗ್ರೆಸ್ ಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ : ಲಕ್ಷ್ಮಣ್ ಸವದಿ
ಬೆಳಗಾವಿ : ಸುಳ್ಳು ಹೇಳಿಕೆ, ಅನಾವಶ್ಯಕ ಆರೋಪಕ್ಕೆ ಕಾಂಗ್ರೆಸಿಗರಿಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ್ ಸವದಿ, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು. ಅನೇಕ ವರ್ಷಗಳ ಅಧಿಕಾರದಲ್ಲಿರುವ ಕಾರಣ ಕಾಂಗ್ರೆಸ್ ನಾಯಕರು ರಾಜಕೀಯ ಪಾಂಡಿತ್ಯ ಹೊಂದಿದ್ದಾರೆ.
ಸುಳ್ಳು ಆರೋಪ ಮಾಡಲೆಂದೇ ಕಾಂಗ್ರೆಸ್ಸಿಗರು ಪಾಂಡಿತ್ಯ ಗಳಿಸಿದ್ದಾರೆ. ಸುಳ್ಳು ಆರೋಪ ಮಾಡುವ ಕಾಂಗ್ರೆಸ್ಸಿಗೆ ವಿಶ್ವದ ಶ್ರೇಷ್ಠ ಪ್ರಶಸ್ತಿ ಹುಡುಕುತ್ತಿದ್ದೇವೆ.
ಸುಳ್ಳು ಹೇಳಿಕೆ, ಅನಾವಶ್ಯಕ ಆರೋಪಕ್ಕೆ ಕಾಂಗ್ರೆಸಿಗರಿಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ. ಪ್ರಶಸ್ತಿ ನೀಡುವ ಚಿಂತನೆ ನಡೆದಿದೆ, ಶಿಫಾರಸನ್ನು ನಾವೇ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ಅತಿವೃಷ್ಟಿಗೆ, ಅನಾವೃಷ್ಟಿಗೆ ಬಿಜೆಪಿನೇ ಕಾರಣ ಎಂದು ಹೇಳುತ್ತಾರೆ. ಮಳೆ ಬಂದರೂ, ಬರದಿದ್ದರೂ, ಗಾಳಿ ಬಿಟ್ಟರೆ, ಬಿಡದಿದ್ದರೆ ಬಿಜೆಪಿಯೇ ಕಾರಣ ಎಂದು ಆರೋಪಿಸುತ್ತಾರೆ.
ನಾಚಿಕೆಯಾಗಬೇಕು ಇದೊಂದು ಸರ್ಕಾರ ಅಂತಾರೇನ್ರೀ : ರೇವಣ್ಣ ಕಿಡಿ
ಸುಳ್ಳು ಹೇಳುವುದನ್ನು ಕಾಂಗ್ರೆಸ್ ನಾಯಕರು ಮೈಗೂಡಿಸಿಕೊಂಡಂತೆ ಕಾಣುತ್ತಿದೆ ಎಂದು ದೂರಿದ ಸವದಿ, ಕೊರೊನಾ ವಿಶ್ವದಲ್ಲಿರುವ ಕಾರಣದಿಂದಾಗಿ ಅವರು ಈ ವಿಚಾರವಾಗಿ ಬಿಜೆಪಿಯನ್ನು ಟೀಕಿಸಿಲ್ಲ.
ಇಲ್ಲವಾಗಿದ್ದಲ್ಲಿ ದೇಶಕ್ಕೆ ಕೊರೊನಾ ತರಲಿಕ್ಕೆ ಬಿಜೆಪಿನೇ ಕಾರಣ ಎನ್ನುತ್ತಿದ್ದರು ಕಾಂಗ್ರೆಸ್‍ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಸವದಿ, ಕಾಂಗ್ರೆಸ್ ಸರ್ಕಾರ ಇದ್ದಾಗ, ವಿನಯ್ ಕುಲಕರ್ಣಿ ಮಂತ್ರಿ ಆಗಿದ್ದರು. ಆಗ ಯೋಗೇಶಗೌಡ ಕೊಲೆ ನಡೆದಿತ್ತು.
ಪ್ರಕರಣದಲ್ಲಿ ವಿನಯ್ ಕುಲಕರ್ಣಿ ತಮ್ಮ ಪ್ರಭಾವ ಹೊಂದಿದ್ದರು ಎಂದು ಆರೋಪಿಸಿ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಂಬಂಧಿಕರು, ಸ್ಥಳೀಯರು ಒತ್ತಾಯಿಸಿದ್ದರು.
ಖಾಸಗಿ ಶಾಲೆ ಮುಖ್ಯಸ್ಥರು ಸೇರಿ ಇಡೀ ದಿನ ಸರಣಿ ಸಭೆ: ಶಾಲೆ ಆರಂಭಕ್ಕೆ ಸಿಗಲಿದ್ಯಾ ಗ್ರಿನ್‍ಸಿಗ್ನಲ್…?
ಆದ್ರೆ ಸಿದ್ದರಾಮಯ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಕೊಡಲು ಹಿಂದೇಟು ಹಾಕಿತ್ತು. ನಮ್ಮ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಈಗ ಪ್ರಕರಣದಲ್ಲಿ ಸಿಬಿಐ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel