ಕೊರೊನಾ ಹರಡುವಿಕೆ ತಡೆಗಟ್ಟಲು ಜಾರಿ ಮಾಡಿದ ಜನತಾ ಕರ್ಫ್ಯೂ ಯಶಸ್ವಿಯಾಗಿದೆ.ಮತ್ತೊಂದೆಡೆ ದೇಶದಲ್ಲಿ ಕೊರೊನಾ ವೈರಸ್ ಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಮಾರ್ಚ್ 31 ರವರೆಗೂ ರಾಜ್ಯದಲ್ಲಿ ಸಾರ್ವಜನಿಕ ಸೇವೆಯನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪಕ್ಕದ ರಾಜ್ಯದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದೇವೆ. ಅದರ ಆಧಾರದ ಮೇಲೆ ಕೆಲ ನಿರ್ಧಾರ ಮಾಡಲಾಗಿದೆ. ನಾಳೆ ಸಾರ್ವಜನಿಕ ಸೇವೆ ರದ್ದು ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಾದ್ಯಂತ ಸಾರ್ವಜನಿಕ ಸೇವೆ ರದ್ದು ಮಾಡಲಾಗಿದೆ. ಏಸಿ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಇಂದಿನಿಂದ 144 ಸೆಕ್ಷನ್ ಜಾರಿ ಆಗಿದೆ. ನಾಳೆಯಿಂದ ಮಾರ್ಚ್ 31 ರವರೆಗೆ ವೈದ್ಯಕೀಯ ಸೇವೆ, ದಿನಸಿ, ಬಿಟ್ಟು ವಾಣಿಜ್ಯ ಸೇವೆ ಸ್ಥಗಿತವಾಗಿದೆ.ಕೊರೊನಾ ಪಾಸಿಟಿವ್ ಕಂಡು ಬಂದಿರುವ ಜಿಲ್ಲೆಗಳಲ್ಲಿ ವಾಣಿಜ್ಯ ಸೇವೆ ಇರುವುದಿಲ್ಲ.
ಇನ್ನೂ ಲಾಕ್ ಡೌನ್ ಆಗುವ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬರೀ ಸಾರ್ವಜನಿಕ ಬಸ್ ಸೇವೆ ಅಷ್ಟೇ ಸ್ಥಗಿತ ಮಾಡಲಾಗಿದೆ. ಟ್ಯಾಕ್ಸಿ, ಆಟೋ, ಎಲ್ಲವೂ ಇರುತ್ತೆ. ವಿದ್ಯಾರ್ಥಿಗಳು ಇದನ್ನು ಬಳಸಿ ಕೊಳ್ಳಬೇಕು.ನಾಳೆ ಪಿಯುಸಿ ಪರೀಕ್ಷೆ ಮುಗಿಯಲಿವೆ ಎಂದು ಹೇಳಿದ್ದಾರೆ
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








