PRK Audio
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೇವಲ ನಟನೆ ಅಷ್ಟೇ ಅಲ್ದೇ ನಿರ್ಮಾಣದಲ್ಲೂ ಹೆಸರು ಮಾಡಿದ್ದಾರೆ. ಅವರ ನಿರ್ಮಾಣದಲ್ಲಿ ಅನೇಕ ಹೊಸಬರ ಸಿನಿಮಾಗಳು ತೆರೆಗಪ್ಪಳಿಸಿವೆ. ಅಪ್ಪು ನಿರ್ಮಾಣ, ಆಡಿಯೋ ಸಂಸ್ಥೆಯನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ. ಇದೀಗ ಪುನೀತ್ ಅವರ ಪಿ ಆರ್ ಕೆ ಆಡಿಯೋ ಸಂಸ್ಥೆ ಯೂಟ್ಯೂಬ್ ನಲ್ಲಿ ಹೊಸ ಸಾಧನೆ ಮಾಡಿದೆ.
ಮೂರು ವರ್ಷಗಳ ಬಳಿಕ ಯೂಟ್ಯೂಬ್ ನಲ್ಲಿ 1 ಮಿಲಿಯನ್ ಸಬ್ ಸ್ಕ್ರೈಬರ್ ಹೊಂದಿರುವ ಸಾಧನೆ ಮಾಡಿದೆ ಪಿ ಆರ್ ಕೆ ಆಡಿಯೋ ಸಂಸ್ಥೆ. ಈ ಸಂತಸವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಿ ಆರ್ ಕೆ ಆಡಿಯೋಗಳನ್ನು ಒಟ್ಟುಗೂಡಿಸಿ ಒಂದು ವಿಡಿಯೋವನ್ನ ಹರಿಬಿಟ್ಟಿದ್ದಾರೆ.
‘ಪೊಗರು’ ರಿಲೀಸ್ ಯಾವಾಗ ಗೊತ್ತಾ : ದಿನಾಂಕ ಘೋಷಿಸಿದ ನಂದಕಿಶೋರ್..!
ಅಂದ್ಹಾಗೆ ಪಿ ಆರ್ ಕೆ ಆಡಿಯೋ ಸಂಸ್ಥೆ ಪ್ರಾರಂಭವಾಗಿ ಸುಮಾರು 3 ವರ್ಷಗಳಾಗಿದೆ. ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಹಾಡುಗಳ ಹಕ್ಕುಗಳನ್ನು ಪಿ ಆರ್ ಕೆ ಖರೀದಿ ಮಾಡಿದೆ. ಪಿ ಆರ್ ಕೆ ಸಂಸ್ಥೆ ಮೊದಲ ಮೊದಲ ಆಡಿಯೋ ಹಕ್ಕು ಪಡೆದಿರುವ ಸಿನಿಮಾ ಅಂಜನೀಪುತ್ರ. ಪವರ್ ಸ್ಟಾರ್ ಅಭಿನಯದ ಈ ಸಿನಿಮಾದ ಆಡಿಯೋ ಹಕ್ಕನ್ನು ಪಿ ಆರ್ ಕೆ ಪಡೆಯುವ ಮೂಲಕ ಆಡಿಯೋ ಲೋಕಕ್ಕೆ ಕಾಲಿಟ್ಟರು. ಸದ್ಯ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಶೂಟಿಂಗ್ ಮುಗಿಯುತ್ತಿದ್ದಂತೆ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಾಜಕೂಮಾರದಲ್ಲಿ ಅಪ್ಪು ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ಅವರು ಮತ್ತೊಮ್ಮೆ ನಾಯಕಿಯಾಗಲಿದ್ದಾರೆ.
PRK Audio
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








