Act 1978
ಲಾಕ್ ಡೌನ್ ಬಳಿಕ ಈ ಹಿಂದೆಯೇ ರಿಲೀಸ್ ಆಗಗಿ ಯಶಸ್ವಿಯಾಗಿರುವ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಆದ್ರೆ ಹೊಸ ಸಿನಿಮಾ ಯಾವುದು ರಿಲೀಸ್ ಆಗಬಹುದು ಎಂಬ ಕುತೂಹಲ ಸಿನಿಪ್ರೇಕ್ಷಕರದ್ದು. ಈ ಮಧ್ಯೆ ಕೊರೊನಾ ಹಾವಳಿ ನಡುವೆ ಸ್ಟಾರ್ ನಟರ ಸಿನಿಮಾಗಳು, ಹೈ ಬಜೆಟ್ ಸಿನಿಮಾಗಳ ರಿಲೀಸ್ ಮಾಡಲು ಫಿಲ್ಮ್ ಮೇಕರ್ಸ್ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಸಿನಿಮಾ ರಿಲೀಸ್ ಆಗುವ ಧೈರ್ಯ ಮಾಡಿದೆ.
ಹೌದು ಕೊರೊನಾ ಸಂಕಷ್ಟದ ನಡುವೆಯೂ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ‘ಆಕ್ಟ್-1978’ ಚಿತ್ರತಂಡ. ಹೌದು ಹೊಸ ಸಿನಿಮಾಗಳನ್ನ ರಿಲೀಸ್ ಮಾಡುದ್ರೆ ಜನ ಥಿಯೇಟರ್ ಗಳತ್ತ ಮುಖ ಮಾಡ್ತಾರಾ. ಹೀಗೆ ನಾನಾ ಗೊಂದಲಗಳಿಂದ ಹಲವು ಸಿನಿಮಾಗಳು ರಿಲೀಸ್ ಹೊಸ್ತಿಲಲ್ಲಿದ್ದರೂ ಬಿಡುಗಡೆ ಮಾಡೋದಕ್ಕೆ ಮೇಕರ್ಸ್ ಹಿಂದೇಟು ಹಾಕ್ತಿದ್ದಾರೆ. ಇದರ ನಡುವೆ ‘ಆಕ್ಟ್-1978’ ಚಿತ್ರ ರಿಲೀಸ್ ಡೆಟ್ ಘೋಷಣೆಯಾಗಿದೆ. ಅಂದ್ಹಾಗೆ ಲಾಕ್ ಡೌನ್ ಬಳಿಕ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಯೂ ‘ಆಕ್ಟ್-1978’ ಗೆ ಇದೆ.
ಸಿನಿಮಾದ ನಿರ್ದೇಶಕ ಮಂಸೋರೆ ಸಿನಿಮಾದ ರಿಲೀಸ್ ಡೇಟ್ ಅನೋನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿನಿಮಾ ಇದೇ ತಿಂಗಳು 20ರಂದು ತೆರೆಗೆ ಬರುತ್ತಿದೆ.ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಆಕ್ಟ್-1798 ಚಿತ್ರ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಂಸೋರೆ “ಲಾಕ್ ಡೌನ್ ಶುರುವಾದಾಗ ಹುಟ್ಟಿದ ಈ ಪ್ರಶ್ನೆಗೆ ಈಗ ನಿಮ್ಮ ಮುಂದೆ ನಮ್ಮ ಉತ್ತರ. ಪ್ರಶ್ನೆ ನಿಮ್ಮದಷ್ಟೇ ಅಲ್ಲಾ, ನಮ್ಮದೂ ಕೂಡ ಆಗಿತ್ತು. ನನಗೇ ನಾನೇ ಅದೆಷ್ಟು ಬಾರಿ ಕೇಳಿಕೊಂಡೆನೋ, ಈ ಸಿನೆಮಾ ಯಾವಾಗ ಬಿಡುಗಡೆಯಾಗುತ್ತದೆ? ಎಲ್ಲಿ ಬಿಡುಗಡೆಯಾಗುತ್ತದೆ? ಇವತ್ತಿನವರೆಗೂ ಇದರ ಬಗ್ಗೆ ನಡೆದದ್ದು ಅದೆಷ್ಟೋ ಚರ್ಚೆಗಳು. ಸಂಪರ್ಕಿಸಿದ್ದು ಸಾಕಷ್ಟು ಜನರನ್ನು. ಹಿರಿಯರು, ಕಿರಿಯರು, ಚಿತ್ರರಂಗದ ಒಳಗೆ, ಹೊರಗೆ, ಅನುಭವಿಗಳು, ಯುವಕರು, ಮಹಿಳೆಯರು, ಪತ್ರಕರ್ತರು, ಥಿಯೇಟರುಗಳ ಮಾಲೀಕರು, ಹೀಗೆ ಸಾಧ್ಯವಾದ ವಲಯದಲ್ಲೆಲ್ಲಾ ಇದರ ಬಗ್ಗೆ ಚರ್ಚೆ ಮಾಡಿ ಕೊನೆಗೂ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 20 ರಂದು ನಮ್ಮ ಸಿನೆಮಾ ಥಿಯೇಟರ್ ನಲ್ಲಿ ತೆರೆಕಾಣಲಿದೆ. ನೂರಾರು ಜನರ ಶ್ರಮ, ನಮ್ಮೆಲ್ಲರ ಕನಸು ನಿಮ್ಮ ಮುಂದೆ ಬರಲಿದೆ. ಈ ಸಿನೆಮಾ ತೆರೆಗೆ ಬರುವುದು ಬರೀ ಸಿನೆಮಾವಾಗಿ ಮಾತ್ರವಲ್ಲಾ, ಸಾವಿರಾರು ಮಂದಿ ಸಿನೆಮಾ ಕುಟುಂಬದ ಭರವಸೆಯ ನಿರೀಕ್ಷೆಯಂತೆ ಇದು ತೆರೆಕಾಣುತ್ತಿದೆ. ಇದರ ಫಲಿತಾಂಶದ ಮೇಲೆ ಸಾವಿರಾರು ಮಂದಿ ಕಾರ್ಮಿಕರು ಮುಂದಿನ ದಿನಗಳ ಭವಿಷ್ಯದ ಕುರಿತು ಇರುವ ಆತಂಕದ ಕಾರ್ಮೋಡ ಸರಿಯುವುದೆಂಬ ನಿರೀಕ್ಷೆಯಲ್ಲಿ ಈ ಸಿನೆಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಪ್ರೇಕ್ಷಕ ಪ್ರಭುಗಳು ಆ ಕಾರ್ಮೋಡವನ್ನು ಸರಿಸುವಿರಿ ಎಂಬ ನಿರೀಕ್ಷೆಯಲ್ಲಿ ನಾನು ಹಾಗೂ ನಮ್ಮ ತಂಡ. ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಿ, ಹರಿಸಿ, ಹಾರೈಸಲು ಪ್ರೇಕ್ಷಕ ಪ್ರಭುಗಳಲ್ಲಿ ಕೋರುವ ACT-1978 ಚಿತ್ರತಂಡ.” ಎಂದು ಬರೆದುಕೊಂಡಿದ್ದಾರೆ.
‘ಪೊಗರು’ ರಿಲೀಸ್ ಯಾವಾಗ ಗೊತ್ತಾ : ದಿನಾಂಕ ಘೋಷಿಸಿದ ನಂದಕಿಶೋರ್..!
ಇನ್ನೂ 3 ದಿನಗಳ ಹಿಂದೆ ಸಿನಿಮಾದ ಟ್ರೇಲರ್ ಕೂಡ ಲಾಂಚ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಹೆಚ್ಚು ಹೆಚ್ಚು ಲೈಕ್ಸ್ ಕಮೆಂಟ್ ಗಳನ್ನ ಟ್ರೇಲರ್ ಗಿಟ್ಟಿಸಿಕೊಳ್ತಿದೆ. ಸಿನಿಪ್ರಿಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರ್ತಾಯಿದೆ. ಟ್ರೇಲರ್ ನಿಂದಲೇ ಇದೊಂದು ವಿಭಿನ್ನ , ಥ್ರಿಲ್ಲರ್ ಹಾಗೂ ಮಹಿಳಾ ಪ್ರಧಾನ ಸಿನಿಮಾವೆಂಬುದು ಗೊತ್ತಾಗ್ತಾಯಿದೆ. ಅಲ್ಲದೇ ಸಿನಿಮಾದಲ್ಲಿ ಟ್ವಿಸ್ಟ್ ಗಳು ಇರಲಿದ್ದು, ಪ್ರೇಕ್ಷಕರನ್ನ ಭರ್ಜರಿಯಾಗಿ ರಂಜಿಸೋದ್ರಲ್ಲಿ ಅನುಮಾನವೇ ಇಲ್ಲ. ರಾಜಕೀಯ, ಕಾನೂನು ವ್ಯವಸ್ಥೆ, ಸಮಾಜದಲ್ಲಿನ ಆಗು ಹೋಗುಗಳು, ಸಿಸ್ಟಮ್, ಮಹಿಳೆಯರ ಮೇಲಿನ ದೌರ್ಜನ್ಯ , ರಿವೇಂಜ್ ಹೀಗೆ ಈ ಅಂಶಗಳ ಸುತ್ತಲೂ ಕಥೆ ಹೆಣೆಯಲಾಗಿದೆ. ಸದ್ಯ ಟ್ರೇಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ.
ಸಿನಿಮಾದಲ್ಲಿ ಯಜ್ಞಾ ಶೆಟ್ಟಿ, ಬಿ ಸುರೇಶ, ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಅವಿನಾಶ್, ಶ್ರುತಿ, ದತ್ತಣ್ಣ, ಅಚ್ಯುತ್ ಕುಮಾರ್, ಶೋಭರಾಜ್, ಕೃಷ್ಣ ಹೆಬ್ಬಾಳೆ, ಶರಣ್ಯ, ರಘು ಶಿವಮೊಗ್ಗ ಸೇರಿದಂತೆ ದೊಡ್ಡ ತಾರಾಬಳಗವಿದೆ. ಡಿ ಕ್ರಿಯೇಶನ್ಸ್ ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ದೇವರಾಜ್ ಅವರು ಬಂಡವಾಳ ಹೂಡಿದ್ರೆ ಮಂಸೋರೆ ಆಕ್ಷನ್ ಕಟ್ ಹೇಳಿದ್ದಾರೆ.
ಒಟ್ಟಾರೆ ಇಂತಹ ಪರಿಸ್ಥಿತಿಯಲ್ಲಿ ಸ್ಟಾರ್ ನಟರ ಹೈಬಜೆಟ್ ಸಿನಿಮಾಗಳ ರಿಲೀಸ್ ಗೂ ಹಿಂದೇಟು ಹಾಕ್ತಿದ್ರೆ ಸ್ಯಾಂಡಲ್ ವುಡ್ ನ ಈ ಹೊಸ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ ದಿಟ್ಟ ತನ ಪ್ರದರ್ಶಿಸಿದೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಹೊಸ ಸಿನಿಮಾಗಳು ಧೈರ್ಯವಾಗಿ ಚಿತ್ರಮಂದಿರಗಳ ಬರುವ ಸಾಧ್ಯತೆ ಇದೆ. ಹೀಗಾಗಿ ಈ ಸಿನಿಮಾಗೆ ಪ್ರೇಕ್ಷಕರು ಹೆಚ್ಚು ಹೆಚ್ಚು ಸಪೋರ್ಟ್ ಮಾಡಬೇಕಾಗಿದೆ.
Act 1978
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel