ಸರ್ಕಾರ ನೌಕರರನ್ನು ತನ್ನ ಗುಲಾಮರನ್ನಾಗಿ ಭಾವಿಸಿದೆ : ಸಿದ್ದರಾಮಯ್ಯ
ಬೆಂಗಳೂರು : ರಾಜ್ಯ ಸರ್ಕಾರವು ನೌಕರರನ್ನು ತನ್ನ ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದೆ ಎಂದು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೊರಡಿಸಿರುವ ಕರ್ನಾಟಕ ಸೇವಾ ಅಧಿನಿಯಮದ ಕರಡು ಅಧಿಸೂಚನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದು ಟೀಕಿಸಿದ್ದಾರೆ.
ಪತ್ರದ ಸಂಪೂರ್ಣ ವಿವವರ ಇಲ್ಲಿದೆ.
ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ದಿನಾಂಕ 27/10/2020 ರಂದು ಕರ್ನಾಟಕ ಸೇವಾ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ಕ್ಕೆ ನಡತೆ-ನಿಯಮಗಳನ್ನು ತರಲು ಉದ್ದೇಶಿಸಿ ಕರಡು ಅಧಿಸೂಚನೆ ಹೊರಡಿಸಿದೆ. ಸದರಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನಿಸಿದಾಗ, ಸರಕಾರವು ನೌಕರರನ್ನು ತನ್ನ ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದ ಹಾಗೆ ಕಾಣುತ್ತಿದೆ.
ನಿಯಮ 10 ರಲ್ಲಿನ ಉಪನಿಯಮಗಳು ಒಂದಕ್ಕೊಂದು ಸಂಪೂರ್ಣವಾಗಿ ವಿರೋಧಾಭಾಸಗಳಿಂದ ಕೂಡಿವೆ. ಒಂದು ಕಡೆ, ಏನೇ ಚಟುವಟಿಕೆಗಳನ್ನು ನಡೆಸಬೇಕೆಂದರೂ, ಏನೇ ಬರೆಯಬೇಕೆಂದರೂ, ಏನೇ ಮಾತನಾಡಬೇಕೆಂದರೂ, ಪ್ರಕಟಿಸಬೇಕೆಂದರೂ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಹೇಳಲಾಗುತ್ತದೆ. ಅದೇ ಅಧಿನಿಯಮದ ಇನ್ನೊಂದು ಉಪನಿಯಮದಲ್ಲಿ ಇದಕ್ಕೆ ಸಂಪೂರ್ಣ ವಿರುದ್ಧವಾದ ನಿಲುವು ಇದೆ.
ಸವದಿಯ `ಮೂರು ಬಾಗಿಲು’ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ
ಸಮಾಜದಲ್ಲಿ ಜ್ಞಾನ-ವಿಜ್ಞಾನ ದ್ವೇಷಿಯಾದ ವಾತಾವರಣ ನಿಧಾನವಾಗಿ ವ್ಯಾಪಿಸುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದಷ್ಟು ಪ್ರಮಾಣದಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುತ್ತಿಲ್ಲ. ಗುಣಮಟ್ಟದ ಪ್ರಕಟಣೆ ಆಗುತ್ತಿಲ್ಲ. ಕಾಲೇಜುಗಳಲ್ಲೂ ಇದೇ ರೀತಿಯ ವಾತಾವರಣವಿದೆ. ನಮ್ಮಲ್ಲಿ ಸಮಾಜ ವಿಜ್ಞಾನ, ಸಾಹಿತ್ಯ, ವಿಜ್ಞಾನ, ರಾಜಕೀಯ, ಆರ್ಥಿಕತೆ, ಪರಿಸರ ಮುಂತಾದ ವಿಚಾರಗಳಲ್ಲಿ ಅತ್ಯಂತ ಕಳಪೆ ಎನ್ನುವ ಕೆಲಸಗಳು ನಡೆಯುತ್ತಿವೆ ಎಂಬ ಜಾಗತಿಕ ಮಟ್ಟದ ವರದಿ/ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಜ್ಞಾನ ವಿಜ್ಞಾನ ಕ್ಷೇತ್ರಗಳಲ್ಲಿ ಅವನತಿಗೊಂಡ ಸಮಾಜವು ಯಾವ ರೀತಿಯಲ್ಲೂ ಏಳಿಗೆ ಆಗಲು ಸಾಧ್ಯವಿಲ್ಲ. ಪ್ರಪಂಚದ ನೂರು ವಿಜ್ಞಾನ ನಗರಗಳಲ್ಲಿ ಬೆಂಗಳೂರು 95 ನೇ ಸ್ಥಾನದಲ್ಲಿದೆ ಎಂಬುದು ನಮಗೆಲ್ಲಾ ನಾಚಿಕೆ ತರಿಸುವ ಸಂಗತಿಯಾಗಿದೆ. ನೌಕರರು, ಉಪನ್ಯಾಸಕರು, ಪ್ರಾಧ್ಯಾಪಕರುಗಳು ತಮ್ಮ ಉದ್ಯೋಗವನ್ನು ನಿಷ್ಠೆಯಿಂದ ಮಾಡುವುದರ ಜತೆಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ಆಗದಂತೆ ಮುಕ್ತವಾಗಿ ಜ್ಞಾನ ವಿಜ್ಞಾನಗಳ ಬೆಳವಣಿಗೆಗೆ ಸರಕಾರವು ಅದಕ್ಕೆ ಪೂರಕವಾಗಿ ಕೆಲಸ ಮಾಡಲು ಅಗತ್ಯವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ.
ಬ್ರಿಟಿಷ್ ಆಡಳಿತವಿದ್ದಾಗ ಮತ್ತು ಆ ನಂತರದಲ್ಲೂ ಸಹ ನಮ್ಮ ರಾಜ್ಯದಲ್ಲಿ ಅತ್ಯತ್ತಮವಾದ ಸಾಹಿತ್ಯ, ಸಮಾಜ ವಿಜ್ಞಾನ, ವಿಜ್ಞಾನಗಳ ಕೆಲಸಗಳು ನಡೆದಿವೆ. ಭಾರತ ಆಡಳಿತ ಸೇವೆಗೆ ಸೇರಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕರ್ನಾಟಕ ಆಡಳಿತ ಸೇವೆಯಲ್ಲಿದ್ದ ತೀ.ನಂ.ಶ್ರೀಕಂಠಯ್ಯ, ಎಚ್.ಎಲ್.ನಾಗೇಗೌಡರು, ನವರತ್ನ ರಾಮರಾಯರು ಮುಂತಾದ ಅನೇಕ ಗಣ್ಯರಿದ್ದಾರೆ. ಅದೇ ರೀತಿ ಅತ್ಯಂತ ಶ್ರೇಷ್ಠ ಸಂಶೋಧನೆಗಳನ್ನು ಮಾಡಿದ ಶಂ.ಬಾ.ಜೋಶಿಯವರು ಶಿಕ್ಷಕರಾಗಿದ್ದರು. ಕನ್ನಡ ಸಂಸ್ಕøತಿ ಮತ್ತು ಕನ್ನಡಿಗರ ಅರಿವನ್ನು ವಿಸ್ತರಿಸುವಲ್ಲಿ ಗಮನಾರ್ಹ ಕೆಲಸ ಮಾಡಿರುವ ಕುವೆಂಪು, ಬೇಂದ್ರೆ ಹಾಗೂ ಮುಂತಾದವರು ಶಾಲಾ-ಕಾಲೇಜು-ವಿಶ್ವ ವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರುಗಳಾಗಿದ್ದರು. ಇಂತಹವರಿಗೆ ಬರೆಯಬೇಡಿ, ಚಿಂತಿಸಬೇಡಿ, ಸಂಶೋಧನೆ ಮಾಡಬೇಡಿ, ಮಾಡುವುದಿದ್ದರೆ ಅನುಮತಿ ಪಡೆಯಲು ಗುಮಾಸ್ತರುಗಳ ಮುಂದೆ ನಿಂತು ಹಲ್ಲುಗಿಂಜಿ ಎಂದಿದ್ದರೆ ಕನ್ನಡ ಸಾಹಿತ್ಯ, ಸಂಸ್ಕøತಿಗಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ಯೋಚಿಸಿ ನೋಡಿ.
ಹನೂರು ಪಟ್ಟಣ ಪಂಚಾಯಿತಿ : ಅಧಿಕಾರಕ್ಕಾಗಿ ಕಾಂಗ್ರೆಸ್-ಬಿಜೆಪಿ ಮೈತ್ರಿ
ಈಗಲೂ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಮೇಲ್ಪಂಕ್ತಿ ಆಗುವ ಕೆಲವು ವಿದ್ವಾಂಸರು ವಿಶ್ವ ವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಇದ್ದಾರೆ. ಮತ್ತೆ ಕೆಲವರು ಸರಕಾರಿ ನೌಕರಿಗಳಲ್ಲೂ ಇದ್ದಾರೆ. ಅದೇ ರೀತಿ ಬರೆಯಬೇಡಿ, ಓದಬೇಡಿ, ಸಂಶೋಧನೆ ಮಾಡಬೇಡಿ ಎಂದರೆ ಸಂಭ್ರಮಿಸುವ, ಖುಷಿಪಡುವ ದಡ್ಡರೂ, ಸೋಮಾರಿಗಳೂ ಇದ್ದಾರೆ. ಸರಕಾರ ತರಲು ಹೊರಟಿರುವ ನಿಯಮಗಳು ಇಂಥವರಿಗೆ, ತೂಕಡಿಸುತ್ತಿದ್ದವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ’. ಸೋಮಾರಿಗಳ ಕಿವಿ ಹಿಂಡಿ ಸಂಶೋಧನೆ , ಅಧ್ಯಯನಗಳಲ್ಲಿ ಗಂಭೀರವಾಗಿ ತೊಡಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಉತ್ತಮ ಕೆಲಸ ಮಾಡುತ್ತಿರುವವರನ್ನು ಮತ್ತಷ್ಟು ಬೆನ್ನು ತಟ್ಟಿ ಪೆÇ್ರೀತ್ಸಾಹಿಸಬೇಕಾಗಿದೆ. ಸರ್ಕಾರಗಳು ಅಧ್ಯಯನ ಮತ್ತು ಸಂಶೋಧನೆಗಳನ್ನು ಪೆÇ್ರೀತ್ಸಾಹಿಸುವ ಬದಲು ನಿಷ್ಕ್ರಿಯಗೊಳಿಸಲು ಹೊರಟಿರುವುದು ಸಾಮಾಜಿಕ ಏಳಿಗೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದ ಸಂಗತಿಯಾಗಿದೆ.
ಆದ್ದರಿಂದ ಸಂವಿಧಾನದ ಆಶಯಗಳನ್ನು ಗೌರವಿಸಿ ಅದಕ್ಕೆ ಬದ್ದವಾಗಿ ನಡೆದುಕೊಂಡು, ಯಾವುದೇ ರೀತಿಯ ಸಾಹಿತ್ಯ, ಸಂಶೋಧನೆ, ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸುತ್ತೇನೆ.
ಕನ್ನಡದ ಕೆಲಸಕ್ಕಾಗಿ, ಏಳಿಗೆಗಾಗಿ ನಮ್ಮ ಸರ್ಕಾರ ಬದ್ಧ : ಬಿಎಸ್ ವೈ
ಅದೇ ರೀತಿಯಲ್ಲಿ ಸರ್ಕಾರಿ ನೌಕರರ ಕುಟುಂಬದವರು ಕೂಡ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ನಿಯಮಗಳನ್ನು ತರಲು ಹೊರಟಿರುವುದು ಸಂಪೂರ್ಣ ಮಾನವ ವಿರೋಧಿಯಾದ ಫ್ಯಾಸಿಸ್ಟ್ ರೀತಿಯ ನಡಳಿಕೆಯಂತೆ ಕಾಣುತ್ತದೆ.
ಗಂಡ ಕೊಲೆಗಾರನಾದರೆ ಪತ್ನಿಗೆ, ಕುಟುಂಬಕ್ಕೆ ಶಿಕ್ಷೆ ಕೊಡಲಾಗುತ್ತದೆಯೇ ? ನೀವು ತರಲು ಹೊರಟಿರುವ ಕಾನೂನು, ಸರಕಾರಿ ನೌಕರ ಸರಕಾರದ ಗುಲಾಮ-ಸರಕಾರಿ ನೌಕರರ ಪತ್ನಿ ಮತ್ತು ಮಕ್ಕಳು ಹಾಗೂ ಅವಲಂಬಿತರು ನೌಕರನ ಗುಲಾಮರು ಎಂದು ನಿರೂಪಿಸಿದಂತಾಗುತ್ತದೆ. ಇದು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ರೀತಿಯ ಧೂರ್ತ ಹಾಗೂ ಅಮಾನವೀಯ ನಿಯಮಗಳನ್ನು ತರಬಾರದು ಎಂದು ನಾನು ಆಗ್ರಹಿಸುತ್ತೇನೆ.
ಬಿದ್ದರೆ ತಜ್ಞರ ಸಮಿತಿಯೊಂದನ್ನು ನೇಮಿಸಿ ಬೇರೆ ಬೇರೆ ದೇಶಗಳಲ್ಲಿ ಯಾವ ಯಾವ ಕಾನೂನುಗಳನ್ನು ಅಳವಡಿಸಿಕೊಂಡಿದ್ದಾರೆಂದು ಅಧ್ಯಯನ ನಡೆಸಬೇಕು. ಬಳಿಕ ಅವುಗಳಲ್ಲಿ ಉತ್ತಮವಾದ ಕಾನೂನುಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕು.
ಸರ್ಕಾರ ಈ ಕುರಿತು ಆತುರ ಪಡದೆ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ ನಿಯಮಗಳನ್ನು ಅಂತಿಮಗೊಳಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel