ಕೊರೊನಾ ಎಫೆಕ್ಟ್ ನಿಂದಾಗಿ ಇಡಿ ರಾಜ್ಯವೇ ಸ್ತಬ್ದವಾಗಿದೆ. ಇಂದಿನಿಂದ ರಾಜ್ಯ ಲಾಕ್ ಡೌನ್ ಆಗಿದೆ. ಬಡವರಿಗಾಗಿ ಇಂದಿರಾ ಕ್ಯಾಂಟಿನಲ್ಲಿ ಉಚಿತ ಆಹಾರ ನೀಡಲಾಗುವುದ ಎಂದು ಸಿ.ಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಇದೀಗ ಇಂದಿರಾ ಕ್ಯಾಂಟಿನ್ ಬಳಿ ಜನ ಹೆಚ್ಚು ಸೇರುತ್ತಿದ್ದಾರೆ ಎನ್ನುವ ಕಾರಣಕ್ಕೆ ಇಂದಿರಾ ಕ್ಯಾಂಟಿನ್ ಸಹ ಬಂದ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ , ಜನ ಹೆಚ್ಚು ಸೇರುತ್ತಿರುವ ಕಾರಣಕ್ಕೆ ಇಂದಿರಾ ಕ್ಯಾಂಟಿನ್ ಬಂದ್ ಮಾಡಲಾಗಿದೆ. ಮಾರ್ಚ್ 31 ರವರೆಗೂ ಮನೆಯಿಂದ ಜನ ಹೊರ ಬರಬಾರದು. ಮನೆಯಿಂದ ಹೊರ ಬಂದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಕ್ರಮ ತೆಗೆದುಕೊಂಡ ನಂತರ ನನ್ನ ದೋಷಿಸಬೇಡಿ.
ಇನ್ನೂ ದಿನಪತ್ರಿಕೆ, ಹಾಲು, ಹಣ್ಣು, ಔಷಧಿಗಳಿಗೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅಗತ್ಯ ವಸ್ತುಗಳನ್ನು ಪಡೆಯಲು ಅಡ್ಡಿ ಮಾಡಬೇಡಿ ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅನಗತ್ಯವಾಗಿ ಹೊರ ಬಂದರೆ ಮಾತ್ರ ಕ್ರಮ ತೆಗೆದುಕೊಳ್ಳುತ್ತಾರೆ.
SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್ಲೈನ್ನಲ್ಲಿ ಚೆಕ್ ಮಾಡಿ
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ನಲ್ಲಿ SIR-2026,...








