New Year
ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಈ ಬಾರಿ ನ್ಯೂಯಿರ್ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡ್ಬೇಕು ಅಂದುಕೊಂಡಿದ್ದವರ ಪ್ಲಾನ್ ಗೆ ಬಿಬಿಎಂಪಿ ತಣ್ಣೀರೆರೆಚಿದೆ. ಹೌದು ಪ್ರತಿ ವರ್ಷ ಹೊಸ ವರ್ಷ ಬಂತೆಂದ್ರೆ ಸಾಕು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಲರ್ ಫುಲ್ ಲೈಟ್ಸ್ , ಮ್ಯೂಸಿಕ್ ಬೀಟ್ಸ್, ಸುತ್ತಲೂ ಜನರೆಲ್ಲಾ ಕುಣಿದುಕುಪ್ಪಳಿಸಿ ಸಂತೋಷದಲ್ಲಿ ತೇಲಾಡ್ತಿರುವ ದೃಷ್ಯ ಕಂಡುಬರುತ್ತಿತ್ತು. ಆದ್ರೆ ಈ ಬಾರಿ ಆ ಮೋಜು ಮಸ್ತಿಗೆಲ್ಲ ಬ್ರೇಕ್ ಬಿದ್ದಿದೆ. ಕೊರೊನಾ ಹಾವಳಿಗೆ ಕಡಿವಾನ ಹಾಕಲು ಬಿಬಿಎಂಪಿ ಇಂತಹದೊಂದು ಕ್ರಮ ತೆಗೆದುಕೊಂಡಿದೆ.
ಈ ವರ್ಷ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆಯುವ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಬಿಬಿಎಂಪಿ ತೀರ್ಮಾನಿಸಿದೆ. ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದ ಎಂ.ಜಿ.ರಸ್ತೆಯ ಹೊಸ ಸಂಭ್ರಮಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂ ಎರಡನೆ ಹಂತದ ಭೀತಿ ಇರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಅವಕಾಶ ನೀಡಬಾರದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಡಿ.31ರ ಮಧ್ಯರಾತ್ರಿಯ ಸಂಭ್ರಮಾಚರಣೆಗೆ ಅವಕಾಶ ನೀಡಿದರೆ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವರ್ಷಾಚರಣೆಗೆ ತಡೆ ನೀಡುವ ಕುರಿತಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹೊಸಗುಡ್ಡದಹಳ್ಳಿ ಅವಘಡಕ್ಕೆ ಬಿಬಿಎಂಪಿಯೇ ನೇರ ಹೊಣೆ
ಅಲ್ಲದೇ ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಸಹ ಈ ಬಗ್ಗೆ ಮಾತನಾಡಿದ್ದು, ಬೀದಿಗೆ ಬಂದು ಸಂಭ್ರಮಾಚರಣೆ ನಡೆಸಿ ಕೊರೊನಾ ಮಹಾಮಾರಿಯನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಮನೆಯಲ್ಲೇ ಸರಳವಾಗಿ ಆಚರಣೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚು ಜನ ಸೇರುವುದರಿಂದ ಕೋವಿಡ್ ಹರಡುವ ಆತಂಕ ಇದೆ.
ಜೀವನ ತುಂಬಾ ಮುಖ್ಯ. ಈ ಹಿಂದೆ ಅನೇಕ ಹಬ್ಬಗಳನ್ನು ಆಚರಣೆ ಮಾಡುವ ಸಮಯದಲ್ಲೂ ಮನವಿ ಮಾಡಿದ್ದೆವು. ಈಗ ಹೊಸ ವರ್ಷ ಇರುವುದರಿಂದ ಹೆಚ್ಚು ಜನ ಸೇರಿ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವುದೇ ಒಳ್ಳೆಯದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಇನ್ನೂ ಸಮಯವಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ವರ್ಷ ವರ್ಷ ಡಿಸೆಂಬರ್ 31 ರ ಮಧ್ಯರಾತ್ರಿ ತುಂಬಿತುಳುಕುತ್ತಿದ್ದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಈ ಬಾರಿ ಖಾಲಿ ಖಾಲಿ ಹೊಡೆಯಲಿವೆ. ಸಂಭ್ರಮಾಚರಣೆಯ ಸೊಬಗಿಲ್ಲದೆ ಬಿಕೋ ಎನ್ನಲಿವೆ. ಹೊಸ ವರ್ಷಾಚರಣೆ ಸಖತ್ತಾಗಿ ಸೆಲೆಬ್ರೇಟ್ ಮಾಡ್ಬೇಕು ಅಂದುಕೊಂಡಿದ್ದವರ ಪ್ಲಾನ್ ಉಲ್ಟಾಪಲ್ಟಾ ಆಗಿದೆ.
New Year
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel