ಅಧಿಕಾರ ದುರುಪಯೋಗ ವಿಷಯದಲ್ಲಿ ಕಾಂಗ್ರೆಸ್ ನಂಬರ್ ಒನ್ : ಸಿ.ಟಿ.ರವಿ
ಹಾಸನ : ಅಧಿಕಾರ ದುರುಪಯೋಗ ವಿಷಯದಲ್ಲಿ ಕಾಂಗ್ರೆಸ್ ನಂಬರ್ ಒನ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ ಎಂಬ ಆರೋಪದ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಡಿಕೆಶಿವಕುಮಾರ್ ದುರುಪಯೋಗದ ಪರಮಾವಧಿ ಮುಟ್ಟಿದವರು.
ಆ ಪರಮಾವಧಿ ಕಾರಣಕ್ಕೆ ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಉಳಿದವರು ಹಾಗೇ ಇರುತ್ತಾರೆ ಎಂದು ಅವರು ಭಾವಿಸಿದ್ದಾರೆ.
ಜನಸ್ನೇಹಿ ಆಡಳಿತ ನೀಡೋದು ಬಿಜೆಪಿಯ ಆಡಳಿತವಾಗಿದೆ. ಕಾಂಗ್ರೆಸ್ ಅವರಿಗಲ್ಲದೆ ಇನ್ಯಾರಿಗೂ ಅಧಿಕಾರ ದುರುಪಯೋಗದ ವಿಷಯದಲ್ಲಿ ನಂಬರ್ ಒನ್ ಸರ್ಟಿಫಿಕೇಟ್ ಸಿಗುವುದಿಲ್ಲ.
ಎ ಯಿಂದ ಝಡ್ ವರೆಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಕೀರ್ತಿ, ಅಪಕೀರ್ತಿ ಇದ್ದರೆ ಅದು ಕಾಂಗ್ರಸ್ಸಿಗೆ ಮಾತ್ರ ಇದನ್ನು ಅರ್ಥ ಮಾಡಿಕೊಂಡು ಡಿಕೆ.ಶಿವಕುಮಾರ್ ಮಾತನಾಡಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿಗೆ ಬಂದ 17ಮಂದಿ ಪಕ್ಷ ಕಟ್ಟಿದವರಲ್ಲ: ಸದಾನಂದಗೌಡ ಹೇಳಿಕೆ ಮರ್ಮವೇನು ಗೊತ್ತಾ..?
ಇದೇ ವೇಳೆ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಬರುವ ಸಂದರ್ಭದಲ್ಲಿ ವಾಗ್ದಾನ ನೀಡಿದವರಿಗೆಲ್ಲ ಅದನ್ನ ಈಡೇರಿಸಿದ್ದಾರೆ.
ಮುನಿರತ್ನ ಅವರಿಗೆ ಏನು ವಾಗ್ದಾನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಕೊಟ್ಟಿರುವುದನ್ನು ಈಡೇರಿಸುತ್ತಾರೆ ಎಂದರು.
ಇನ್ನು ನಾಳೆಯಿಂದ ಕಾಲೇಜುಗಳು ಪುನಾರಂಭ ಆಗುತ್ತಿರುವ ವಿಚಾರವಾಗಿ ಮಾತನಾಡಿ, ವಿದ್ಯಾರ್ಥಿಗಳು ಎಚ್ಚರದಿಂದ ಇದ್ದು, ವಿದ್ಯೆ ಪಡೆಯಬೇಕು.
ಕಾಲೇಜು ಆರಂಭ ಒಳ್ಳೆಯ ವಿಷಯ. ಇದು ವಿದ್ಯಾರ್ಥಿಗಳು, ಮಕ್ಕಳ ಭವಿಷ್ಯದ ಪ್ರಶ್ನೆ. ಈಗ ಕೊರೊನಾ ಕಡಿಮೆಯಾಗುತ್ತಿದೆ.
ಹೀಗಾಗಿ ಶಿಕ್ಷಣ ಸಂಸ್ಥೆಗಳನ್ನ ಹಂತ ಹಂತವಾಗಿ ತರೆಯುವುದು ಸೂಕ್ತ ಎಂಬುದು ನಮ್ಮ ಅನಿಸಿಕೆ.
ಕಾಲೇಜಿಗೆ ಕಳುಹಿಸಿದ ನಂತರ ಯಾರ ಮೇಲೂ ದೂರಬಾರದು ಎಂದು ಪೋಷಕರಿಂದ ಪತ್ರ ಪಡೆಯುತ್ತಿದ್ದೇವೆ ಎಂದು ಸಿ.ಟಿ. ರವಿ ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್ ಕೇಸಲ್ಲಿ ಕಮಲ ಶಾಸಕ ಮತ್ತಿಮೂಡ ಪತ್ನಿ..? ಕೈ ನಾಯಕರ ಆರೋಪವೇನು..!
ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳಿಸುವುದು ಪೋಷಕರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿರುವುದರಿಂದ ಒಪ್ಪಿಗೆ ಪತ್ರ ಕೇಳುತ್ತಿದ್ದೇವೆ.
ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ವಿಷಯದಲ್ಲಿ ಜವಾಬ್ದಾರಿ ಮರೆಯಲ್ಲ. ಕಾಲೇಜಿನ ವಿದ್ಯಾರ್ಥಿಗಳು ತಿಳುವಳಿಕೆ ಉಳ್ಳವರಾಗಿದ್ದಾರೆ. ಹಾಗಾಗಿ, ನಾಳೆ ದೂರಬಾರದು ಎಂದಷ್ಟೇ ಪೋಷಕರ ಪತ್ರ ಪಡೆಯುತ್ತಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel