ಆನ್ ಲೈನ್ ಗೇಮ್ ಗಳಿಗೆ ಕಡಿವಾಣ ಹಾಕಿ : ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯ ಸರ್ಕಾರ ಆನ್ ಲೈನ್ ಗೇಮ್ ಗಳ ಮೇಲೆ ನಿಷೇಧ ಹೇರಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ರಮ್ಮಿ, ಪೋಕರ್ ಸೇರಿ ಆನ್ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.
ಅಧಿಕಾರ ದುರುಪಯೋಗ ವಿಷಯದಲ್ಲಿ ಕಾಂಗ್ರೆಸ್ ನಂಬರ್ ಒನ್ : ಸಿ.ಟಿ.ರವಿ
ನಾನೂ ಕೂಡ ಹಲವು ಯುವಕರು ಈ ಆನ್ಲೈನ್ ಜೂಜಿನಲ್ಲಿ ವ್ಯಸ್ತರಾಗಿರುವುದನ್ನು ಗಮನಿಸಿದ್ದೇನೆ.
ಎಷ್ಟೋ ಕುಟುಂಬಗಳು ಇದರಿಂದ ನಾಶವಾಗಿ ಹೋಗಿದೆ.
ಹಾಗಾಗಿ ಇಂತಹ ಗೇಮ್ಗಳ ಮೇಲೆ ಕಡಿವಾಣ ಬೀಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ಆನ್ ಲೈನ್ ಆಟ ‘ಕೇವಲ ಕೌಶಲ್ಯದ ಆಟ.
ಅದೃಷ್ಟದ ಆಟವಲ್ಲ’ ಎಂಬ ಆಧಾರದ ಮೇಲೆ ಕಾನೂನಿನ ಮಾನ್ಯತೆ ಪಡೆದುಕೊಂಡಿದೆ.
ನಾನು ಈ ವಾದ ಒಪ್ಪುವುದಿಲ್ಲ. ನನ್ನ ಪ್ರಕಾರ, ಹಣವನ್ನು ಬಾಜಿ ಕಟ್ಟಿ ಆಡುವುದು ‘ಜೂಜು’ ಎಂಬುದು ನಿರ್ವಿವಾದ.
ಇಂತಹ ಜೂಜಿಗೆ ವಿಶೇಷವಾಗಿ ಯುವಕರು ಆಕರ್ಷಿತರಾಗಿರುವುದು ದುರಂತ.
ಬಿಜೆಪಿಗೆ ಬಂದ 17ಮಂದಿ ಪಕ್ಷ ಕಟ್ಟಿದವರಲ್ಲ: ಸದಾನಂದಗೌಡ ಹೇಳಿಕೆ ಮರ್ಮವೇನು ಗೊತ್ತಾ..?
ಸರ್ಕಾರ ಈ ಮನೆಹಾಳು ಗೇಮಿಂಗ್ಗಳ ಮೇಲೆ ನಿಷೇಧ ಹೇರಲಿ ಎಂದು ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel