ಮಡಿಕೇರಿ: ನಿದ್ದೆಯ ಮಂಪರಿನಲ್ಲಿ ಬೆಳಗ್ಗೆ ಎದ್ದ ವ್ಯಕ್ತಿಯೋರ್ವ ಮನೆಯ ಬಳಿಯೇ ಇದ್ದ ತೆರೆದ ರಿಂಗ್ ಬಾವಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ ಸಮೀಪದ ಸಿದ್ದಾಪುರದ ಕರಡಿಗೋಡಿನಲ್ಲಿ ಈ ಘಟನೆ ನಡೆದಿದ್ದು, ಕೃಷ್ಣ ಎಂಬಾತನನ್ನು ರಕ್ಷಿಸಲಾಗಿದೆ. ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಪತಿ 55 ವರ್ಷದ ಕೃಷ್ಣ ಎಂಬುವರು ಬೆಳಗ್ಗೆ 5.30ಕ್ಕೆ ಎದ್ದು ಮನೆಯಿಂದ ಹೊರ ಬಂದಿದ್ದಾರೆ.
ಪತಿ ಮನೆಯಿಂದ ಹೊರಬಂದು ಬಹಳ ಹೊತ್ತಾದರೂ ಸುಳಿವು ಸಿಗದೆ ಹಿನ್ನೆಲೆಯಲ್ಲಿ ಪತ್ನಿ ನೆರೆ ಹೊರೆಯವರನ್ನು ವಿಚಾರಿಸಿದ್ದಾರೆ. ಎಲ್ಲರೂ ಸೇರಿ ಹುಡುಕಾಟ ನಡೆಸಿದರೂ ಕೃಷ್ಣ ಅವರ ಸುಳಿವು ಪತ್ತೆಯಾಗಲಿಲ್ಲ.

ಕೆಲವು ಸಮಯದ ಬಳಿಕ ಬಾವಿಯೊಳಗಿನಿಂದ ಸದ್ದು ಕೇಳಿದೆ. ಕೂಡಲೇ ಹೋಗಿ ನೋಡಿದಾಗ ಬಾವಿಯೊಳಗೆ ಕೃಷ್ಣ ಬಿದ್ದಿರುವುದು ಪತ್ತೆಯಾಗಿದೆ. ಅಂದಾಜು 30-40 ಅಡಿ ಆಳದ ಬಾವಿಯೊಳಗೆ ಕೃಷ್ಣ ಬಿದ್ದಿದ್ದರು.
ಅಕ್ಕಪಕ್ಕದವರು ಹಗ್ಗ ಇಳಿಸಿ ಅವರನ್ನು ಮೇಲೆತ್ತುವ ಕಾರ್ಯ ನಡೆಸಲಾಯಿತಾದರು ಫಲಕಾರಿಯಾಗಲಿಲ್ಲ,ಬಳಿಕ ಗೋಣಿಕೊಪ್ಪಲಿನ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಕೃಷ್ಣರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಕೃಷ್ಣ ಅವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








