Amith Sha
‘ಪತ್ರಿಕಾ ಸ್ವಾತಂತ್ರ ಹತ್ತಿಕ್ಕುವವರನ್ನ ಮೋದಿ ಸರ್ಕಾರ ತೀವ್ರವಾಗಿ ವಿರೋಧಿಸುತ್ತೆ’ : ಅಮಿತ್ ಶಾ
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಮಾಧ್ಯಮಗಳ ಪಾತ್ರವನ್ನ ಶ್ಲಾಘಿಸಿದ್ದಾರೆ. ಇದೇ ವೇಳೆ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತೀವ್ರವಾಗಿ ವಿರೋಧಿಸುತ್ತೆ ಎಂದಿದ್ದಾರೆ.
‘#NationalPressDay ಬಳಸಿರುವ ಅಮಿತ್ ಶಾ ಅವರು ‘ಸೋದರತ್ವವು ನಮ್ಮ ಮಹಾನ್ ರಾಷ್ಟ್ರದ ಅಡಿಪಾಯವನ್ನ ಬಲಪಡಿಸಲು ಅವಿರತವಾಗಿ ಶ್ರಮಿಸುತ್ತಿದೆ. ಮೋದಿ ಸರಕಾರ ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಮತ್ತು ಅದನ್ನು ಬಲವಾಗಿ ವಿರೋಧಿಸುವವರನ್ನ ವಿರೋಧಿಸುತ್ತದೆ. ಕೋವಿಡ್-19 ಸಂದರ್ಭದಲ್ಲಿ ನಾನು ಸೋಷಿಯಲ್ ಮೀಡಿಯಾದ ಗಮನಾರ್ಹ ಪಾತ್ರವನ್ನ ಶ್ಲಾಘಿಸುತ್ತೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜನರ ಆಯ್ಕೆಯಲ್ಲ : `ಕೈ’ ನಾಯಕತ್ವದ ವಿರುದ್ಧ ಕಪಿಲ್ ಕಿಡಿ
ಇನ್ನೂ ಉಪರಾಷ್ಟ್ರಪತಿಗಳಾಧ ವೆಂಕಯ್ಯ ನಾಯ್ಡು ಅವರು ಸಹ ಟ್ವೀಟ್ ಮೂಲಕ ಪತಿಕಾ ದಿನದ ಶುಭಹಾರೈಸಿದ್ದಾರೆ. ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಂದು ಎಲ್ಲಾ ಮಾಧ್ಯಮ ವೃತ್ತಿಪರರಿಗೆ ನನ್ನ ನಮಸ್ಕಾರಗಳು. ಪ್ರಜಾಪ್ರಭುತ್ವವನ್ನ ಬಲಪಡಿಸುವಲ್ಲಿ ಮತ್ತು ನಾಗರಿಕರಿಗೆ ಮಾಹಿತಿ ನೀಡುವ ತ್ತು ಸಬಲಗೊಳಿಸುವಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಜನರಿಗೆ ಮಾಹಿತಿ ನೀಡಿದ ಮಾಧ್ಯಮ ಪ್ರತಿನಿಧಿಗಳನ್ನ ನಾನು ಶ್ಲಾಘಿಸುತ್ತೇನೆ’ ಎಂದಿದ್ದಾರೆ. ಅಂದ್ಹಾಗೆ 1966ರಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯಾದ ದಿನವನ್ನು ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.
Amith Sha
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








