dolly dhananjay
ರತ್ನನ್ ಪ್ರಪಂಚದಲ್ಲಿ ‘ ಇನ್ಶೂರೆನ್ಸ್ ಏಜೆಂಟ್ ರತ್ನಾಕರ’ನಾಗಿ ಬರಲಿದ್ದಾರೆ ಡಾಲಿ..!
ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ರತ್ನನ್ ಪ್ರಪಂಚ ಭಾರೀ ಸದ್ದು ಮಾಡ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿರುವ ಧನಂಜಯ್ ಇದೀಗ ‘ರತ್ನನ್ ಪ್ರಪಂಚ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ರತ್ನನ್ ಪ್ರಪಂಚ ಸಿನಿಮಾದ ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಈಗಾಗಲೇ ನಟ ಧನಂಜಯ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿ ನಟ ಧನಂಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ಸದ್ಯ ತೆರೆಬಿದ್ದಿದೆ. ಚಿತ್ರದಲ್ಲಿ ನಟ ಧನಂಜಯ್ ಇನ್ಶೂರೆನ್ಸ್ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು.. ಇನ್ಶೂರೆನ್ಸ್ ಏಜೆಂಟ್ ರತ್ನಾಕರನಾಗಿ ಡಾಲಿ ವಿಭಿನ್ನ ಲುಕ್ ನಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗುತ್ತಿದ್ದಾರೆ. ಹೌದು ಡಾಲಿ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಅವರು ಡಾಲಿ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಕೆಲ ಸಮಯದವರೆಗೂ ಸಿನಿಮಾರಂಗದಿಂದ ದೂರ ಉಳಿದಿದ್ದ ಉಮಾಶ್ರೀ ಅವರು ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಸದ್ಯ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಬಿರಿಸಿನಿಂದ ನಡೆಯುತ್ತಿದೆ. ಈ ಸಿನಿಮಾಗೆ ರೋಹಿತ್ ಪದಕಿ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರು ಬಂಡವಾಳ ಹೂಡುತ್ತಿದ್ದಾರೆ. ಡಾಲಿಗೆ ನಾಯಕಿಯಾಗಿ ರೆಬಾ ಮೋನಿಕಾ ಕಾಣಿಸಿಕೊಳ್ತಾಯಿದ್ದಾರೆ. 
ಇನ್ನೂ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಸಿಬ್ಯುಯಾಗಿರುವ ಡಾಲಿ ಕೈಲಿ ಇನ್ನೂ ಹಲವಾರು ಪ್ರಾಜೆಕ್ಟ್ ಗಳಿವೆ. ಸಲಗ, ಪೊಗರು, ಯುವರತ್ನ, ಡಾಲಿ, ಬಡವ ರಾಸ್ಕಲ್, ಹೆಡ್ ಬುಷ್ , ತೋತಾಪುರ ಮತ್ತು ತೆಲುಗಿನ ‘ಪುಷ್ಪ’ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಅಂದ್ಹಾಗೆ ಡಾಲಿ ಅವರು ಕೇವಲ ನಟನೆಯಷ್ಟೇ ಅಲ್ಲದೇ ನಿರ್ಮಾಕರಾಗಿಯೂ ಕೆಲಸ ಮಾಡಿದ್ದು, ಅವರದ್ದೇ ಬ್ಯಾನರ್ ನ ಅಡಿ ‘ಬಡವ ರಾಸ್ಕಲ್’ ಸಿನಿಮಾ ನಿರ್ಮಾಗೊಂಡಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಡಾಲಿ ಅವರೇ ನಟಿಸಿದ್ದಾರೆ. ಈ ಚಿತ್ರ ಈಗಾಗಲೇ ರಿಲೀಸ್ ಗೆ ರೆಡಿಯಾಗಿದೆ.
dolly dhananjay
ಮರಾಠ ಪ್ರಾಧಿಕಾರ ರಚನೆ | ಸಮಾಜ ಒಡೆಯೋ ಕೆಲಸ ಯಾಕೆ.?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








