ನಿಗಮದಿಂದ ಅಭಿವೃದ್ಧಿ ಅಸಾಧ್ಯ, ನಮಗೆ ಮೀಸಲಾತಿ ಬೇಕು : ಎಂಬಿಪಾ
ಬೆಂಗಳೂರು : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ.
ನಮಗೆ ಶೇಕಡಾ 16 ರಷ್ಟು ಮೀಸಲಾತಿ ಬೇಕು ಎಂದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮುಖ್ಯಮಂತ್ರಿ ಆದೇಶ ಹೊರಡಿಸಿದರ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ರಾಜ್ಯದಲ್ಲಿ ಒಂದೂಕಾಲು ಕೋಟಿ ನಮ್ಮ ಲಿಂಗಾಯತರಿದ್ದಾರೆ.
ಲಿಂಗಾಯತರಲ್ಲೂ ಬಡವರಿದ್ದಾರೆ. ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕಿದೆ. ಮಹಾರಾಷ್ಟ್ರದಲ್ಲಿ ಮರಾಠರಿಗೆ ಶೇ.16 ಮೀಸಲಾತಿಯಿದೆ.
ರಾಜ್ಯದಲ್ಲಿ ನಮ್ಮ ಜನಸಂಖ್ಯೆಯೂ ಹೆಚ್ಚಿದೆ. ಅದಕ್ಕಾಗಿ ಲಿಂಗಾಯಿತರಿಗೆ ಶೇ.16 ಮೀಸಲಾತಿ ನೀಡಲಿ ಎಂದು ಒತ್ತಾಯ ಮಾಡಿದರು.
ಇನ್ನು ಬೇರೆ ಬೇರೆ ನಿಮಗಕ್ಕೆ 50 ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ, ನಮ್ಮ ಸಮುದಾಯಕ್ಕೆ ನೆರವು ಹೆಚ್ಚಿಸಬೇಕು.
ಸಮುದಾಯಕ್ಕಾಗಿ ಕನಿಷ್ಠ ಮೂರ್ನಾಲ್ಕು ಸಾವಿರ ಕೋಟಿ ಮೀಸಲಿಡಬೇಕು. ಹೊರಟ್ಟಿಯವರು ಇದರ ಚಾರ್ಟ್ ಕಳಿಸಿದ್ದಾರೆ. ನಿಗಮದಿಂದ ಸಮಾಜಕ್ಕೆ ಪ್ರಯೋಜನವಿಲ್ಲ.
ನಾನು ಸಮುದಾಯದ ಪ್ರತಿನಿಧಿಯಾಗಿ ಹೇಳುವೆ. ಯಾವುದೋ ಪಕ್ಷದ ಪ್ರತಿನಿಧಿಯಾಗಿ ಕೇಳುತ್ತಿಲ್ಲ. ನಿಗಮವನ್ನ ನೀವು ಮಾಡಿದ್ದೀರಾ.
ಹೆಚ್ಚಿನ ಅನುದಾನ ಕೊಟ್ಟರೆ ನಾನು ಸ್ವಾಗತ ಮಾಡುವೆ. ಕಡಿಮೆ ಅನುದಾನ ಕೊಟ್ಟರೆ ಅಸಮಾಧಾನವಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಒಬಿಸಿಗೆ ನಮ್ಮ ಸಮುದಾಯವನ್ನ ಸೇರಿಸಬೇಕು ಎಂದು ಎಂ ಬಿ ಪಾಟೀಲ್ ಅವರು ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










