jaggesh
ಡಬ್ಬಿಂಗ್ ವಿರುದ್ಧ ಜಗ್ಗೇಶ್ ಕಿಡಿ : ‘ನಿಮ್ಮ ಮನೆ ಪಾಯಿಖಾನೆ ತೊಳೆದು ಸೇವೆ ಮಾಡುವೆ’ ಎಂದ ಜಗ್ಗೇಶ್..!
ಕನ್ನಡ ಸಿನಿಮಾರಂಗದಲ್ಲಿ ಡಬ್ಬಿಂಗ್ ಹಾವಳಿಗೆ ಹಿಂದಿನಿಂದಲೂ ಅನೇಕರ ವಿರೋಧವಿದೆ. ಇವರಲ್ಲಿ ಒಬ್ಬರು ನವರಸ ನಾಯಕ ಜಗ್ಗೇಶ್ ಅವರು. ಹಿಂದಿನಿಂದಲೂ ಡಬ್ಬಿಂಗ್ ವಿರೋಧಿಸುತ್ತಲೇ ಬಂದಿರುವ ಜಗ್ಗೇಶ್ ಅವರು ಇದೀಗ ಮತ್ತೆ ಡಬ್ಬಿಂಗ್ ಬಗ್ಗೆ ಮಾತನಾಡಿದ್ದಾರೆ. ಡಬ್ಬಿಂಗ್ ತಂದು ಕನ್ನಡವನ್ನು ಸರ್ವನಾಶ ಮಾಡಿಬಿಟ್ಟರು ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಪ್ರಭಾವ ಹೆಚ್ಚಾಗುತ್ತಿದೆ. ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಥಿಯೇಟರ್ನಲ್ಲಿ ತೆರೆಕಾಣುತ್ತಿವೆ. ಇದನ್ನು ಪ್ರೇಕ್ಷಕರು ಸಹ ಸ್ವಾಗತಿಸಿದ್ದರು. ಆದ್ರೆ, ಲಾಕ್ಡೌನ್ ಬಳಿಕ ಟಿವಿಯಲ್ಲೂ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಗುತ್ತಿರುವ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್ ಅವರು , “ಡಬ್ಬಿಂಗ್ ಬಗ್ಗೆ ಮಾತಾಡಿದಕ್ಕೆ ಕಾನೂನು ನನಗೆ 3 ಲಕ್ಷ ದಂಡ ವಿಧಿಸಿತು ನನ್ನ ಉದ್ಯಮದ ಪ್ರೀತಿಗೆ ನನಗೆ ಸಿಕ್ಕ ಬಳುವಳಿ ಅದು ಇಂದು ಕನ್ನಡ ಚಿತ್ರರಂಗವಲ್ಲ ಕನ್ನಡಿಗನೇ ಮುಂದೆ ಮಸಣಸೇರುವ ಸ್ಥಿತಿ ತಲುಪುತ್ತಾನೆ. ಈ ವಿಚಾರಕ್ಕೆ ಕೈ ಜೋಡಿಸಿದಾಗ ನನ್ನನ್ನು ಕನ್ನಡ ದ್ರೋಹಿ ಎಂದು ಜರಿದರು. ಕಾನೂನಿನ ಮುಂದೆ ಕನ್ನಡಚಿತ್ರತಂಡ ಕಂಡವರ ಪಾಲಾಯಿತು. ಆ ಕಾರ್ಯ ಮಾಡಿ ಗೆದ್ದವರಿಗೆ ಒಂದು ಪ್ರಶ್ನೆ ಕೇಳಿ, ಅವರ ನೆಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಸೇರಿಸಲು ಹೋರಾಟ ಮಾಡುವ ದಾರಿ ಸಮಯ ಇದೆಯಾ? ಒಂದು ವೇಳೆ ನೀವುಗಳು ಕನ್ನಡ ಚಿತ್ರವನ್ನು ಅಲ್ಲಿಯೂ ಬೇರು ಊರಿಸಿದರೆ, ನನ್ನ ತಾಯಿ ಆಣೆ ನನ್ನ 40 ವರ್ಷದ ಕಲಾ ಸೇವೆ ಬದಿಗೊತ್ತುವೆ. ನಿಮ್ಮ ಮನೆಯ ಪಾಯಿಕಾನೆ 1ವರ್ಷ ತೊಳೆದು ನಿಮ್ಮ ಸೇವೆ ಮಾಡುವೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಡಬ್ಬಿಂಗ್ ತಂದು ಕನ್ನಡವನ್ನ ಸರ್ವನಾಶ ಮಾಡಿಬಿಟ್ಟರು, ಪರಭಾಷಿಗರು ಮೆಲ್ಲಗೆ ನಮ್ಮ ಮೇಲೆ ಸವಾರಿ ಶುರುಮಾಡಿದ್ದಾರೆ ಸ್ವಾಭಿಮಾನವಿದ್ದವರು ಈ ಹುನ್ನಾರ ತಡೆಯಿರಿ ‘ನನ್ನ ಕಾಳಜಿ ಮುಂದಿನ ಪೀಳಿಗೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸಾಲು ಸಾಲು ಡಬ್ಬಿಂಗ್ ಸಿನಿಮಾಗಳ ಬಗ್ಗೆ ಮತ್ತು ಇಂದಿನ ಸ್ಥಿತಿ ಗತಿ ಬಗ್ಗೆ ನೆಟ್ಟಿಗರೊಬ್ಬರು ಮಾಡಿರುವ ವಿಡಿಯೋಗೆ ನಟ ಜಗ್ಗೇಶ್ ಅವರು ಈ ರೀತಿ ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಪುನೀತ್ ‘ಜೇಮ್ಸ್’ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ
ಲಾರೆನ್ಸ್ ಕೈಹಿಡಿದ ಬಾಲಿವುಡ್ “ಲಕ್ಷ್ಮೀ”..!
ಸೆಪ್ಟೆಂಬರ್ ನಲ್ಲಿ ಮದುವೆ, ನವೆಂಬರ್ ನಲ್ಲಿ ಪೂನಂ ಗರ್ಭಿಣಿಯಂತೆ..!
jaggesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








