ವಿಶ್ವವನ್ನು ಕೊರೊನಾ ಭೀತಿ ಕಾಡುತ್ತಿದೆ, ಈ ಹಿನ್ನೆಲೆಯಲ್ಲಿ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಜೊತೆಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನೆಯಿಂದ ಹೊರ ಬರಬೇಡಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದರು. ಆದರೂ ಕೆಲ ಕಡೆ ಜನ ಸಾಮಾನ್ಯರು ಮನೆಯಿಂದ ಹೊರ ಬರುತ್ತಿದ್ದಾರೆ. ಇತಂಹ ಸಮಯದಲ್ಲಿ ಮೈಸೂರು ಮೂಲದ ಅನುಶ್ರೀ ಎಂಬುವವರು ಇಟಲಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದಕ್ಕೆ ಏನಾಗಿದೆ ಎಂದು ಎಚ್ಚರಿಸಿದ್ದಾರೆ. ನಮ್ಮ ದೇಶಕ್ಕೂ ಇಟಲಿ ಪರಿಸ್ಥಿತಿ ಬರುವುದು ಬೇಡ ಎಂದು ಎಚ್ಚರಿಸಿದ ಅವರು, ಇಟಲಿಯ ಜನರು ಲಾಕ್ ಡೌನ್ ನಿಯಮ ಪಾಲಿಸಿಲ್ಲ. ಬಂದ್ ಆದರೂ ಸಹ ಮನೆಯಿಂದ ಹೊರ ಬಂದ್ರು, ಬೇರೆ ಊರಿಗೆ ಹೋಗಿದ್ದರು. ಅದಕ್ಕಾಗಿ ಇಂದು ಇಟಲಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆದಿದೆ. ಇನ್ನೂ ನಾನು ಒಂದು ತಿಂಗಳಿಂದ ಮನೆಯಿಂದ ಹೊರ ಹೋಗಿಲಿಲ್ಲ. ಅಗತ್ಯ ವಸ್ತುಗಳನ್ನು ಪಡೆಯಲು ವಾರಕ್ಕೆ ಒಮ್ಮೆ ಮನೆಯ ಒಬ್ಬ ಸದಸ್ಯರು ಮಾತ್ರ ಹೊರ ಹೋಗಬಹುದು. ಆದ್ದರಿಂದ ಅಗತ್ಯ ವಸ್ತಗಳಿಗೆ ಕೊರತೆ ಇಲ್ಲ ಎಂದು ಅನುಶ್ರೀ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಂಜಿನಿಯರ್ ಹುದ್ದೆಗಳ...








