bs yadiyurappa
ಸಂಪುಟ ಸರ್ಕಸ್ಸೋ..ನಾಯಕತ್ವ ಬದಲಾವಣೆಯೋ; ದಿಲ್ಲಿಯಿಂದ ಪಟ್ಟಿ ಬರಬೇಕು ಎಂದಿದ್ದೇಕೆ ಬಿಎಸ್‍ವೈ..!
ಬೆಂಗಳೂರು: ರಾಜ್ಯ ಸಚಿವ ವಿಸ್ತರಣೆ ಅಥವಾ ಪುನಾರಚನೆಗೆ ಕೈಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಹೈಕಮಾಂಡ್ ಕೊಡುವ ಗ್ರೀನ್ ಸಿಗ್ನಲ್ ಹಗೂ ಪಟ್ಟಿಗಾಗಿ ಎದುರು ನೋಡುತ್ತಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಸಂಭವನೀಯರ ಪಟ್ಟಿ ಕೊಟ್ಟು ಬೆಂಗಳೂರಿಗೆ ವಾಪಸ್ಸಾಗಿರುವ ಸಿಎಂ ಯಡಿಯೂರಪ್ಪ, ದೆಹಲಿಯಿಂದ ಪಟ್ಟಿ ಬಂದ ಬಳಿಕವೇ ಮುಂದಿನ ಪ್ರಕ್ರಿಯೆ ಪ್ರಾರಂಭಿಸಬಹುದು ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರ ಜತೆ ಚರ್ಚಿಸಿ ಬಂದಿದ್ದೇನೆ. ಎರಡು, ಮೂರು ದಿನಗಳಲ್ಲಿ ದೆಹಲಿಯಿಂದ ಪಟ್ಟಿ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಹಲವಾರು ಮಹಿಳಾ ನಾಯಕಿಯರಿಗೆ ಉಡುಪಿ ಸೀರೆ ಉಡುಗೊರೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ
ನಿನ್ನೆ ಸಂಪುಟ ವಿಸ್ತರಣೆ ಸಬಂಧ ದೆಹಲಿಗೆ ಸಿಎಂ ಯಡಿಯೂರಪ್ಪ ಹೋಗಿದ್ದರೂ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿಂದೆಯೂ ದಿಲ್ಲಿಗೆ ಹೋಗಿದ್ದ ಬಿಎಸ್‍ವೈ, ಜೆ.ಪಿ ನಡ್ಡಾ ಭೇಟಿ ಮಾಡಿ ಕೇವಲ ಪಟ್ಟಿಕೊಟ್ಟು ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ ಚರ್ಚಿಸಿದ್ದಾಗಿ ಯಡಿಯೂರಪ್ಪ ಹೇಳಿದ್ದರು. ಆಗ ಅಮಿತ್ ಶಾ ಅನಾರೋಗ್ಯದ ಕಾರಣ ಬಿಎಸ್‍ವೈ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.
ಬಿಜೆಪಿ ಹೈಕಮಾಂಡ್ ನಿರುತ್ಸಾಹವೋ..ನಾಯಕತ್ವ ಬದಲಾವಣೆಯ ಮುನ್ಸೂಚನೆಯೋ..!
ಜೆ.ಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಅಂತಿಮ ಮುದ್ರೆ ಬೀಳಬೇಕೆಂದರೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡಬೇಕು. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಸರ್ಕಸ್ ಬಗ್ಗೆ ಅಮಿತ್ ಶಾ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಕಳೆದ ತಿಂಗಳು ಬಿಹಾರ ಚುನಾವಣೆ ಕಾರಣ ಅಮಿತ್ ಶಾ ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಈಗ ಆರ್.ಆರ್ ನಗರ, ಶಿರಾ ಕ್ಷೇತ್ರದಲ್ಲೂ ಬಿಎಸ್‍ವೈ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮುನಿರತ್ನ ಸೇರಿದಂತೆ ಕೆಲ ಶಾಸಕರಿಂದ ಸಂಪುಟ ಸೇರಲು ಒತ್ತಡವೂ ಹೆಚ್ಚುತ್ತಿದೆ. ಆದರೂ, ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಬೆಳವಣಿಗೆ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಮತ್ತೊಂದು ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಯಡಿಯೂರಪ್ಪ ಕಾದು ಕುಳಿತಿದ್ದರೂ, ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡದೆ ಸುಮ್ಮನಿರುವುದು ನಾಯಕತ್ವ ಬದಲಾವಣೆಯ ಮುನ್ಸೂಚನೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿದ ಮೇಲೆಯೇ ಮುಂದಿನ ಹೆಜ್ಜೆ ಇಡೋಣ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿರಬಹುದು. ಹೀಗಾಗಿ ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕಸರತ್ತಿಗೆ ಹೈಕಮಾಂಡ್ ಮಣೆ ಹಾಕುತ್ತಿಲ್ಲ ಎನ್ನಲಾಗುತ್ತಿದೆ.
ಮತ್ತೊಂದು ವಿಚಾರ ಗಮನಿಸಲೇಬೇಕೆಂದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರು ಬಿ.ಎಲ್ ಸಂತೋಷ್ ಸುಳಿವೇ ಸಿಗದಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಪ್ ಆಧಾರಿತ ಹೊಯ್ಸಳ ಕ್ಯಾಬ್ ಸೇವೆಗೆ ಚಾಲನೆ
ಗೃಹ ಕಚೇರಿ ಕೃಷ್ಣಾದಲ್ಲಿ `ಹೊಯ್ಸಳ ಕ್ಯಾಬ್’ ಸೇವೆಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕನ್ನಡತಿ ಸುಧಾ ಉಮಾಶಂಕರ್ ಅವರು ಆಪ್ ಆಧಾರಿತ ಹೊಯ್ಸಳ ಕ್ಯಾಬ್ ಸೇವೆ ಆರಂಭಿಸಿರುವುದು ಸ್ವಾಗತಾರ್ಹ. ಈವರೆಗೂ ನಗರಗಳಿಗೆ ಸೀಮಿತವಾಗಿದ್ದ ಆಪ್ ಆಧಾರಿತ ಕ್ಯಾಬ್ ಸೇವೆ ಇನ್ನು ಮುಂದೆ ರಾಜ್ಯದ ಎಲ್ಲ ಭಾಗಕ್ಕೂ ದೊರೆಯಲಿದೆ. 5 ಸಾವಿರ ಕ್ಯಾಬ್ ಸೇವೆಯಿಂದ 5 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸುಧಾ ಉಮಾಶಂಕರ್, ವಿದೇಶ ಹಾಗೂ ಹೊರ ರಾಜ್ಯದ ಕ್ಯಾಬ್ ಸಂಸ್ಥೆಗಳಿವೆ. ಇಲ್ಲಿಯೂ ಒಂದು ಕ್ಯಾಬ್ ಸಂಸ್ಥೆ ಇರಬೇಕು. ಬೇರೆ ಕಂಪನಿಗಳು ಹೆಚ್ಚಿನ ದರದಲ್ಲಿ ಸೇವೆ ಒದಗಿಸುತ್ತಿವೆ. ಕೆಲವರಿಗೆ ಭಾಷೆಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ನಮ್ಮ ರಾಜ್ಯದ್ದೇ ಒಂದು ಕ್ಯಾಬ್ ಸಂಸ್ಥೆ ಇರಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ. ನನ್ನ ಕನಸು ಈಗ ನನಸಾಗಿದೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಿಂದ ಯೋಜನೆ ರೂಪಿಸಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುತ್ತಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲ ಸೂಚಿಸಿರುವುದು ಸಂತಸ ತಂದಿದೆ. ಡಿಸೆಂಬರ್ ಮೊದಲ ವಾರದಿಂದ ಕ್ಯಾಬ್ ಸೇವೆ ಕಾರ್ಯಾರಂಭವಾಗಲಿದೆ ಎಂದು ಹೇಳಿದರು.
bs yadiyurappa
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel