ದಾವಣಗೆರೆ: ವಿದ್ಯಾಗಮ ಯೋಜನೆಯನ್ನು ಕೆಲವರು ಸಾಯಿಸುವ ಪ್ರಯತ್ನ ಮಾಡಿದರು. ಯೋಜನೆ ಈಗ ತಾತ್ಕಾಲಿಕ ಸ್ಥಗಿತವಾಗಿದೆ ಆಗಿದೆ ಅಷ್ಟೆ. ಇನ್ನಷ್ಟು ಸುಧಾರಣೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅಮಾಧಾನ ಹೊರಹಾಕಿದ್ದಾರೆ.
ದಾವಣಗೆರೆ ತಾಲೂಕು ಮಾಗನಹಳ್ಳಿ ಗ್ರಾಮದಲ್ಲಿ ಗ್ರಾಮ ಒನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆಯಲ್ಲಿ ತೊಂದರೆ ಏನೂ ಆಗಿಲ್ಲ, ತಾಂತ್ರಿಕ ತೊಂದರೆ ಆಗಿದೆ, ಎಲ್ಲ ಸರಿ ಹೋಗಲಿದೆ ಎಂದರು.
ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿದ್ದೇವೆ. ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿ ಸಿಎಂ ಜೊತೆ ಶೀಘ್ರದಲ್ಲಿ ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆಗಳನ್ನು ಆರಂಭಿಸಿಲು ಇನ್ನೂ ಸಮಯಾಕಾಶ ಇದೆ. ಪರಿಸ್ಥಿತಿ ಅವಲೋಕನ ಮಾಡಿ ನೋಡುತ್ತೇವೆ. ಸದ್ಯ ಪದವಿ ಕಾಲೇಜುಗಳು ಪ್ರಾರಂಭ ಆಗಿದೆ. ಆದರೆ ಮಕ್ಕಳ ಆರೋಗ್ಯ ಮುಖ್ಯ, ಪ್ರತಿದಿನದ ಸ್ಥಿತಿ ಗಮನಿಸುತ್ತಿದ್ದೇವೆ. ಆರೋಗ್ಯ ಇಲಾಖೆ ಜೊತೆ ಮಾತಾಡಿದ್ದೇವೆ ಎಂದರು.
ಸಕಾಲ ಅಥವಾ ಗ್ರಾಮ ಓನ್ ಕೇಂದ್ರಗಳಲ್ಲಿ ಕೇವಲ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ಇದ್ದಾರೆ ಎಂಬುದಕ್ಕೆ ಉತ್ತರಿಸಿದ ಅವರು, ಸರ್ಕಾರಿ ಯೋಜನೆಗಳನ್ನ ರಾಜಕೀಯಕರಣ ಮಾಡಬೇಡಿ. ಬದಲಿಗೆ ಎಲ್ಲರೂ ಕೂಡ ಅದನ್ನ ಮಾಡುತ್ತಿದ್ದಾರೆ. ಗ್ರಾಮ ಒನ್‍ಗೆ ಆಯ್ಕೆ ಮಾಡುವಾಗ ಅವರ ವಿದ್ಯಾರ್ಹತೆ ನೋಡುತ್ತೇವೆ. ಇದರಲ್ಲಿ ಯಾರು ಕೂಡಾ ಆರ್ ಎಸ್‍ಎಸ್, ಬಿಜೆಪಿ ಇಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ವಿದ್ಯಾಗಮ ಯೋಜನೆ ಸ್ಥಗಿತ
ಲಾಕ್‍ಡೌನ್ ನಂತರ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳು ತೆರೆಯದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳು ಪಾಠ-ಪ್ರವಚನದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ಆರಂಭಿಸಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅವರ ಬಳಿಯೇ ಹೋಗಿ ಪಾಠ ಹೇಳಿಕೆಕೊಡುವ ಪ್ರಯತ್ನ ನಡೆಸಿತ್ತು.
ಸುಮಾರು ಒಂದು ತಿಂಗಳು ಸುಗಮವಾಗಿ ಯೋಜನೆ ನಡೆದಿತ್ತು. ಆದರೆ, ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾಗಮ ಪಾಠ ಕೇಳುತ್ತಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಜತೆಗೆ ಕೊರೊನಾಗೆ ನೂರಾರು ಶಿಕ್ಷಕರು ಬಲಿಯಾದ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಶಿಕ್ಷಣ ಇಲಾಖೆಯ ಈ ಮಹತ್ವದ ಯೋಜನೆ ಬಗ್ಗೆ ಷಡ್ಯಂತ್ರ್ಯ ನಡೆದಿರಬಹುದು, ಕೆಲ ಮಾಫಿಯಾ ಕೊರೊನಾ ನೆಪವೊಡ್ಡಿ ಯೋಜನೆ ಸ್ಥಗಿತಗೊಳ್ಳಲು ಕಾರಣವಾಯಿತೇ ಎಂಬ ಅನುಮಾನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆಯಲ್ಲಿ ಕಾಣುತ್ತಿದೆ.
ಹಾಗಾದರೆ, ವಿದ್ಯಾಗಮ ಯೋಜನೆ ಸ್ಥಗಿತದ ಹಿಂದೆ ಷಡ್ಯಂತ್ರ್ಯ ನಡೆಸಿದವರು ಯಾರು ? ಎಂಬ ಸತ್ಯವನ್ನು ಸರ್ಕಾರವೇ ಬಹಿರಂಪಡಿಸಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel