rishabh
ರಿಷಬ್ ಶೆಟ್ಟಿ ಸಿನಿಮಾರಗಕ್ಕೆ ಬರಲು ಈ ಖ್ಯಾತ ನಟರೇ ಸ್ಪೂರ್ತಿಯಂತೆ..!
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಸಿನಿಮಾಗಳು, ವಿಭಿನ್ನ ನಟೆ ಮೂಲಕ ನಿರ್ದೇಶನ ನಟನೆ ಎರಡರಲ್ಲೂ ಸಖತ್ ಬ್ಯುಸಿಯಾಗಿರುವವರು ರಿಷಬ್ ಶೆಟ್ಟಿ. ಸದ್ಯ ಚಂದನವನಕ್ಕೆ ಪಾದಾರ್ಪಣೆ ಮಾಡಲು ರಿಷಬ್ ಶೆಟ್ಟಿಗೆ ಕನ್ನಡದ ಹಿರಿಯ ಖ್ಯಾತ ನಟರೊಬ್ಬರು ಸ್ಪೂರ್ತಿಯಂತೆ. ಈ ಬಗ್ಗೆ ಖುದ್ದು ರಿಷಬ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ.
ಹೌದು ತಮ್ಮ ಪ್ರತಿಭೆಯಿಂದಲೇ ಚಿತ್ರರಂಗಕ್ಕೆ ಎಂಟ್ರಿಯಾಗಿ , ಕಷ್ಟ ಪಟ್ಟು ದುಡಿದು ಜನಮನಗೆದ್ದ ನವರಸ ನಾಯಕ ಜಗ್ಗೇಶ್ ಅವರು ರಿಷಬ್ ಶೆಟ್ಟಿಗೆ ಸ್ಪೂರ್ತಿಯಂತೆ. ಅಂದ್ಹಾಗೆ ಜಗ್ಗೇಶ್ ಅವರ ಕಲಾಸೇವೆಗೆ ಸಿನಿಮಾರಂಗದಲ್ಲಿ 40 ವರ್ಷಗಳು ಪೂರೈಕೆಯಾದ ಹಿನ್ನೆಲೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ. ಅದರಂತೆಯೇ ರಿಷಬ್ ಶೆಟ್ಟಿ ಸಹ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.
‘ಪ್ರೀತಿಯ ಜಗ್ಗಣ್ಣ, ನಾನು ಚಿತ್ರರಂಗಕ್ಕೆ ಬರಲು ಮೂಲ ಪ್ರೇರಣೆಗಳಲ್ಲಿ ನೀವೂ ಒಬ್ಬರು. 40 ವರ್ಷಗಳಿಂದ ನವರಸಗಳನ್ನುಣಿಸುತ್ತಾ ಬಂದಿದ್ದೀರಿ ಆದರೇ ನಮ್ಮ ಹಸಿವು ಇನ್ನೂ ನೀಗಿಲ್ಲ, ನಮ್ಮನ್ನು ಹೀಗೆಯೇ ಮನರಂಜಿಸುತ್ತಾ ಇರಿ’ ಎಂದು ಹೇಳಿದ್ದಾರೆ.
ಲಾಕ್ ಡೌನ್ ಬಳಿಕ ತೆರೆಗಪ್ಪಳಿಸಿದ ಮೊದಲ ಸಿನಿಮಾ ‘ಆಕ್ಟ್ 1978’
ಇನ್ನೂ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನವರಸ ನಾಯಕ ‘ಶ್ರದ್ಧಾವಾನ್ ಲಭತೆ ಜ್ಞಾನಂ. ನಿಮ್ಮ ಶ್ರದ್ಧೆ ನಿಮ್ಮ ಕೈ ಹಿಡಿದಿದೆ, ನಿಮ್ಮ ಯಶಸ್ಸಿನ ಕಾಡ್ಗಿಚ್ಚಿಗೆ ನಾನು ಕಿಡಿಯಾಗಿದ್ದರೆ ನನಗೆ ಅದೆ ವಿಶ್ವಮಟ್ಟದ ಪಾರಿತೋಷಕ. ಧನ್ಯವಾದ ಸಹೋದರ’ ಎಂದಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಷನ್ ಜೊತೆಗೆ ನಟನೆಯಲ್ಲೂ ತೊಡಗಿದ್ದಾರೆ. ‘ಹರಿಕತೆ ಅಲ್ಲ ಗಿರಿ ಕತೆ’ ಸಿನಿಮಾದಲ್ಲಿ ನಟಿಸುತ್ತಿರುವ ರಿಷಬ್ ‘ಗರುಡಗಮನ ವೃಷಭವಾಹನ ‘ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಇತ್ತ ಸದ್ಯದಲ್ಲೇ ಬೆಲ್‌ಬಾಟಂ 2 ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾದಲ್ಲೂ ರಿಷಬ್ ಮಿಂಚಲಿದ್ದಾರೆ. ಇದರ ಹೊರತಾಗಿ ರುದ್ರಪ್ರಯಾಗ, ಕಿರಿಕ್ ಪಾರ್ಟಿ 2 ಸಿನಿಮಾಗೂ ಆಕ್ಷನ್ ಕಟ್ ಹೇಳು ರೆಡಿಯಾಗ್ತಾಯಿದ್ದಾರೆ.
rishabh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








