ವಿಜಯಪುರ: ಮರಾಠಾ ಪ್ರಾಧಿಕಾರ ವಿರೋಧಿಸಿ ಡಿಸೆಂಬರ್ 5 ರಂದು ಕನ್ನಡ ಹೋರಾಟಗಾರ ಬಂದ್ ಕರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ನಕಲಿ ಹೋರಾಟಗಾರು, ರೋಲ್ ಕಾಲ್ ಹೋರಾಟಗಾರರಿಗೆ ಸಿಎಂ ಭಯಪಡಬೇಕಿಲ್ಲ. ಅವರೊಂದಿಗೆ ನಾವು ಇದ್ದೇವೆ ಎಂದು ಸಿಎಂ ಯಡಿಯೂರಪ್ಪ ಪರವಾಗಿ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.
ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಗುಮ್ಮಟನಗರಿಯಲ್ಲಿ ಅದ್ಹೇಗೆ ಬಂದ್ ಮಾಡುತ್ತಾರೋ ನೋಡೋಣ ಎಂದು ಯತ್ನಾಳ್ ಸವಾಲು ಹಾಕಿದರು.
ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ್, ಕನ್ನಡ ಪರ ಸಂಘಟನೆಗಳ ಮುಖಂಡರು ಎಷ್ಟು ಅನುದಾನ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಹೋಟೆಲಿನಲ್ಲಿ ಕುಳಿತು ಹೋಟೇಲ್ ತಮ್ಮದೆಂದು ಹೇಳುತ್ತಾರೆ ಎಂದು ಹೋರಾಟಗಾರರ ವಿರುದ್ಧ ಕಿಡಿಕಾರಿದರು. ಇನ್ನು ಸಿಎಂ ಏನಾದರೂ ಮಾರಾಠಾ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ ಎಂದು ಯತ್ನಾಳ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಶಿವಾಜಿ ಮಹಾರಾಜರು ಕಾರಣರು, ಅವರು ಇಲ್ಲದೇ ಹೋದ್ರೆ ಇಷ್ಟೊತ್ತಿಗೆ ಭಾರತ ಪಾಕಿಸ್ತಾನ ಪಾಲಿಗುತ್ತಿತ್ತು ಎಂದಿದ್ದಾರೆ.
ಸರ್ಕಾರ ಮರಾಠಿ ಅಭಿವೃದ್ಧಿ ನಿಗಮ ಮಾಡಿಲ್ಲ, ಮರಾಠ ಸಮುದಾಯದ ಅಭಿವೃದ್ಧಿ ನಿಗಮ ಮಾಡಿದ್ದಾರೆ. ಛತ್ರಪತಿ ಶಿವಾಜಿ ಅವರಂತಹ ಮಹಾನ್ ನಾಯಕನನ್ನು ಕೊಟ್ಟಂತಹ ಸಮುದಾಯ ಮರಾಠಿ ಸಮುದಾಯ. ಶಿವಾಜಿ ಮಹಾರಾಜರ ತಂದೆ ಬೆಂಗಳೂರಿನ ಸರದಾರರಾಗಿದ್ದರು. ಅಂದು ಬೆಂಗಳೂರನ್ನು ಕಂಟ್ರೋಲ್ ಮಾಡುತ್ತಿದ್ದದ್ದೇ ಮರಾಠರು. ಬೆಂಗಳೂರು ಆದಿಲ್ ಶಾಹಿ ನಿಯಂತ್ರಣದಲ್ಲಿತ್ತು. ಆಗ ಶಹಾಜಿ ರಾಜರು ಬೆಂಗಳೂರನ್ನು ಆಳುತ್ತಿದ್ದರು.
ಮರಾಠಿ ಸಮುದಾಯ ಹಿಂದೂ ಪರ, ಹಿಂದೂಧರ್ಮದ ಪರವಾಗಿ, ದೇಶದ ಪರವಾಗಿ ಹೋರಾಟ ಮಾಡಿದ ಕ್ಷತ್ರಿಯ ಸಮಾಜ. ಹೀಗಾಗಿ ಸರ್ಕಾರ ಕಾನೂನಾತ್ಮಕವಾಗಿ ಆ ಸಮುದಾಯಕ್ಕೆ ಏನೇನು ಕೊಡಬೇಕೋ ಅದನ್ನು ಕೊಡಬೇಕು. ಮರಾಠಿ ಭಾಷೆ ಬಗ್ಗೆ ನನ್ನ ವಿರೋಧವಿದೆ. ಎಂಇಎಸ್, ಶಿವಸೇನೆ, ಅಜಿತ್ ಪವಾರ್ ವಿರೋಧಿಸುತ್ತೇನೆ. ಕರ್ನಾಟಕದ ಮೈಸೂರು, ಬೀದರ್, ವಿಜಯಪುರ, ದಾವಣಗೆರೆಯಲ್ಲೂ ಮರಾಠರಿದ್ದಾರೆ ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel