ಕೋವಿಡ್-19 ಲಸಿಕೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಂದ ಹೊಸ ಘೋಷಣೆ
Harsh Vardhan big announcement
ಹೊಸದಿಲ್ಲಿ, ನವೆಂಬರ್21: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಗಗನಕ್ಕೇರುತ್ತಿದೆ. Harsh Vardhan big announcement
ಎಲ್ಲರ ಕಣ್ಣುಗಳು ಈಗ ಕೋವಿಡ್-19 ಲಸಿಕೆಯ ಮೇಲೆ ಇದ್ದು, ಭಾರತದಲ್ಲಿ ಲಸಿಕೆ ಯಾವಾಗ ಲಭ್ಯವಾಗುತ್ತದೆ? ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.
ಇದೀಗ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್, ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಘೋಷಣೆಯನ್ನು ಮಾಡಿದ್ದಾರೆ.
ಜೂನ್ 2021 ರ ವೇಳೆಗೆ ಸರ್ಕಾರವು ಸುಮಾರು 25-30 ಕೋಟಿ ಜನರಿಗೆ ಲಸಿಕೆ ನೀಡಲಿದೆ ಎಂದು ಡಾ.ಹರ್ಷ್ ವರ್ಧನ್ ಹೇಳಿದ್ದಾರೆ. ಕೋಲ್ಡ್ ಚೈನ್ ಅವಶ್ಯಕತೆಗಳು ಮತ್ತು ಲಾಜಿಸ್ಟಿಕ್ಸ್ ಬಗ್ಗೆ ವಿವರಗಳನ್ನು ಈಗಾಗಲೇ ಹಾಕಲಾಗಿದೆ. ಫೆಬ್ರವರಿ-ಮಾರ್ಚ್ ವೇಳೆಗೆ ಲಸಿಕೆಯ ಬಗ್ಗೆ ಒಳ್ಳೆಯ ಸುದ್ದಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ಲಸಿಕೆಗಳು ಅಭಿವೃದ್ಧಿಯ ಹಂತದಲ್ಲಿದ್ದು, ಅದರಲ್ಲಿ 30 ಲಸಿಕೆಗಳು ಭಾರತದಾಗಿದೆ. ಇವುಗಳಲ್ಲಿ 5 ಮುಂಗಡ ಹಂತದಲ್ಲಿದ್ದು, ಅವುಗಳಲ್ಲಿ 2 ಕ್ಲಿನಿಕಲ್ ಪ್ರಯೋಗದ ಮೂರನೇ ಹಂತದಲ್ಲಿವೆ. 2021 ರ ಆರಂಭದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹರ್ಷ್ ವರ್ಧನ್ ಹೇಳಿದ್ದಾರೆ.
ಅಹಮದಾಬಾದ್ ಕೋವಿಡ್-19 ಪ್ರಕರಣಗಳ ಹಠಾತ್ ಏರಿಕೆ – ಇಂದು ರಾತ್ರಿಯಿಂದ ಸೋಮವಾರದವರೆಗೆ ಕರ್ಫ್ಯೂ
ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಖಂಡಿತವಾಗಿಯೂ ಆತಂಕಕಾರಿ ಎಂದು ಡಾ.ಹರ್ಷ್ ವರ್ಧನ್ ಹೇಳಿದ್ದಾರೆ ಮತ್ತು ಅದನ್ನು ತಡೆಗಟ್ಟಲು ಸರ್ಕಾರ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ ಎಂದು ಪ್ರತಿಪಾದಿಸಿದರು. ದೆಹಲಿ ರಾಷ್ಟ್ರ ರಾಜಧಾನಿ ಮತ್ತು ಇಲ್ಲಿನ ಪರಿಸ್ಥಿತಿ ಖಂಡಿತವಾಗಿಯೂ ನಮಗೆ ಚಿಂತೆ ಉಂಟುಮಾಡುತ್ತದೆ. ರಾಜಧಾನಿಯಲ್ಲಿ ಪರಿಸ್ಥಿತಿ ಹದಗೆಟ್ಟರೆ ಅದು ನಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮಾರಣಾಂತಿಕ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಜನರು ಮುಂಜಾಗ್ರತೆ ವಹಿಸುವುದು ಮುಖ್ಯ ಎಂದು ಸಚಿವರು ಒತ್ತಿ ಹೇಳಿದರು. 10-11 ತಿಂಗಳ ನಂತರ ಜನರು ಸೋಂಕನ್ನು ನಿಭಾಯಿಸಬಹುದೆಂದು ಯೋಚಿಸುತ್ತಿದ್ದಾರೆಂದು ತೋರುತ್ತಿದೆ. ಕೆಲವರು ಕೊರೋನಾ ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಂಬಲು ಪ್ರಾರಂಭಿಸಿದ್ದು, ಇದು ದುರದೃಷ್ಟಕರ ಎಂದು ಹರ್ಷ್ ವರ್ಧನ್ ಹೇಳಿದರು.
ವಿವಿಧ ಲಸಿಕೆಗಳು
ಸೀರಮ್ ಸಂಸ್ಥೆಯ ಆಕ್ಸ್‌ಫರ್ಡ್ ಲಸಿಕೆಯ ಹಂತ -3 ಪ್ರಯೋಗ ಬಹುತೇಕ ಪೂರ್ಣಗೊಂಡಿದೆ. ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಲಸಿಕೆಯ ಹಂತ -3 ಕ್ಲಿನಿಕಲ್ ಪ್ರಯೋಗವು ಈಗಾಗಲೇ ಪ್ರಾರಂಭವಾಗಿದೆ.
ಕೋವಿಡ್-19 ಅನ್ನು ತಡೆಗಟ್ಟುವಲ್ಲಿ ತಮ್ಮ ಲಸಿಕೆಯು ಶೇಕಡಾ 95 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಫಿಜರ್ ಇಂಕ್ ಮತ್ತು ಬಯೋಟೆಕ್ ಎಸ್ಇ ತಿಳಿಸಿವೆ.
ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಶೀಘ್ರದಲ್ಲೇ ರಷ್ಯಾದ ಕೋವಿಡ್-19 ಲಸಿಕೆ, ಸ್ಪುಟ್ನಿಕ್ ವಿ ಯ ಸಂಯೋಜಿತ ಹಂತ 2 ಮತ್ತು 3 ಕ್ಲಿನಿಕಲ್ ಪ್ರಯೋಗಗಳನ್ನು ಭಾರತದಲ್ಲಿ ಪ್ರಾರಂಭಿಸಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೂರ್ಯನ ಬೆಳಕಿನ 7 ಸೂಪರ್ ಸೀಕ್ರೆಟ್ ಆರೋಗ್ಯ ಪ್ರಯೋಜನಗಳು https://t.co/vNF9KldJfl
— Saaksha TV (@SaakshaTv) November 20, 2020
ಪಾಕ್ ಭಯೋತ್ಪಾದಕ ಲಾಂಚ್ಪ್ಯಾಡ್ಗಳ ಮೇಲೆ ಭಾರತದ ಪಿನ್ಪಾಯಿಂಟ್ ಸ್ಟ್ರೈಕ್https://t.co/5w1CUgca2A
— Saaksha TV (@SaakshaTv) November 20, 2020